ಮಾತೃಭಾಷೆ ಮಾತನಾಡುತ್ತಿಲ್ಲ ಎಂದು 6 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ

Published : Dec 27, 2025, 09:02 PM IST

ಮಾತೃಭಾಷೆ ಮಾತನಾಡುತ್ತಿಲ್ಲ ಎಂದು 6 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ ಮಗಳ ಹತ್ಯೆಗೆ ಕಾರಣ ಇದಲ್ಲ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

PREV
15
ಭಾಷೆಗಾಗಿ ಮಗಳನ್ನೇ ಹತ್ಯೆ

ಭಾಷೆ ವಿಚಾರ ಭಾರಿ ಗದ್ದಲ, ವಿವಾದ ಸೃಷ್ಟಿಸಿದೆ. ಪ್ರತಿಭಟನೆ, ಹೋರಾಟಗಳ ಮೂಲಕ ಹಿಂಸಾಚಾರವೂ ನಡೆದಿದೆ. ಹಲವು ಬಲಿಯಾಗಿದ್ದಾರೆ. ಭಾಷೆ ಕುರಿತು ಹೋರಾಟಗಳು ಕನ್ನಡಿಗರಿಗೆ ಸ್ಪಷ್ಟವಾಗಿ ತಿಳಿದಿದೆ. ಕನ್ನಡ ಉಳಿಸಿ, ಬೆಳೆಸಲು ಹಲವು ದಶಕಗಳಿಂದ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಭಾಷಾ ವಿಚಾರಕ್ಕಾಗಿ ತಾಯಿ ತನ್ನ 6 ವರ್ಷದ ಮಗಳನ್ನೇ ಹತ್ಯೆಗೈದ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

25
ಅಜ್ಜಿ ಮನೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ

ನವಿ ಮುಂಬೈನ ಕಲಂಬೋಲಿ ವಾಸಿಗಳಾಗಿದ್ದ ಕುಟುಂಬಕ್ಕೆ ಇಬ್ಬರು ಮಕ್ಕಳು. ಈ ಪೈಕಿ 6 ವರ್ಷದ ಮಗಳನ್ನು ತಾಯಿ ಹೈತ್ಯೆ ಮಾಡಿದ್ದಾಳೆ. ಬಾಲಕಿಯ ಅಜ್ಜಿ ಮನೆಗೆ ಭೇಟಿ ನೀಡಿದಾಗ ಬಾಲಕಿ ಬೆಡ್ ಮೇಲೆ ಅಸ್ವಸ್ಥಗೊಂಡು ಬಿದ್ದಿರುವಂತೆ ಪತ್ತೆಯಾಗಿದ್ದಾಳೆ. ಅಜ್ಜಿ ಕರೆದರೂ ಬಾಲಕಿಯಿಂದ ಯಾವುದೇ ಸ್ಪಂದನೆ ಇರಲಿಲ್ಲ. ಉಸಿರು ಪರಿಶೀಲಿಸಿದ ಅಜ್ಜಿಗೆ ಆಘಾತವಾಗಿದೆ. ತಕ್ಷಣವೇ ಕಿರುಚಾಡಿ ಆಟೋ ಮೂಲಕ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

35
ಹೃದಯಾಘಾತದ ಕತೆ ಕಟ್ಟಿದ ತಾಯಿ

ಬಾಲಕಿಗೆ ಹೃದಯಾಘಾತವಾಗಿ ಎಂದು ಬಾಲಕಿ ತಾಯಿ ಆಸ್ಪತ್ರೆಯಲ್ಲಿ ಹೇಳಿದ್ದಾಳೆ. ಆದರೆ ಅಜ್ಜಿ ಮಾತ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ವರದಿ ಅಚ್ಚರಿ ನೀಡಿದೆ.

45
ಉಸಿರುಗಟ್ಟಿಸಿ ಬಾಲಕಿ ಕೊಲೆ

ತಾಯಿ ಉಸಿರುಗಟ್ಟಿಸಿ ಬಾಲಕಿಯನ್ನು ಹತ್ಯೆಗೈದಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಹೀಗಾಗಿ ಪೊಲೀಸರು ಬಾಲಕಿ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಹಲವು ಬಾರಿ ತಾಯಿ ಹೇಳಿಕೆ ಬದಲಾಯಿಸಿದ್ದಾಳೆ.

ಉಸಿರುಗಟ್ಟಿಸಿ ಬಾಲಕಿ ಕೊಲೆ

55
ಮರಾಠಿ ಮಾತನಾಡುತ್ತಿಲ್ಲ, ಅದಕ್ಕೆ ಕೊಂದೆ

ನನ್ನ ಮಗಳು ಮರಾಠಿ ಮಾತನಾಡುತ್ತಿಲ್ಲ, ಅದಕ್ಕೆ ಹತ್ಯೆ ಮಾಡಿದ್ದೇನೆ ಎಂದಿದ್ದಾಳೆ. ಆದರೆ ಪೊಲೀಸರು ಈಕೆಯ ಕಾರಣ ಒಪ್ಪಿಲ್ಲ. ಕುಟುಂಬದ ವಿಚಾರಣೆ ವೇಳೆ ಈಕೆ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾಳೆ ಎಂಬುದು ಬಯಲಾಗಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಮರಾಠಿ ಮಾತನಾಡುತ್ತಿಲ್ಲ, ಅದಕ್ಕೆ ಕೊಂದೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories