ಶ್ರೀ ರಾಮ ಮಂದಿರ ಪ್ರವೇಶ ದ್ವಾರದ ಬಳಿ ಹನುಮಾನ್, ಗರುಡಾ ಸೇರಿ 4 ಮೂರ್ತಿಗಳ ಸ್ಥಾಪನೆ!

First Published | Jan 4, 2024, 9:51 PM IST

ರಾಮ ಮಂದಿರದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಇದೀಗ ಮಂದಿರದ ಪ್ರವೇಶ ದ್ವಾರದ ಬಳಿ ನಾಲ್ಕು ಮೂರ್ತಿಗಳ ಸ್ಥಾಪನೆ ಮಾಡಲಾಗಿದೆ. ರಾಜಸ್ಥಾನ ಮೂಲದ ಕಲ್ಲುಗಳಿಂದ ಈ ಮೂರ್ತಿಗಳ ಕೆತ್ತನೆ ಮಾಡಲಾಗಿದೆ.
 

ರಾಮ ಮಂದಿರದ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಮಂದಿರದ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿದೆ. ಇನ್ನೂ ಕೆಲವೇ ದಿನಗಳು ಬಾಕಿ ಇರುವ ಕಾರಣ ಮತ್ತೊಂದೆಡೆಯಿಂದ ತಯಾರಿಗಳು ನಡೆಯುತ್ತಿದೆ.
 

ಇದೀಗ ರಾಮ ಮಂದಿರ ಪ್ರವೇಶದ ದ್ವಾರದಲ್ಲಿ ನಾಲ್ಕು ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ರಾಮಾಯಣಕ್ಕೆ ಸಂಬಂಧಿಸಿದ ಮೂರ್ತಿಗಳನ್ನು ಸ್ಥಾಪಿಸಲಾಗಿದ್ದು ಆಯೋಧ್ಯೆಯ ಅಂದ ಮತ್ತಷ್ಟು ಹೆಚ್ಚಾಗಿದೆ.

Tap to resize

ಹನುಮಾನ್ ಮೂರ್ತಿ, ಗರುಡ, ಸಿಂಹ ಹಾಗೂ ಆನೆಯ ಮೂರ್ತಿಗಳನ್ನು ರಾಮ ಮಂದಿರದ ಪ್ರವೇಶದ್ವಾರದಲ್ಲಿ ಸ್ಥಾಪಿಸಲಾಗಿದೆ. ಅತ್ಯಾಕರ್ಷಕ ಮೂರ್ತಿಗಳು ಇದೀಗ ಕಣ್ಮನಸೆಳೆಯುತ್ತಿದೆ.
 

ರಾಜಸ್ಥಾನದ ಬನ್ಸಿ ಪಹರ್‌ಪುರ್ ಗ್ರಾಮದ ಕೆಂಪು ಮರಳುಗಲ್ಲಿನಲ್ಲಿ ಈ ಮೂರ್ತಿಗಳನ್ನು ಕೆತ್ತಲಾಗಿದೆ. ಇದರ ಜೊತೆಗೆ ರಾಮ ಮಂದಿರಕ್ಕೆ ಆಗಮಿಸುವ ಆವರಣದಲ್ಲೂ ಹಲವು ಮೂರ್ತಿಗಳ ಸ್ಥಾಪನೆ ನಡೆಯಲಿದೆ.

2019ರಲ್ಲಿ ಆಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿತ್ತು. ಇಷ್ಟೇ ಅಲ್ಲ ಈ ವಿವಾದಿತ ಜಾಗನ್ನು ಹಿಂದೂಗಳಿಗೆ ನೀಡಲಾಗಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ  ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರ, ಭಾರತದ ಅಸ್ಮಿತೆಯಾಗಿರುವ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಂಡಿತ್ತು. 

ಪ್ರಧಾನಿ ಮೋದಿ ರಾಮ ಮಂದಿರದ ಶಿಲನ್ಯಾಸ ಮಾಡಿದ್ದರು. ಇದೀಗ ವಿಶ್ವವೇ ತಿರುಗಿ ನೋಡುವಂತ ಉದ್ಘಾಟನೆ ನಡೆಯಲಿದೆ. ದೇಶ ವಿದೇಶದ ಗಣ್ಯರು ಉದ್ಗಾಟನೆಗೆ ಆಗಮಿಸುತ್ತಿದ್ದಾರೆ. 

153 ದೇಶಗಳ ಪವಿತ್ರ ನೀರನ್ನು ತರಲಾಗಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠೆಯನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ರಾಮ ಭಕ್ತರು ಕಾಯುತ್ತಿದ್ದಾರೆ.
 

Latest Videos

click me!