ಸಂಪ್ರದಾಯಸ್ಥ ಕುಟುಂಬದ ಅತ್ತೆ ಮಾವ, ಸೊಸೆಯ ಶಾರ್ಟ್ ಬಟ್ಟೆ ಹಾಕಿ ಮಾಡುತ್ತಿದ್ದ ರೀಲ್ಸ್‌ಗೆ ಅಕ್ಷೇಪ ಎತ್ತಿದ್ದಾರೆ. ಇಲ್ಲಿಂದ ಶುರುವಾದ ಜಗಳದಲ್ಲಿ ಹಿರಿ ಜೀವಗಳು ದುರಂತ ಅಂತ್ಯ ಕಂಡಿಗೆ ಎನಿದು ಘಟನೆ?
ಪಾಣಿಪತ್‌ನ ನಾರಾ ಗ್ರಾಮದಲ್ಲಿ ನಡೆದ ಘಟನೆ ಇದು. ಸೊಸೆ ಮತ್ತು ಆಕೆಯ ಕುಟುಂಬದವರಿಂದ ಕಿರುಕುಳ ಮತ್ತು ಬೆದರಿಕೆಗೆ ಒಳಗಾಗಿದ್ದ ಅತ್ತೆ ಮಾವ ದುರಂತ ಅಂತ್ಯಕಂಡಿದ್ದಾರೆ. 46 ವರ್ಷದ ರಾಜೇಶ್ ಮತ್ತು 44 ವರ್ಷದ ಸುಮನ್ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೊದಲು ಖಾಸಗಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ರೋಹ್ಟಕ್‌ಗೆ ದಾಖಲಿಸಲಾಯಿತಾದರೂ ಇಬ್ಬರೂ ಬದುಕುಳಿಯಲಿಲ್ಲ. ಪಾಣಿಪತ್ ಸಿವಿಲ್ ಆಸ್ಪತ್ರೆಯ ವೈದ್ಯರು ಸುಮನ್ ಮೃತಪಟ್ಟಿದ್ದಾಗಿ ಘೋಷಿಸಿದರೆ, ರೋಹ್ಟಕ್‌ನ ಪಿಟಿ ಬಿಡಿ ಶರ್ಮಾ ಪಿಜಿಐಎಂಎಸ್‌ನಲ್ಲಿ ರಾಜೇಶ್ ಭಾನುವಾರ ಮುಂಜಾನೆ ಕೊನೆಯುಸಿರೆಳೆದರು. ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
25
ಹಿರಿಯ ಜೀವಗಳಿಗೆ ಸೊಸೆಯಿಂದ ತೀವ್ರ ಕಿರುಕುಳ
ಮಗನ ಪತ್ನಿ ಸ್ನೇಹಾ ಪ್ರತಿ ದಿನ ಸಣ್ಣ ಬಟ್ಟೆ ಹಾಕಿ ಅಂಗಾಂಗ ಪ್ರದರ್ಶಿಸುತ್ತಾ ರೀಲ್ಸ್ ಮಾಡುತ್ತಿದ್ದಳು. ಸಂಪ್ರದಾಯಸ್ಥ ಕುಟುಂಬದ ಕಾರಣ ಅತ್ತೆ ಹಾಗೂ ಮಾವನಿಗೆ ಇಧು ಸರಿ ಕಾಣಲಿಲ್ಲ. ಹೀಗಾಗಿ ಈ ಕುರಿತು ಸೊಸೆ ಸ್ನೇಹಾಗೆ ಸೂಚನೆ ನೀಡಿದ್ದರು. ಆದರೆ ಆಕೆ ಮತ್ತೆ ರೀಲ್ಸ್ ಮುಂದುವರಿಸಿದ್ದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಕಾರಣ ಸಮಸ್ಯೆ ತೀವ್ರಗೊಂಡಿತ್ತು. ಅತ್ತೆ ಮಾವನ ವಿರುದ್ದ ಸೊಸೆ ಸ್ನೇಹಾ ಹಾಗೂ ಸ್ನೇಹಾ ಕುಟುಂಬಸ್ಥರು ಕಿರುಕುಳ ನೀಡಲು ಆರಭಿಸಿದ್ದಾರೆ. ಹಿರಿಯ ದಂಪತಿಗಳಾದ ರಾಜೇಶ್ ಹಾಗೂ ಸುಮನ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಸೊಸೆ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳ, ಬೆದರಿಕೆ, ಹಲ್ಲೆಯಿಂದ ಬೇಸತ್ತಿದ್ದಾರೆ. ಸಾಯುವ ಮುನ್ನ, ದಂಪತಿ ತಮಗಾಗುತ್ತಿದ್ದ ಕಿರುಕುಳ ಮತ್ತು ಒತ್ತಡದ ಬಗ್ಗೆ ಹೇಳಿಕೊಂಡಿದ್ದರು ಎನ್ನಲಾಗಿದೆ.
35
ಸೋಶಿಯಲ್ ಮೀಡಿಯಾದಲ್ಲಿನ ಅನುಮಾನಸ್ಪದ ಚಟುವಟಿಕೆ
ಕುಟುಂಬದ ಪ್ರಕಾರ, ರಾಜೇಶ್ ಅವರ ಮಗ ಆಶಿಶ್, ದೆಹಲಿ ಮೂಲದ ಸ್ನೇಹಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಸುಮಾರು 15 ತಿಂಗಳ ಹಿಂದೆ, 2025ರ ಜನವರಿಯಲ್ಲಿ ಇವರ ವಿವಾಹ ನಡೆದಿತ್ತು. ಆಶಿಶ್ ಮತ್ತು ಸ್ನೇಹಾ ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾಗಿ, ಸುಮಾರು ಎರಡು ವರ್ಷಗಳ ಕಾಲ ಪ್ರೀತಿಸಿ, ನಂತರ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು. ಆದರೆ, ಮದುವೆಯಾದ ನಂತರ ಮನೆಯಲ್ಲಿ ಜಗಳಗಳು ಶುರುವಾದವು. ಸ್ನೇಹಾಳ ಜೀವನಶೈಲಿ ಮತ್ತು ಸೋಷಿಯಲ್ ಮೀಡಿಯಾ ಬಳಕೆಯ ಬಗ್ಗೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಹೇಳುತ್ತಾರೆ. ಸ್ನೇಹಾ ಸೋಷಿಯಲ್ ಮೀಡಿಯಾದಲ್ಲಿ 'ರೀಲ್ಸ್' ಮಾಡಿ ಹಂಚಿಕೊಳ್ಳುವುದು ಜಗಳಕ್ಕೆ ಕಾರಣವಾಗಿತ್ತು. ಹಳ್ಳಿಯ ಸಂಪ್ರದಾಯಸ್ಥರಾದ ರಾಜೇಶ್ ಮತ್ತು ಸುಮನ್, ಸೊಸೆ ಚಿಕ್ಕ ಬಟ್ಟೆಗಳನ್ನು ಧರಿಸುವುದಕ್ಕೆ ಮತ್ತು ಆಕೆಯ ಆನ್‌ಲೈನ್ ಚಟುವಟಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಲಕ್ರಮೇಣ ಈ ಭಿನ್ನಾಭಿಪ್ರಾಯಗಳು ಗಂಭೀರ ಸಂಘರ್ಷಕ್ಕೆ ತಿರುಗಿದವು.
ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ರಾಜೇಶ್ ಮತ್ತು ಸುಮನ್ ಶನಿವಾರ ತಮ್ಮ ಮನೆಯಲ್ಲಿ ವಿಷ ಸೇವಿಸಿದ್ದಾರೆ. ಅವರ ಸ್ಥಿತಿಯನ್ನು ಗಮನಿಸಿದ ಸಂಬಂಧಿಕರು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಅವರನ್ನು ಪಾಣಿಪತ್ ಸಿವಿಲ್ ಆಸ್ಪತ್ರೆಗೆ, ನಂತರ ರೋಹ್ಟಕ್‌ಗೆ ಕಳುಹಿಸಲಾಯಿತು. ಆದರೆ, ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಇಬ್ಬರೂ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
55
ಕಟುಂಬಸ್ಥರಿಂದ ದೂರು
ರಾಜೇಶ್ ಅವರ ಸಹೋದರ ಮಟ್ಲೋಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡ್ಲೌಡಾ ಪೊಲೀಸರು ದಂಪತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸ್ನೇಹಾ, ಆಕೆಯ ತಾಯಿ, ತಂದೆ ಮತ್ತು ಸಹೋದರಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಟ್ರಿಬ್ಯೂನ್ ಇಂಡಿಯಾ ವರದಿಯಂತೆ, ಮಡ್ಲೌಡಾ ಪೊಲೀಸ್ ಠಾಣೆಯ ಎಸ್‌ಎಚ್‌ಒ, ಸಬ್-ಇನ್ಸ್‌ಪೆಕ್ಟರ್ ರಾಕೇಶ್ ಕುಮಾರ್, ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಖಚಿತಪಡಿಸಿದ್ದಾರೆ. ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪೊಲೀಸರು ತನಿಖೆಯ ಭಾಗವಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು, ಕುಟುಂಬದ ಎಲ್ಲಾ ಆರೋಪಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮದುವೆಗೆ ಎರಡೂ ಕುಟುಂಬಗಳ ಒಪ್ಪಿಗೆ ಇದ್ದರೂ, ನಂತರದ ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸತ್ಯಾಸತ್ಯತೆ ಪತ್ತೆಹಚ್ಚಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ