ತಿರುಮಲ ತಿರುಪತಿ ದೇವಸ್ಥಾನದ ಸಂಪತ್ತು ಎಷ್ಟು?
ತಿರುಮಲ ತಿರುಪತಿ ದೇವಸ್ಥಾನದ ಆಸ್ತಿಯ ಮೌಲ್ಯ ಸುಮಾರು 3,00,000 ಕೋಟಿ ರೂಪಾಯಿಗಳು ಎಂದು ವರದಿಗಳು ತಿಳಿಸಿವೆ. ಇದು ವಿಶ್ವದಲ್ಲೇ ಅತಿ ಶ್ರೀಮಂತ ಹಿಂದೂ ದೇವಸ್ಥಾನ ಮಂಡಳಿ ಎಂದು ಗುರುತಿಸಿಕೊಂಡಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ದೇವಸ್ಥಾನದ ಸಂಪತ್ತು ಮತ್ತು ಗಾತ್ರ ಹೆಚ್ಚಾಗಲು ಪ್ರಾರಂಭವಾಯಿತು. ಪ್ರಸ್ತುತ, ತಿರುಮಲ ತಿರುಪತಿ ದೇವಸ್ಥಾನವು 11,225 ಕೆಜಿ ಚಿನ್ನ, 7,600 ಎಕರೆಗೂ ಹೆಚ್ಚು ಭೂಮಿ, ದೊಡ್ಡ ಮೊತ್ತದ ಬ್ಯಾಂಕ್ ಠೇವಣಿಗಳು ಮತ್ತು 9,071.85 ಕೆಜಿ ಬೆಳ್ಳಿ ಆಭರಣಗಳನ್ನು ಹೊಂದಿದೆ.
ತಿರುಮಲ ತಿರುಪತಿಗೆ ಪ್ರತಿದಿನ ದೇಶದಿಂದ ಮಾತ್ರವಲ್ಲದೆ, ವಿಶ್ವದ ವಿವಿಧ ದೇಶಗಳಿಂದ ಭಕ್ತರು ಮತ್ತು ಯಾತ್ರಿಕರು ಭೇಟಿ ನೀಡುತ್ತಾರೆ. ತಿರುಪತಿ ವೆಂಕಟೇಶ್ವರನಿಗೆ ಸಮರ್ಪಿಸುವ ಕಾಣಿಕೆಗಳು ಮತ್ತು ದೇಣಿಗೆಗಳು ಹೇರಳವಾಗಿರುತ್ತವೆ. ಈ ದೇವಸ್ಥಾನವು ವಿಶ್ವದಲ್ಲೇ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಇದಕ್ಕೆ ಭಕ್ತರಿಂದ ಬರುವ ದೇಣಿಗೆಗಳು ಮತ್ತು ಕಾಣಿಕೆಗಳೇ ಕಾರಣ. ಈ ದೇವಸ್ಥಾನವನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ನಿರ್ವಹಿಸುತ್ತದೆ.