ಅಯೋಧ್ಯೆಯಲ್ಲಿ ತ್ರೇತಾಯುಗ: ಪ್ರತಿ ಮನೆಯ ಗೋಡೆಗಳೂ ಹೇಳುತ್ತಿವೆ ಶ್ರೀರಾಮನ ಕತೆ!

First Published | Jul 31, 2020, 6:49 PM IST

ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ದಂದ ಭೂಮಿ ಪೂಜೆ ನಡೆಯಲಿದ್ದು, ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಟ್ಟು ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಕ್ಷಣಕ್ಕಾಗಿ ಶ್ರೀರಾಮ ಭಕ್ತರೆಲ್ಲಾ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಈ ಶುಭ ಕಾರ್ಯಕ್ಕಾಗಿ ಶ್ರೀರಾಮನ ಊರು ಅಯೋಧ್ಯೆ ಸಜ್ಜಾಗುತ್ತಿದೆ. ಸಾಕೇತ್ ಡಿಗ್ರಿ ಕಾಲೇಜಿನಿಂದ ರಾಮ ಜನ್ಮ ಭೂಮಿವರೆಗೆಗಿರುವ ಪ್ರತಿ ಮನೆಯ ಗೋಡೆಗಳೂ ಶ್ರೀರಾಮನ ಚಿತ್ರಗಳನ್ನು ಬಿಡಿಸಲಾಗಿದೆ. ಇದನ್ನು ನೋಡಿದರೆ ಈ ಗೋಡೆಗಳೆಲ್ಲವೂ ರರಾಮನ ಕತೆಯನ್ನು ಹೇಳುತ್ತಿರುವಂತೆ ಭಾಸವಾಗುತ್ತಿವೆ. ಸದ್ಯ ಈ ಅಪರೂಪದ ಕ್ಷಣಕ್ಕಾಗಿ ಬಹುತೇಕ ಎಲ್ಲಾ ತಯಾರಿಗಳೂ ಪೂರ್ಣಗೊಂಡಿವೆ. ಸದ್ಯ ಅಯೋಧ್ಯೆ ತ್ರೇತಾಯುಗದಂತೆ ಕಾಣುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡಾ ಭೂಮಿ ಪೂಜೆಯನ್ನು ಅವಿಸ್ಮರಣೀಯವಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಆಗಸ್ಟ್ 3 ರಿಂದ 5ರವರೆಗೆ ದೀಪೋತ್ಸವ ಆಚರಿಸುವ ಬಗ್ಗೆಯೂ ಮಾತುಗಳನ್ನಾಡಿಸಿದ್ದಾರೆ. ಇಲ್ಲಿದೆ ನೋಡಿ ರಾಮನೂರಿನ ವೈಭವ!

ಮದುವಣಗಿತ್ತಿಯಂತೆ ಸಜ್ಜಾಗಿದೆ ಅಯೋಧ್ಯೆ ದ್ವಾರ
undefined
ಸಾಕೇತ್ ಡಿಗ್ರಿ ಕಾಲೇಜಿನಿಂದ ರಾಮ ಜನ್ಮಭೂಮಿವರೆಗಿನ ಪ್ರತಿ ಮನೆಯ ಗೋಡೆಗಳ ಮೇಲೆಶ್ರೀರಾಮನ ಚಿತ್ರ ಬಿಡಿಸಲಾಗುತ್ತಿದೆ.
undefined

Latest Videos


ರಾಮ ಜನ್ಮಭೂಮಿ ಭೂಮಿ ಪೂಜೆಗೂ ಮುನ್ನ ಹೀಗೆ ಸಜ್ಜಾಗುತ್ತಿದೆ ರಾಮಲಲ್ಲಾನ ನಗರ.
undefined
ರಾಮ ಮಂದಿರದ ಶಿಲಾನ್ಯಾಸಕ್ಕೆ ಧರ್ಮ ರಕ್ಷಾ ಸಂಘದ ಮೂಲಕ ತಯಾರಿಸಲಾದ ರಜತ ಇಟ್ಟಿಗೆ. ಇದನ್ನು ಖುದ್ದು ಪಿಎಂ ಮೋದಿ ಇಡಲಿದ್ದಾರೆ.
undefined
ಅಯೋಧ್ಯೆಯಲ್ಲಿ ತ್ರೇತಾಯುಗದಂತ ಚಿತ್ರಗಳು. ರಾಮಾಯಣ ಕಾಲದ ಪ್ರಸಂಗಗಳನ್ನು ಚಿತ್ರದ ಮೂಲಕ ಬಿಡಿಸಲಾಗುತ್ತಿದೆ.
undefined
ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ ರಾಮ್‌ ಕೀ ಪೈಡೀ
undefined
ರಾಮ ಜನ್ಮೂ ಭೂಮಿ ಪೂಜೆಗೂ ಮುನ್ನ ಸಿಂಗಾರಗೊಳ್ಳುತ್ತಿದೆ ಅಯೋಧ್ಯೆ. ಶ್ರೀರಾಮನ ಚಿತ್ರಕ್ಕೆ ಅಂತಿಮ ರೂಪ ನೀಡುತ್ತಿರುವ ಕಲಾವಿದ.
undefined
ಸರಯೂ ಆರತಿಯ ವಿಹಂಗಮ ನೋಟ. ಆರತಿ ನಡೆಸುತ್ತಿರುವ ಶ್ರೀರಾಮ ಭಕ್ತರು.
undefined
ಹೀಗೆ ಸಜ್ಜಾಗ್ತಿದೆ ರಾಮನೂರು.
undefined
ಇಲ್ಲಿದೆ ನೋಡಿ ಹನುಮಾನ್‌ ಗಡೀಯಲ್ಲಿರುವ ಬಜರಂಗ ಮೂರ್ತಿ. ಸಂಪ್ರದಾಯದಂತೆ ಇಲ್ಲಿ ಅನುಮತಿ ಪಡೆದು ಶ್ರೀರಾಮನ ಜನ್ಮಭೂಮಿಗೆ ಪಿಎಂ ಮೋದಿ ತೆರಳಲಿದ್ದಾರೆ.
undefined
ಸಾಕೇತ್ ಡಿಗ್ರಿ ಕಾಲೇಜಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೆಲಿಪ್ಯಾಡ್. ಇಲ್ಲೇ ಪಿಎಂ ಮೋದಿ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತೆ.
undefined
ಅಯೋಧ್ಯೆಯಲ್ಲಿರುವ ಶ್ರೀರಾಮನ ಮಂದಿರ.
undefined
ಕೇಸರಿಮಯವಾಗಿದೆ ಅಯೋಧ್ಯೆಯ ಪ್ರತಿ ಮನೆಯ ಗೋಡೆಗಳು.
undefined
ಅಯೋಧ್ಯೆಯ ರಸ್ತೆ ಬದಿಯಲ್ಲಿರುವ ಮನೆಗಳ ಗೋಡೆಗಳ ಮೇಲೆ ಶ್ರೀರಾಮನ ಕತೆಯನ್ನು ಹೇಳುತ್ತಿರುವ ಚಿತ್ರಗಳು.
undefined
ಅಯೋಧ್ಯೆಯ ರಸ್ತೆ ಬದಿಯಲ್ಲಿರುವ ತಡೆಗೋಡೆಗಳ ಮೇಲೂ ರಾಮಾಯಣದ ಕತೆಗಳು.
undefined
ಋಷಿ-ಮುನಿಗಳ ಚಿತ್ರಗಳೂ ಇಲ್ಲಿವೆ.
undefined
ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಮರಳಿದ ವೈಭವ ಸಾರಿ ಹೇಳುತ್ತಿದೆ ಈ ಚಿತ್ರ.
undefined
ಕಲಾವಿದರ ಕುಂಚದಲ್ಲಿ ಅರಳುತ್ತಿರುವ ಚಿತ್ರಗಳು.
undefined
ಹನುಮಂತ ಪರ್ವತವನ್ನು ಹೊತ್ತು ತಂದ ದೃಶ್ಯ.
undefined
ಗೋಡೆಗಳ ಮೇಲೆ ಚಿತ್ರ ಬರೆಯುತ್ತಿರುವ ಕಲಾವಿದರು.
undefined
ಬಿಲ್ವಿದ್ಯೆ ಕಲಿಯುತ್ತಿರುವ ದಶರಥ ಮಹಾರಾಜನ ಪುತ್ರರ ಚಿತ್ರ.
undefined
click me!