ಆಯೋಧ್ಯೆ ರಾಮ ಮಂದಿರ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯುತ್ತಿದೆ. ಇದೀಗ ರಾಮ ಮಂದಿರವನ್ನು ಸಂಪೂರ್ಣ ಹೂವುಗಳಿಂದ ಅಲಂಕರಿಸಲಾಗಿದೆ. ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಅಲಂಕಾರಗೊಂಡಿರುವ ಆಯೋಧ್ಯೆ ರಾಮ ಮಂದಿರದ ಭವ್ಯತೆ ಇಲ್ಲಿದೆ.
ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಹೂವುಗಳಿಂದ ಶೃಂಗಾರಗೊಂಡಿದೆ. ವನವಾಸ ಮುಗಿಸಿ ಶ್ರೀರಾಮ ಆಯೋಧ್ಯೆಗೆ ಆಗಮಿಸುವ ವೇಳೆ ಇದ್ದ ಅದೇ ಸಂಭ್ರಮ, ಸಡಗರ ಅಯೋಧ್ಯೆಯಲ್ಲಿ ಮನೆ ಮಾಡಿದೆ.
210
ಜನವರಿ 22ರಂದು ಭಗವಾನ್ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಲಿದೆ. ಇದಕ್ಕಾಗಿ ಸಂಪೂರ್ಣ ಆಯೋಧ್ಯೆಯ ರಾಮ ಮಂದಿರವನ್ನು ಹೂವುಗಳಿಂದ ಅಲಂಕರಿಸಲಾಗಿದೆ.
310
ಹೂವುಗಳಲ್ಲಿ ನವಿಲು, ಗಜರಾಜ, ಜೈಶ್ರೀರಾಮ್ ಸೇರಿದಂತೆ ಹಲವು ವಿಶೇಷ ಕಲಾಕೃತಿಗಳು ಆಯೋಧ್ಯೆ ರಾಮ ಮಂದಿರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
410
ಸ್ವಸ್ತಿಕ್,ಓಂ, ಶ್ರೀರಾಮನ ಬಿಲ್ಲು, ಕಲಷ ಸೇರಿದಂತೆ ಹಲವು ಕಲಾಕೃತಿಗಳು ಹೂವಿನಲ್ಲಿ ಮೂಡಿ ಬಂದಿದೆ. ರಾಮ ಮಂದಿರದ ಮೆಟ್ಟಿಲುಗಳಿಂದ ಹಿಡಿದು ಸಂಪೂರ್ಣ ಮಂದಿರವೇ ಹೂವಿನಿಂದ ಅಲಂಕಾರಗೊಂಡಿದೆ.
510
ಪ್ರಧಾನಿ ನರೇಂದ್ರ ಮೋದಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12.20 ರಿಂದ 12.45ರ ನಡುವೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ.
610
ಆಯೋಧ್ಯೆ ನಗರ ಸಂಪೂರ್ಣವಾಗಿ ಅಲಂಕಾರಗೊಂಡಿದೆ. ಇಡೀ ದೇಶವೇ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮದಲ್ಲಿದೆ. ನಾಳೆ ದೇಶದ ಬಹುತೇಕ ಕಡೆಗಳಲ್ಲಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರ ನಡೆಯಲಿದೆ.
710
ಜನವರಿ 22ರಂದು ಸಾರ್ವಜನಿಕರಿಗೆ ರಾಮ ಮಂದಿರ ದರ್ಶನಕ್ಕೆ ಅವಕಾಶವಿಲ್ಲ. ಜನವರಿ 23ರಿಂದ ರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿದೆ. ಇದಕ್ಕಾಗಿ ಟ್ರಸ್ಟ್ ಎಲ್ಲಾ ವ್ಯವಸ್ಥೆ ಮಾಡಿದೆ.
810
ಶೃಂಗಾರ ಆರತಿ, ಬೋಗ ಆರತಿ, ಸಂಧ್ಯಾ ಆರತಿ ಸೇರಿದಂತೆ ಪ್ರಮುಖವಾಗಿ ಆಯೋಧ್ಯೆ ರಾಮ ಮಂದಿರದ ರಾಮಲಲ್ಲಾಗೆ ಮೂರು ಆರತಿಗಳು ಪ್ರತಿ ದಿನ ನಡೆಯಲಿದೆ.
910
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಳಿ ಒಟ್ಟು 70 ಎಕರೆ ಭೂಪ್ರದೇಶವಿದೆ. ಇದರಲ್ಲಿ ರಾಮ ಮಂದಿರ, ಹನುಮಾನ್ ಗುಡಿ ಸೇರಿದಂತೆ ಹಲವು ದೇವಸ್ಥಾನಗಳಿವೆ.
1010
ಆಯೋಧ್ಯೆ ರಾಮ ಮಂದಿರ 2.7 ಏಕರೆ ಪ್ರದೇಶಲ್ಲಿ ನಿರ್ಮಾಣ ಮಾಡಲಾಗಿದೆ. ಭವ್ಯ ಮಂದಿರ ಭಾರತದ ನಾಗರೀಕತೆಯ ಪುನರುತ್ಥಾನ ಎಂದು ಕರೆಯಲಾಗುತ್ತಿದೆ.