ಮಹಾರಾಷ್ಟ್ರದ ಸಿಂಧುದುರ್ಗ ತೀರದಲ್ಲಿ, ಭಾರತದ ಮೊದಲ ನೀರೊಳಗಿನ ವಸ್ತುಸಂಗ್ರಹಾಲಯ ನಿರ್ಮಾಣದ ಭಾಗವಾಗಿ ಐಎನ್‌ಎಸ್ ಗುಲ್ದಾರ್ ಯುದ್ಧನೌಕೆಯನ್ನು ಸಮುದ್ರದಲ್ಲಿ ಮುಳುಗಿಸಲಾಗಿದೆ. ಜೊತೆಗೆ ಸ್ಕೂಬಾ ಡೈವಿಂಗ್ ಮತ್ತು ಸಬ್‌ಮರೀನ್ ಮೂಲಕ ಸಾಗರ ವೀಕ್ಷಣೆಯ ಅವಕಾಶವನ್ನು ಕಲ್ಪಿಸಲಿದೆ.
ಮುಂಬೈ: ನೌಕಾಪಡೆಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ ನಿರ್ಮಾಣ ಯೋಜನೆಯ ಮೊದಲ ಹೆಜ್ಜೆಯಾಗಿ, ಯುದ್ಧನೌಕೆಯೊಂದನ್ನು ಸಮುದ್ರಕ್ಕೆ ಮುಳುಗಿಸಲಾಗಿದೆ. ಮಹಾರಾಷ್ಟ್ರದ ಸಿಂಧುದುರ್ಗ ತೀರದಲ್ಲಿ ಅರಬ್ಬೀ ಸಮುದ್ರದ ಆಳಕ್ಕಿಳಿದಿರುವುದು ಐಎನ್‌ಎಸ್ ಗುಲ್ದಾರ್ ಯುದ್ಧನೌಕೆ.
25
ಸಮುದ್ರ ಸಂರಕ್ಷಣೆಯ ಬಗ್ಗೆ ಅರಿವು
ಇನ್ನೆರಡು ವರ್ಷಗಳಲ್ಲಿ ಸಮುದ್ರದಾಳದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂದಾಗಿದೆ. ಆ ಸಂಗ್ರಹಾಲಯವು ಪ್ರವಾಸಿಗರಿಗೆ ನೌಕಾಪಡೆಯ ಪರಂಪರೆಯನ್ನು ತಿಳಿಸಿ ಸಮುದ್ರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದರ ಜತೆಗೆ, ಸಾಹಸಿಗರಿಗಾಗಿ ಸ್ಕೂಬಾ ಡೈವಿಂಗ್ ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಸಂಚರಿಸುವ ಅವಕಾಶ ಒದಗಿಸಲಿದೆ. ಇಂತಹ ಸಾಹಸಕ್ಕೆ ಭಾರತ ಇದೇ ಮೊದಲ ಬಾರಿ ಕೈಹಾಕಿದೆ ಎಂಬುದು ವಿಶೇಷ.
35
ಮುಳುಗಡೆ ಹೇಗೆ?
ನೌಕಾಪಡೆಯಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿ, 2024ರ ಜನವರಿಯಲ್ಲಿ ನಿವೃತ್ತಿ ಪಡೆದ ಕುಂಭೀರ್-ಕ್ಲಾಸ್ ನೌಕೆಯಾಗಿರುವ ಗುಲ್ದಾರ್ ಅನ್ನು ಮುಳುಗಿಸುವ ಮೊದಲು ಅದರಲ್ಲಿದ್ದ ವಿಷಕಾರಿ ಪದಾರ್ಥಗಳನ್ನೆಲ್ಲಾ ತೆಗೆಯಲಾಯಿತು. ಜಲಮಾಲಿನ್ಯವಾಗದಂತೆ ತಡೆಯಲು ಇಂಧನವನ್ನೂ ಖಾಲಿ ಮಾಡಲಾಯಿತು. ಬಳಿಕ ನೌಕೆಯನ್ನು 20-22 ಅಡಿ ಆಳಕ್ಕೆ ಇಳಿಸಲಾಯಿತು.
ಗುಲ್ದಾರ್ ಇನ್ನು ನೀರಿನಡಿಯ ಮ್ಯೂಸಿಯಂ ಆಗಲಿದ್ದು, ಸಮುದ್ರದ ವಿಸ್ಮಯಗಳನ್ನು ಅರಿಯಲು ಬರುವ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅದರ ಬಳಿ ಜನರನ್ನು ಕರೆದೊಯ್ಯಲು ‘ಟ್ರೈಟಾನ್ ಡೀಪ್ ವ್ಯೂ 24’ ಎಂಬ 24 ಆಸನಗಳ ಸಬ್‌ಮರೀನ್ ಅನ್ನು ಅಮೆರಿಕದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪ್ರವಾಸಿಗರನ್ನು ಮುಳುಗಿರುವ ಯುದ್ಧನೌಕೆ, ಕೃತಕ ಹವಳದ ದಿಬ್ಬಗಳು, ಸಮುದ್ರ ಜೀವವೈವಿಧ್ಯ, ನೀರೊಳಗಿನ ರಚನೆಗಳನ್ನು ತೋರಿಸಲು ಕರೆದೊಯ್ಯಲಾಗುತ್ತದೆ.
55
ಯಾವ ದೇಶದಲ್ಲಿ ಇದೆ?
ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ, ಜೋರ್ಡನ್, ಟರ್ಕಿ ದೇಶಗಳು ಹೀಗೆ ಯುದ್ಧನೌಕೆಗಳನ್ನು ಮುಳುಗಿಸಿ ಮ್ಯೂಸಿಯಂ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ