ಇಸ್ರೇಲ್-ಅಮೆರಿಕಾ ದಾಳಿಯಲ್ಲಿ ಹತರಾದ ಇರಾನ್ ನಾಯಕ ಅಯತೊಲ್ಲಾ ಖಮೇನಿ ಸಾವಿಗೆ ಭಾರತ ಸರ್ಕಾರವು 5 ದಿನಗಳ ನಂತರ ಸಂತಾಪ ಸೂಚಿಸಿದೆ. ಭಾರತ ಸರ್ಕಾರ ಸಂತಾಪ ಸೂಚಿಸದ ಬಗ್ಗೆ ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದವು.
ಫೆಬ್ರವರಿ 28ರಂದು ಇಸ್ರೇಲ್ ಅಮೆರಿಕಾ ನಡೆಸಿದ ಜಂಟಿ ದಾಳಿಯಲ್ಲಿ ಸಾವನ್ನಪ್ಪಿದ ಆಯತೊಲ್ಲ ಖಮೇನಿ ಸಾವಿಗೆ ಭಾರತ ಸರ್ಕಾರವೂ ಘಟನೆ ನಡೆದು 5 ದಿನಗಳ ಬಳಿಕ ಕಡೆಗೂ ಸಂತಾಪ ಸೂಚಿಸಿದೆ. ಹಲವು ರಾಜತಾಂತ್ರಿಕ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಸಾವಿಗೆ ಸಂತಾಪ ಸೂಚಿಸಿರಲಿಲ್ಲ. ಭಾರತದ ಸರ್ಕಾರದ ಈ ನೀತಿಗೆ ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದವು, ಕಾಂಗ್ರೆಸ್‌ನ ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಇದು ತಟಸ್ಥ ನೀತಿಯಲ್ಲ, ಇದೊಂದು ಸೋಲೊಪ್ಪಿಕೊಳ್ಳುವಿಕೆ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರು. ಆದರೆ ಈಗ ಬರೋಬ್ಬರಿ 5 ದಿನಗಳ ನಂತರ ಇರಾನ್ ನಾಯಕನ ಸಾವಿಗೆ ಭಾರತ ಸರ್ಕಾರ ಸಂತಾಪ ಸೂಚಿಸಿದೆ.
26
ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ ವಿದೇಶಾಂಗ ಕಾರ್ಯದರ್ಶಿ
ಇದೇ ಮೊದಲ ಬಾರಿಗೆ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಗುರುವಾರ(ಇಂದು) ಭಾರತ ಸರ್ಕಾರದ ಪರವಾಗಿ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದರು. 86 ವರ್ಷ ವಯಸ್ಸಿನ ಖಮೇನಿ 1989 ರಿಂದ ಇಸ್ಲಾಮಿಕ್ ಗಣರಾಜ್ಯ ಇರಾನ್ ಅನ್ನು ಮುನ್ನಡೆಸುತ್ತಿದ್ದರು ಮತ್ತು ಶನಿವಾರ ಮುಂಜಾನೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಅವರ ಹತ್ಯೆಯಾಗಿತ್ತು. ಅಲಿ ಖಮೇನಿ ಅವರ ಮಗಳು ಸೊಸೆ ಹೆಂಡತಿ ಮೊಮ್ಮಗಳು ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದರು.
36
ಟೀಕೆಯ ನಂತರ ಈ ಬೆಳವಣಿಗೆ
ಇಸ್ರೇಲ್ ಇರಾನ್ ನಡುವಣ ಯುದ್ಧಕ್ಕೆ ಪ್ರತಿಕ್ರಿಯಿಸಿದ ಭಾರತವು, ಪಶ್ಚಿಮ ಏಷ್ಯಾದ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಕರೆ ನೀಡಿತ್ತಾಗಿದ್ದರೂ, ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿಯವರ ಹತ್ಯೆಗೆ ನೇರ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ ಈಗ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇರಾನಿನ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಸೂಚಿಸುವ ಪುಸ್ತಕಕ್ಕೆ ಸಹಿ ಹಾಕಿದರು. ಖಮೇನಿಯವರ ಸಾವಿಗೆ ಸರ್ಕಾರ ಪ್ರತಿಕ್ರಿಯಿಸದ ಕಾರಣ ಹಲವಾರು ವಿರೋಧ ಪಕ್ಷಗಳು ಅದನ್ನು ಟೀಕಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಅಲಿ ಖಮೇನಿ ಸಾವಿಗೆ ಭಾರತ ಮಾತ್ರವಲ್ಲ G7 ದೇಶಗಳು ಸಂತಾಪ ಸೂಚಿಸಿರಲಿಲ್ಲ, ಇದರ ಜೊತೆಗೆ ಒಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ವಲಸಿಗರಿಗೆ ಆತಿಥ್ಯ ವಹಿಸುತ್ತಿರುವ ಭಾರತದ ಪ್ರಮುಖ ಪಾಲುದಾರರಾದ ಗಲ್ಫ್ ರಾಷ್ಟ್ರಗಳು ಈ ಘಟನೆಗೆ ಮೌನವಾಗಿದ್ದವು. ಮುಸ್ಲಿಂ ರಾಷ್ಟ್ರಗಳಾಗಿದ್ದರು ಅವು ಇರಾನ್ ಮೇಲಿನ ದಾಳಿಯನ್ನಾಗಲಿ ಅಥವಾ ಖಮೇನಿ ಸಾವಿನ ಬಗೆಯಾಗಲಿ ಖಂಡಿಸಲು ಇಲ್ಲ ಸಂತಾಪವನ್ನು ಸೂಚಿಸಿರಲಿಲ್ಲ. ಇರಾನಿನ ದಾಳಿಗಳ ವಿರುದ್ಧ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ತುರ್ತು ಸಭೆ ನಡೆಸಿದಾಗ ಸೌದಿ ಅರೇಬಿಯಾ ಮೌನವಾಗಿತ್ತು. ಜಪಾನ್ ಮತ್ತು ಜರ್ಮನಿ ಕೂಡ ಸ್ಥಿರತೆಗೆ ಒತ್ತಾಯಿಸಿದ್ದು, ಯಾವುದೇ ಶೋಕತಪ್ತ ಹೇಳಿಕೆಗಳನ್ನು ನೀಡಿರಲಿಲ್ಲ. ಇದರ ಜೊತೆಗೆ 57 ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಸದಸ್ಯರಲ್ಲಿ, 10 ಕ್ಕಿಂತ ಕಡಿಮೆ ಸದಸ್ಯರು ಸಂತಾಪ ಸೂಚಿಸಿದ್ದರು. ಇನ್ನೊಂದೆಡೆ ಇರಾನ್‌ನ ಟೆಹ್ರಾನ್, ಕರಾಜ್, ಇಸ್ಫಹಾನ್ ಮತ್ತು ಶಿರಾಜ್ ಬೀದಿಗಳಲ್ಲಿ ಇರಾನಿಯನ್ನರ ಒಂದು ಗುಂಪು ಈ ಸಾವನ್ನು ಸಂಭ್ರಮಿಸಿತ್ತು. ಇವೆಲ್ಲಾ ಕಾರಣಗಳಿಂದ ಭಾರತವೂ ಈ ಸಾವಿನ ಬಗ್ಗೆ ಮೌನವಹಿಸಿತ್ತು.
2017ರಿಂದ 2024 ರವರೆಗೆ, ಅವರು ನಾಲ್ಕು ಬಾರಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದರು, ಇದರಿಂದಾಗಿ ಪ್ರತಿ ಬಾರಿಯೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರಾನಿನ ರಾಯಭಾರಿಗಳಿಗೆ ಸಮನ್ಸ್ ಜಾರಿ ಮಾಡಿತು.
2017 ರಲ್ಲಿ ಅವರು ಪಾಕಿಸ್ತಾನವನ್ನು ಬೆಂಬಲಿಸಿ ದಮನಿತ ಕಾಶ್ಮೀರಿಗಳಿಗಾಗಿ ಮುಸ್ಲಿಮರನ್ನು ಒಟ್ಟುಗೂಡಿಸಿದರು. 2019 ರಲ್ಲಿ 370 ನೇ ವಿಧಿ ರದ್ದತಿಯ ನಂತರ, ಅವರು ನ್ಯಾಯಯುತ ನೀತಿ ಜಾರಿಗೆ ಒತ್ತಾಯಿಸಿದರು.
66
ಭಾರತದ ಅಂತರಿಕ ವಿಚಾರದಲ್ಲಿ ಖಮೇನಿ ಹಸ್ತಕ್ಷೇಪ
2020 ರ ದೆಹಲಿ ಗಲಭೆಯ ಸಮಯದಲ್ಲಿ, ಅವರು ಉಗ್ರಗಾಮಿ ಹಿಂದೂಗಳಿಂದ ಮುಸ್ಲಿಮರ ಹತ್ಯಾಕಾಂಡ ಎಂದು ಟ್ವಿಟ್ ಮಾಡಿದ್ದರು
ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಂಕಷ್ಟಕ್ಕಿಡಾಗಿರುವ ಹಿಂದೂಗಳ ಬಗ್ಗೆ ಅವರು ಧ್ವನಿ ಎತ್ತಲೇ ಇಲ್ಲ.
ಇರಾನ್‌ನ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸಿತು.
ಸೆಪ್ಟೆಂಬರ್ 2024 ರಲ್ಲಿ, ಅವರು ಟ್ವೀಟ್‌ನಲ್ಲಿ ಭಾರತವನ್ನು ಗಾಜಾ ಮತ್ತು ಮ್ಯಾನ್ಮಾರ್‌ನೊಂದಿಗೆ ಹೋಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ