ಅಮಿತ್ ಶಾ ಆಸ್ತಿ ವಿವರ ಬಹಿರಂಗ: ಗೃಹ ಸಚಿವರ ಬಳಿ ಏನೇನಿದೆ?

Published : Oct 15, 2020, 01:41 PM IST

ಪ್ರಧಾನಿ ಮೋದಿ ಆಸ್ತಿಯಲ್ಲಿ ಕೊಂಚ ಏರಿಕೆಯಾಗಿದ್ದರೆ,  ಶ್ರೀಮಂತ ಗುಜರಾತಿ ಕುಟುಂಬಕ್ಕೆ ಸೇರಿದ ಗೃಹಸಚಿವ ಅಮಿತ್ ಶಾ ಅವರ ಆಸ್ತಿ ಇಳಿಮುಖವಾಗಿದೆ. 2020 ಜೂನ್​ ವೇಳೆಗೆ ₹28.63 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಅಮಿತ್ ಶಾ ಘೋಷಿಸಿದ್ದಾರೆ. ಕಳೆದ ವರ್ಷ ಅವರು ಘೋಷಿಸಿದ್ದ ಆಸ್ತಿ 32.3 ಕೋಟಿ ರೂಪಾಯಿ. ಅಮಿತ್ ಶಾ ಅವರು ಗುಜರಾತ್​ನಲ್ಲಿ 10 ಸ್ಥಿರಾಸ್ತಿಯನ್ನ ಹೊಂದಿದ್ದಾರೆ. ತಾಯಿಯ ಆಸ್ತಿಯ ಪಾಲು ಹಾಗೂ ಶಾ ಅವರ ಆಸ್ತಿ ಸೇರಿ ಒಟ್ಟು ಮೌಲ್ಯ 13.56 ಕೋಟಿ ರೂಪಾಯಿಯಾಗಿದೆ.

PREV
17
ಅಮಿತ್ ಶಾ ಆಸ್ತಿ ವಿವರ ಬಹಿರಂಗ: ಗೃಹ ಸಚಿವರ ಬಳಿ ಏನೇನಿದೆ?

₹15,814 ನಗದು ಹಣ ಹಾಗೂ ಬ್ಯಾಂಕ್​ ಖಾತೆಯಲ್ಲಿ ₹1.04 ಕೋಟಿ ಹಣವನ್ನ ಅಮಿತ್​ ಶಾ ಹೊಂದಿದ್ದಾರೆ.

27

ಜೊತೆಗೆ ₹3.47 ಲಕ್ಷ ಮೌಲ್ಯದ ಇನ್ಶೂರೆನ್ಸ್​ ಮತ್ತು ಪೆನ್ಶನ್ ಪಾಲಿಸಿ, ₹2.79 ಲಕ್ಷ ಮೌಲ್ಯದ Fixed Deposit​ ಇದೆ ಎಂದು ತಿಳಿಸಿದ್ದಾರೆ.

37

ಶಾ ಅವರ ಬಳಿ ₹44.47 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿವೆ.

47

ಅಮಿತ್ ಶಾ ಅವರ ಸೆಕ್ಯೂರಿಟಿಗಳ ಮಾರುಕಟ್ಟೆ ಮೌಲ್ಯ ಕುಸಿದ ಕಾರಣ ಆಸ್ತಿಯಲ್ಲಿ ಇಳಿಕೆಯಾಗಿದೆ.

57

ಪಿತ್ರಾರ್ಜಿತವಾಗಿ 12.10 ಕೋಟಿ ಮೌಲ್ಯದ ಸೆಕ್ಯೂರಿಟಿ ಹಾಗೂ ತಮ್ಮ ಸ್ವಂತ 1.4 ಕೋಟಿ ಮೊತ್ತದ ಸೆಕ್ಯೂರಿಟಿ ಇದ್ದು, ಈ ವರ್ಷ ಮಾರ್ಚ್​ ವೇಳೆಗೆ ಇದರ ಒಟ್ಟು ಮೌಲ್ಯ 13.5 ಕೋಟಿಯದ್ದಾಗಿದೆ ಎಂದು ಅಮಿತ್​ ಶಾ ತಿಳಿಸಿದ್ದಾರೆ. 

67

ಕಳೆದ ವರ್ಷ ಅವರು ಘೋಷಿಸಿದ್ದ ಸೆಕ್ಯೂರಿಟಿ ಮೌಲ್ಯ 17.9 ಕೋಟಿ ರೂಪಾಯಿಯಾಗಿದ್ದು, ಈ ವರ್ಷ ಭಾರೀ ಇಳಿಕೆ ಕಂಡಿದೆ.

77

ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆಸ್ತಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಹೆಚ್ಚಿಗೇನೂ ಬದಲಾವಣೆಯಾಗಿಲ್ಲ. ಈ ವರ್ಷ 1.97 ಕೋಟಿ ಚರಾಸ್ತಿ ಹಾಗೂ 2.97 ಕೋಟಿ ಸ್ಥಿರಾಸ್ತಿಯನ್ನ ಸಿಂಗ್ ಘೋಷಿಸಿದ್ದಾರೆ.
 
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories