ರಾಮಮಂದಿರ ನಿರ್ಮಾಣಕ್ಕೆ ಹೈಯೆಸ್ಟ್ ದೇಣಿಗೆ ನೀಡಿದ ಸೂಪರ್ ಸ್ಟಾರ್; ಅಮಿತಾಬ್‌, ಅಕ್ಷಯ್‌, ರಜನೀಕಾಂತ್ ಅಲ್ಲ!

First Published Jan 22, 2024, 3:30 PM IST

ದೇಶದ ಮೂಲೆ ಮೂಲೆಯಿಂದ ರಾಜಕಾರಣಿಗಳು, ಉದ್ಯಮಿಗಳು, ನಟ-ನಟಿಯರು, ಸ್ವಾಮೀಜಿಗಳು ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಆದರೆ ದಕ್ಷಿಣದ ಸೂಪರ್‌ಸ್ಟಾರ್ ಒಬ್ಬರು 30 ಲಕ್ಷ ರೂಪಾಯಿಗಳ ದೊಡ್ಡ ದೇಣಿಗೆ ನೀಡಿ ಇವರೆಲ್ಲರನ್ನೂ ಮೀರಿಸಿದ್ದಾರೆ. ಯಾರು ಆ ನಟ?

ರಾಮ ಮಂದಿರ ಪ್ರಾಣಪ್ರತಿಷ್ಠೆ  ಮೂಲಕ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಅದ್ಧೂರಿಯಾಗಿ ಅಲಂಕಾರಗೊಂಡ ಮಂದಿರದಲ್ಲಿ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ಮಂದಿರ ಲೋಕಾರ್ಪಣೆಯಾಯಿತು.

ರಾಮ ಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ 1,100 ಕೋಟಿ ರೂ. ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ಮಾಹಿತಿ ನೀಡಿದ್ದಾರೆ.

ದೇಶದ ಮೂಲೆ ಮೂಲೆಯಿಂದ ರಾಜಕಾರಣಿಗಳು, ಉದ್ಯಮಿಗಳು, ನಟ-ನಟಿಯರು, ಸ್ವಾಮೀಜಿಗಳು ಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಹಲವಾರು ರೀತಿಯ ಸೇವೆ ಸಲ್ಲಿಸಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡುವಲ್ಲಿ ಬಾಲಿವುಡ್ ನಟ-ನಟಿಯರು ಮುಂಚೂಣಿಯಲ್ಲಿದ್ದಾರೆ. 

ಅಕ್ಷಯ್ ಕುಮಾರ್, ಅನುಪಮ್ ಖೇರ್ ಮತ್ತು ಹೇಮಾ ಮಾಲಿನಿ ಮುಂತಾದವರು ಉದಾರವಾಗಿ ದೇಣಿಗೆ ನೀಡಿದ್ದಾರೆ. ಆದರೆ ದಕ್ಷಿಣದ ಸೂಪರ್‌ಸ್ಟಾರ್ ಒಬ್ಬರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂಪಾಯಿಗಳ ದೊಡ್ಡ ದೇಣಿಗೆ ನೀಡಿ ಇವರೆಲ್ಲರನ್ನೂ ಮೀರಿಸಿದ್ದಾರೆ. 

ಹೌದು, ಆ ನಟ ಮತ್ಯಾರೂ ಅಲ್ಲ ಪವನ್‌ ಕಲ್ಯಾಣ್‌. ವರದಿಗಳ ಪ್ರಕಾರ, ಕಳೆದ ತಿಂಗಳ ಕೊನೆಯಲ್ಲಿ ಪ್ರಾಣ್ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ಪವನ್ ಕಲ್ಯಾಣ್ ಇಷ್ಟು ದೊಡ್ಡ ಮೊತ್ತವನ್ನು ದಾನ ಮಾಡಿದ್ದಾರೆ. ಅಕ್ಷಯ್, ಹೇಮಾ ಮತ್ತು ಇತರ ನಟಿಯರು ಎಷ್ಟು ದೇಣಿಗೆ ನೀಡಿದ್ದಾರ ಎಂದು ತಿಳಿದುಬಂದಿಲ್ಲ.

ಅನುಪಮ್ ಖೇರ್ ಅವರು ದೇವಾಲಯದ ನಿರ್ಮಾಣದಲ್ಲಿ ಬಳಸಿದ ಇಟ್ಟಿಗೆಗಳನ್ನು ದಾನ ಮಾಡಿದ್ದಾರೆ. ಹಲವಾರು ಇತರ ತಾರೆಯರು ಕೂಡ ಸಾಕಷ್ಟು ದೇಣಿಗೆ ನೀಡಿದ್ದಾರೆ. ದಕ್ಷಿಣ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿರುವ ನಟಿ ಪ್ರಣಿತಾ ಸುಭಾಷ್ ಅವರು ಈ ತಿಂಗಳ ಆರಂಭದಲ್ಲಿ ದೇವಾಲಯಕ್ಕೆ 1 ಲಕ್ಷ ರೂ ನೀಡಿದ್ದಾರೆ. 

ಅದೇ ರೀತಿ, ಮಹಾಭಾರತದಲ್ಲಿ ಭೀಷ್ಮ ಪಾತ್ರದಲ್ಲಿ ನಟಿಸಿದ ಮುಖೇಶ್ ಖನ್ನಾ ಅವರು ಡಿಸೆಂಬರ್‌ನಲ್ಲಿ ದೇವಸ್ಥಾನಕ್ಕೆ ನಿಧಿ ಸಂಗ್ರಹದ ಭಾಗವಾಗಿ ತಮ್ಮ ಸ್ಥಳೀಯ ಶಾಸಕರಿಗೆ 1,11,111 ರೂ ಚೆಕ್ ನೀಡಿದರು. ಇಂದು ಬೆಳಗ್ಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಮತ್ತು ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು. 
 

ಹಲವಾರು ಚಲನಚಿತ್ರ ಮತ್ತು ಕ್ರೀಡಾ ತಾರೆಯರು ಕೂಡಾ ಸ್ಥಳದಲ್ಲಿ ಉಪಸ್ಥಿತರಿದ್ದರು. ಇವರಲ್ಲಿ ಅಮಿತಾಭ್ ಬಚ್ಚನ್, ಚಿರಂಜೀವಿ, ರಾಮ್ ಚರಣ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಆಲಿಯಾ ಭಟ್, ಶೆಫಾಲಿ ಶಾ, ವಿಪುಲ್ ಶಾ, ಮಾಧುರಿ ದೀಕ್ಷಿತ್ ಮೊದಲಾದವರು ಸೇರಿದ್ದಾರೆ.

click me!