ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!

Published : Dec 11, 2025, 10:27 PM IST

ರೈಲ್ವೆ ಇಲಾಖೆಯು 'ರೈಲ್ ಒನ್' ಎಂಬ ಹೊಸ ಆ್ಯಪ್​ ಅನ್ನು ಬಿಡುಗಡೆ ಮಾಡಿದೆ. ಈ ಒಂದೇ ಆ್ಯಪ್​ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್, ರೈಲಿನ ಲೈವ್ ಸ್ಟೇಟಸ್, ಪಿಎನ್‌ಆರ್ ಸ್ಥಿತಿ ಸೇರಿದಂತೆ ಹಲವು ಸೇವೆಗಳನ್ನು ಸುಲಭವಾಗಿ ಪಡೆಯಬಹುದು, ಇದರಿಂದಾಗಿ ಅನೇಕ ಆ್ಯಪ್‌ಗಳನ್ನು ಬಳಸುವ ಕಿರಿಕಿರಿ ತಪ್ಪುತ್ತದೆ.

PREV
17
ಕ್ಷಿಪ್ರಗತಿಯಲ್ಲಿ ಬೆಳವಣಿಗೆ

ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವಂತೆಯೇ, ರೈಲ್ವೆ ಕ್ಷೇತ್ರದಲ್ಲಿಯೂ ಹಿಂದೆಂದೂ ಕಾಣದ ಅಗಾಧ ಪ್ರಗತಿಯಾಗುತ್ತಿದೆ. ಇದಾಗಲೇ ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

27
ಹೊಸ ಆ್ಯಪ್​ ಬಿಡುಗಡೆ

ಇದೀಗ ರೈಲ್ವೆ ಇಲಾಖೆ 'ರೈಲ್ ಒನ್' ಆ್ಯಪ್ (Rail in One app) ಬಿಡುಗಡೆ ಮಾಡಿದೆ. ಕೆಲ ತಿಂಗಳ ಹಿಂದೆ ಇದರ ಬಿಡುಗಡೆಯಾಗಿದ್ದರೂ ಬಹುತೇಕರಿಗೆ ಇದರ ಬಗ್ಗೆ ಅರಿವಿಲ್ಲದ ಹಿನ್ನೆಲೆಯಲ್ಲಿ ಈಗ ಮತ್ತಷ್ಟು ಸೌಲಭ್ಯಗಳೊಂದಿಗೆ ಈ ಆ್ಯಪ್​ ಲಭ್ಯವಿದೆ.

37
ರೈಲು ಪ್ರಯಾಣ ಈಜಿ

ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡರೆ ರೈಲು ಪ್ರಯಾಣಿಕರಿಗೆ ಹಲವಾರು ಸೌಲಭ್ಯಗಳು ಒಂದರಲ್ಲಿಯೇ ಸಿಗಲಿದೆ. ಅನೇಕ ಬಾರಿ ರೈಲುಗಳಲ್ಲಿ ಪ್ರಯಾಣಿಸುವವರು ವಿವಿಧ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡಿರುತ್ತಾರೆ. ಆದರೆ ಈ ಕಿರಿಕಿರಿಯನ್ನು ತಪ್ಪಿಸುವುದಕ್ಕಾಗಿ ಈ ಆ್ಯಪ್​ ಬಿಡುಗಡೆ ಮಾಡಲಾಗಿದೆ.

47
ಟಿಕೆಟ್​ ಬುಕ್ಕಿಂಗ್​ನಿಂದ ಹಿಡಿದು...

ಇದರಲ್ಲಿ, ಟಿಕೆಟ್ ಬುಕ್ಕಿಂಗ್, ರೈಲು ಎಲ್ಲಿದೆ ಎಂದು ತಿಳಿಯುವುದು ಸೇರಿದಂತೆ ಎಲ್ಲವೂ ಲಭ್ಯವಿದೆ. ಮಾತ್ರವಲ್ಲದೇ ಪ್ರಯಾಣಿಕರು ಕಾಯ್ದಿರಿಸದ ಟಿಕೆಟ್ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸಹ ಬುಕ್ ಮಾಡಬಹುದು. ಅಲ್ಲದೆ, ರೈಲಿನ ವೇಳಾಪಟ್ಟಿ ಮತ್ತು ಕೋಚ್ ಸ್ಥಾನವನ್ನು ಸಹ ಪರಿಶೀಲಿಸಬಹುದು.

57
ಎಲ್ಲವೂ ಇಲ್ಲಿ ಸಿಗುತ್ತೆ

ಒಟ್ಟಿನಲ್ಲಿ ಈ ಆ್ಯಪ್​ನಲ್ಲಿ ರೈಲು ಬುಕ್ಕಿಂಗ್‌ನಿಂದ ಹಿಡಿದು ಪ್ರಯಾಣ ಮುಗಿಸುವವರೆಗೂ ಪ್ರಯಾಣಿಕರಿಗೆ ಬೇಕಾದ ಎಲ್ಲಾ ಮಾಹಿತಿ, ಸೌಲಭ್ಯ, ಸೇವೆಗಳು ಸಿಗಲಿವೆ. ಹೊಸ ರೈಲ್‌ಒನ್ ಅಪ್ಲಿಕೇಶನ್ ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಆಯೋಜಿಸುತ್ತದೆ.

67
ಏನೇನು ಲಭ್ಯ?

ಐಆರ್‌ಸಿಟಿಸಿ ಕಾಯ್ದಿರಿಸಿದ ಟಿಕೆಟ್‌ ಬುಕ್ಕಿಂಗ್‌, UTS ಕಾಯ್ದಿರಿಸದ ಟಿಕೆಟ್‌ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌, ಪಿಎನ್‌ಆರ್ ಮತ್ತು ರೈಲು ಸ್ಟೇಟಸ್‌ ಟ್ರ್ಯಾಕ್ ಮಾಡುವುದು, ಕೋಚ್ ಸ್ಥಾನ, ರೈಲ್ ಮದದ್ ಮತ್ತು ಟ್ರಾವೆಲ್‌ ಫೀಡ್‌ಬ್ಯಾಕ್‌ಅನ್ನೂ ಇದರ ಮೂಲಕ ನೀಡಬಹುದಾಗಿದೆ.

77
RailOne App

ಈ ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿದೆ. RailOne App ಎಂದು ಪ್ಲೇಸ್ಟೋರ್​ನಲ್ಲಿ ಸರ್ಚ್​ ಮಾಡಿ. ಫೇಕ್​ ಆ್ಯಪ್​ಗಳ ಬಗ್ಗೆ ಎಚ್ಚರವಿರಲಿ. ಈ ಚಿತ್ರದಲ್ಲಿ ತೋರಿಸಿರುವಂತೆ ಆ್ಯಪ್​ ಲಭ್ಯವಿರುತ್ತದೆ.

Read more Photos on
click me!

Recommended Stories