ಕೇಂದ್ರ ಸಚಿವ ಸುರೇಶ್ ಅಂಗಡಿಗೆ ರಾಜಕೀಯ ಗಣ್ಯರ ಅಂತಿಮ ನಮನ!

First Published | Sep 24, 2020, 5:52 PM IST

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಕೊರೋನಾ ಮಾರ್ಗಸೂಚಿಯನ್ವಯ ಅವರ ಅಂತ್ಯಕ್ರಿಯೆ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ದೆಹಲಿಯಲ್ಲಿ ನಡೆಯಲಿದೆ. ಇನ್ನು ಅಗಲಿದ ಅಪರೂಪದ ರಾಜಕಾರಣಿಯ ದೆಹಲಿ ನಿವಾಸಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.

ಹೌದು ಬೆಳಗಾವಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೋನಾಗೆ ಬಲಿಯಾಗಿದ್ದಾರೆ.
ಅಂಗಡಿ ಇನ್ನಿಲ್ಲವೆಂಬ ಸುದ್ದಿ ರಾಜ್ಯ ಬಿಜೆಪಿಗೆ ಬಹುದೊಡ್ಡ ಆಘಾತವಾಗಿದೆ.
Tap to resize

ಪಕ್ಷ ನಿಷ್ಠರಾಗಿದ್ದ ಸುರೇಶ್ ಅಂಗಡಿ ಸಾಮಾನ್ಯ ಕಾರ್ಯಕರ್ತನಿಂದ ಕೇಂದ್ರ ಸಚಿವರಾದ ಹಾದಿಯೇ ಬಹಳ ರೋಚಕವಾದದ್ದು.
ಅದೇನಿದ್ದರೂ ವಿಧಿಯಾಟದೆದುರು ಎಲ್ಲರೂ ಅಸಹಾಯಕರು. ಸುರೇಶ್ ಅಂಗಡಿ ಇನ್ನಿಲ್ಲವೆಂಬ ಕಹಿ ಸತ್ಯ ಒಪ್ಪಿಕೊಳ್ಳಲೇ ಬೇಕು.
ಇನ್ನು ಕೊರೋನಾ ಹಿನ್ನೆಲೆ ಸಚಿವರ ಮೃತದೇಹ ರಾಜ್ಯಕ್ಕೆ ತರಲು ಅನುಮತಿ ಇಲ್ಲದ ಕಾರಣ ದೆಹಲಿಯಲ್ಲೇ ಅಂಗಡಿಯವರ ಅಂತಿಮ ಕ್ರಿಯೆ ನಡೆಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಕೇಂದ್ರ ಸಚಿವರು ವಿಡಿಯೋ ಕಾನ್ಫರೆನ್ಸ್‌ ನಡೆಸಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಇದೇ ವೇಳೆ ಅಗಲಿದ ನಾಯಕನ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡಾ ಸುರೇಶ್ ಅಂಗಡಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

Latest Videos

click me!