ಕನ್ನಡದ ತರುಣ್ ಸುಧೀರ್-ಸೋನಲ್, ನಾಗ ಚೈತನ್ಯ-ಶೋಭಿತಾರಿಂದ ಹಿಡಿದು ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್‌ವರೆಗೆ, 2024ನೇ ಸಾಲಿನಲ್ಲಿ ಹಲವು ಸ್ಟಾರ್ ಜೋಡಿಗಳು ಮದುವೆ ಮಾಡಿಕೊಂಡಿದ್ದಾರೆ. ಈ ವರ್ಷ ಮದುವೆಯಾದ ಟಾಪ್-8 ಸೆಲೆಬ್ರಿಟಿ ಜೋಡಿಗಳಿವು.
ಕನ್ನಡದ ಖ್ಯಾತ ನಿರ್ದೇಶಕ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ದೂರಿ ವಿವಾಹ ಆಗಸ್ಟ್ 11, 2024ರಂದು ಬೆಳಗ್ಗೆ 10:30 ರಿಂದ11:00 ಗಂಟೆಗೆ ನಡೆದ ಧಾರೆ ಮುಹೂರ್ತದಲ್ಲಿ ನಡೆಯಿತು. ಇವರಿಬ್ಬರೂ ರಾಬರ್ಟ್ ಸಿನಿಮಾದ ಶೂಟಿಂಗ್ ವೇಳೆ ಪರಸ್ಪರ ಭೇಟಿಯಾಗಿ ಅಂದಿನಿಂದ ಪ್ರಿತಿಸಲು ಆರಂಭಿಸಿದ್ದರು. ಇದೀಗ ಕ್ರಿಶ್ಚಿಯನ್ ಸಮುದಾಯದ ಸೋನಲ್ ಅವರನ್ನು ಹಿಂದೂ ಸಮುದಾಯದ ತರುಣ್ ಸುಧೀರ್ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು.
26
2024ರ ಸೆಲೆಬ್ರಿಟಿ ಮದುವೆಗಳು
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್, ನಾಗ ಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಜೊತೆಗೆ, ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ, ಪುಲ್ಕಿತ್ ಸಮ್ರಾಟ್-ಕೃತಿ ಖರ್ಬಂದಾ, ಇರಾ ಖಾನ್-ನುಪುರ್ ಶಿಖಾರೆ ಮುಂತಾದ ಇತರ ಸ್ಟಾರ್ ಜೋಡಿಗಳು 2024ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
36
ರಾಕುಲ್ ಪ್ರೀತ್ ಸಿಂಗ್ - ಜಾಕಿ ಭಗ್ನಾನಿ ಫೆಬ್ರವರಿ 21, 2024ರಂದು ಗೋವಾ ಬೀಚ್‌ನಲ್ಲಿ ಇವರ ಮದುವೆ ನೆರವೇರಿತು. ನಿಶ್ಯಬ್ದ ವಾತಾವರಣದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ರಾಕುಲ್ ಪ್ರೀತ್ ಸಿಂಗ್ - ಜಾಕಿ ಭಗ್ನಾನಿ ಮದುವೆಯಾಯಿತು. ಮದುವೆ ನಂತರವೂ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ ಈ ಜೋಡಿ.
ಪುಲ್ಕಿತ್ ಸಮ್ರಾಟ್ - ಕೃತಿ ಖರ್ಬಂದಾ ಮಾರ್ಚ್ 15, 2024ರಂದು ಗುರುಗ್ರಾಮ್‌ನಲ್ಲಿ ಮದುವೆಯಾಗಿ, ತಮ್ಮ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದರು. ಈ ಮದುವೆಗೂ ಹೆಚ್ಚಿನ ಆಡಂಬರಗಳನ್ನು ಮಾಡಲಿಲ್ಲ. ಅವರ ಮದುವೆ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನೆರವೇರಿತು.
46
ಇರಾ ಖಾನ್ - ನುಪುರ್ ಶಿಖಾರೆ ಫೆಬ್ರವರಿ 20, 2024ರಂದು ಗೋವಾದಲ್ಲಿ ಒಂದು ಸುಂದರ ಬೀಚ್‌ನಲ್ಲಿ ಇವರ ಮದುವೆ ನೆರವೇರಿತು. ಸಮುದ್ರ ತೀರದಲ್ಲಿ.. ಸುಂದರವಾದ ಆಹ್ಲಾದಕರ ವಾತಾವರಣದಲ್ಲಿ ಚಂದನೆಯ ವೇದಿಕೆಯ ಮೇಲೆ ಅದ್ಭುತವಾಗಿ ನಡೆದ ಇರಾ ಖಾನ್ - ನುಪುರ್ ಶಿಖಾರೆ ಮದುವೆಗೆ ಕೆಲವೇ ಬಂಧುಗಳು ಬಂದಿದ್ದರು.
56
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್: ಇವರ ಮದುವೆ ಏಪ್ರಿಲ್ 22, 2024ರಂದು ಮುಂಬೈನಲ್ಲಿ ನೆರವೇರಿತು. ಈ ಅದ್ದೂರಿ ಸಮಾರಂಭಕ್ಕೆ ಬಾಲಿವುಡ್‌ನ ಗಣ್ಯರು ಆಗಮಿಸಿದ್ದರು. ಈ ಜೋಡಿಯ ಸುಂದರ ಪಯಣವನ್ನು ಆಶೀರ್ವದಿಸಲು ಬಾಲಿವುಡ್ ಒಂದಾಗಿದೆ.
66
ಹಿಮಾಂಶ್ ಕೊಹ್ಲಿ - ವಿನಿ ಕೊಹ್ಲಿ ನವೆಂಬರ್ 12, 2024ರಂದು ಮದುವೆಯಾಗಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಈ ಜೋಡಿಯ ಮದುವೆಗೆ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಆಗಮಿಸಿ ಆಶೀರ್ವದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ