Published : Feb 15, 2025, 04:25 PM ISTUpdated : Feb 15, 2025, 04:41 PM IST
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿನ್ನಾಭರಣ, ಬೆಳ್ಳಿ ಹಾಗೂ ರತ್ನ ಖಚಿತ ವಜ್ರಾಭರಣಗಳನ್ನು ಕರ್ನಾಟಕ ಸರ್ಕಾರದಿಂದ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಒಟ್ಟು 27 ಕೆಜಿ ಚಿನ್ನಾಭರಣ, ವಜ್ರಾಭರಣಗಳನ್ನು ವಾಪಸ್ ನೀಡಲಾಗಿದ್ದು, ಇದರಲ್ಲಿ 1.2 ಕೆಜಿ ತೂಕದ ಸೊಂಟದ ಡಾಬು, 1 ಕೆಜಿ ತೂಕದ ಕಿರೀಟ ಸೇರಿದಂತೆ ಹಲವು ಅಮೂಲ್ಯ ಆಭರಣಗಳಿವೆ.
ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ರತ್ನ ಖಚಿತ ವಜ್ರಾಭರಣಗಳನ್ನು ಇದೀಗ ತಮಿಳುನಾಡು ಸರ್ಕಾರಕ್ಕೆ ಒಪ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಖಜಾನೆಯಲ್ಲಿದ್ದ ಚಿನ್ನಾಭರಣವನ್ನು ತೆಗೆದಿದ್ದು, ಅದರಲ್ಲಿದ್ದ ಕೆಲವು ಆಭರಣಗಳ ಮಾದರಿ ಇಲ್ಲಿವೆ ನೋಡಿ...
28
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ಹಾಗೂ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದ್ದ ಆಸ್ತಿ ಹಾಗೂ ಚಿನ್ನಾಭರಣವನ್ನು ಇದೀಗ ಸಂಬಂಧಪಟ್ಟವರಿಗೆ ಒಪ್ಪಿಸಲಾಗುತ್ತಿದೆ.
38
ಜಯಲಲಿತಾ ಫೋಟೋ ಇರುವ ಚಿನ್ನದ ತಟ್ಟೆ:
ಕರ್ನಾಟಕದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಕಿರಣ್ ಜವಳಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಮಿಳುನಾಡು ಅಧಿಕಾರಿಗಳ ಸಮಕ್ಷಮದಲ್ಲಿ ಆಭರಣ ಓಪನ್ ಮಾಡಲಾಗಿದೆ. ಒಟ್ಟು 27ಕೆಜಿ ಚಿನ್ನಾಭರಣ, ವಜ್ರಾಭರಣ ವಾಪಸ್ ನೀಡಲಾಗಿದೆ ಎಂದು ತಿಳಿಸಿದರು.
48
ಬರೋಬ್ಬರಿ 1.2 ಕೆ.ಜಿ ಬಂಗಾರದಿಂದ ಮಾಡಿದ ಸೊಂಟದ ಡಾಬು:
1.2 ಕೆಜಿ ತೂಕದ ಸೊಂಟದ ಡಾಬು, 1 ಕೆ ಜಿ ತೂಕದ ಕಿರೀಟ, 1.5 ಕೆಜಿ ತೂಕ ಚೈನ್, ಜಯಲಲಿತಾ ಅವರ ಚಿನ್ನದ ಪೋಟೊ ಸೇರಿ ಹಲವು ಚಿನ್ನದ ಆಭರಣಗಳು ಇದರಲ್ಲಿವೆ. ಚಿನ್ನದ ಖತ್ತಿ ಹಾಗೂ ಕಿರೀಟಗಳು ಕೂಡ ಇದರಲ್ಲಿವೆ.
58
1.5 ಕೆಜಿ ತೂಕವಿರುವ ಚಿನ್ನದ ಸರ:
ಜಯಲಲಿತಾ ಅವರ ಕೇಸ್ ಅನ್ನು ಕರ್ನಾಟಕದಲ್ಲಿ ವಿಚಾರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ ಅಲ್ಲಿನ ಜನರಿಂದ ಉಂಟಾದ ಆಸ್ತಿಪಾಸ್ತಿ ನಷ್ಟ, ಭದ್ರತೆ ಸೇರಿದಂತೆ ಎಲ್ಲ ಉದ್ದೇಶಗಳಿಗೆ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರವು 5 ಕೋಟಿ ನೀಡುವಂತೆ ಆದೇಶ ಮಾಡಲಾಗಿತ್ತು.
68
ಜಯಲಲಿತಾ ಬಳಿಯಿದ್ದ ಚಿನ್ನದ ಖಡ್ಗ:
ಶಶಿಕಲಾ ಅವರ ನೀಡಿದ್ದ 20.02 ಕೋಟಿ ರೂ.ದಂಡದಲ್ಲಿ 8 ಕೋಟಿ ರೂ. ನೀಡುವಂತೆ ಆದೇಶ ಮಾಡಲಾಗಿದೆ. ಅಂದರೆ, ಜಯಲಲಿತಾಗೆ ಸಂಬಂಧಿಸಿದ ಅಕ್ರಮ ಆಸ್ತಿ ಗಳಿಕೆಯ ಕೇಸ್ ನಡೆಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಒಟ್ಟು 13 ಕೋಟಿ ರೂ. ನೀಡುವಂತೆ ಆದೇಶ ಮಾಡಲಾಗಿದೆ.
78
ಜಯಲಲಿತಾ ಅವರ ಚಿನ್ನದ ಸರ:
ಜಯಲಲಿತಾ ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿ ಮತ್ತು ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ.
88
ಗಟ್ಟಿ ಚಿನ್ನದಿಂದ ಮಾಡಲಾದ ಜಯಲಲಿತಾ ಮೂರ್ತಿ:
ತಮಿಳುನಾಡು ಸರ್ಕಾರ ಇದನ್ನು ಹರಾಜು ಮಾಡಬಹುದು. ಅಥವಾ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನೀಡಬಹುದು ಎಂದು ಕೋರ್ಟ್ ಹೇಳಿದೆ. ಕಾಂಚೀಪುರ, ತೂತುಕುಡಿ ಸೇರಿ ಹಲವೆಡೆ ಜಯಲಲಿತಾ ಹೆಸರಿನಲ್ಲಿದ್ದ ಒಟ್ಟು 1526 ಎಕರೆ ಜಮೀನು ಪತ್ರಗಳು ಇದರಲ್ಲಿವೆ. ಒಟ್ಟು 6 ಪೆಟ್ಟಿಗೆಯಲ್ಲಿದ್ದ ಚಿನ್ನದ 1600 ಆಭರಣಗಳನ್ನ ವಾಪಸ್ ನೀಡಲಾಗಿದೆ.