18 ತಿಂಗಳ ಅವಧಿಯಲ್ಲಿ 108 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದ, ಅನಂತ್ ಅಂಬಾನಿ ಬಳಿಕ ಸಡನ್ ಆಗಿ ದೇಹದ ತೂಕ ಹೆಚ್ಚಿಸಿಕೊಂಡು ಮೊದಲಿನಂತೆಯೇ ಆಗಿದ್ದರು. ಅನಂತ್ ಅಂಬಾನಿ ತನ್ನ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಈ ಡೈನಾಮಿಕ್ ಜೋಡಿಯನ್ನು ವ್ಯಾಪಾರ ಜಗತ್ತಿನಲ್ಲಿ ಸಾಮಾನ್ಯವಾಗಿ 'ಮುದ್ದಾದ ಜೋಡಿ' ಎಂದು ಕರೆಯಲಾಗುತ್ತದೆ ಮತ್ತು ಇವರ ಈವೆಂಟ್‌ಗಳ ವೀಡಿಯೊಗಳು ನೆಟಿಜನ್‌ಗಳಿಂದ ಹೆಚ್ಚು ಪ್ರೀತಿಯನ್ನು ಪಡೆಯುತ್ತವೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜನವರಿ 19, 2023 ರಂದು ಅದ್ದೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈವೆಂಟ್ ಅನ್ನು ಸಾಂಪ್ರದಾಯಿಕ ಗುಜರಾತಿ ಶೈಲಿಯ ಗೋಲ್ ಧನ ಮತ್ತು ಚುನಾರಿ ಸಂಪ್ರದಾಯಬದ್ಧವಾಗಿ ಮಾಡಲಾಗಿತ್ತು. ಸದ್ಯಕ್ಕೆ, ಅಂಬಾನಿ ಕುಟುಂಬವು ಅನಂತ್ ಅಂಬಾನಿ ಅವರ ಮದುವೆಗೆ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಿಲ್ಲ ಆದರೆ ಅವರ ಸಹೋದರ ಆಕಾಶ್ ಅಂಬಾನಿ ನಮಗೆ ಬಹು ನಿರೀಕ್ಷಿತ ಕಾರ್ಯಕ್ರಮದ ಸುಳಿವು ನೀಡಿದ್ದಾರೆ.
ಐಐಟಿ ಬಾಂಬೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಕಾಶ್ ಅಂಬಾನಿ, ಈ ವರ್ಷ ಅನಂತ್ ಅಂಬಾನಿ ವಿವಾಹವಾಗಲಿರುವ ಕಾರಣ 2024 ಕುಟುಂಬಕ್ಕೆ ವಿಶೇಷ ವರ್ಷವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಆಕಾಶ್ ಅಂಬಾನಿ ಮದುವೆಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಹಳೆಯ ವರದಿಗಳ ಪ್ರಕಾರ ಮೆಗಾ ಈವೆಂಟ್ ಜುಲೈ ಎರಡನೇ ವಾರದಲ್ಲಿ ನಡೆಯಲಿದೆ.
ಭಾರತದ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೂ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ಉತ್ತಮ ನಡವಳಿಕೆ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದ್ದಾರೆ.
ಭಾರತದ ಶ್ರೀಮಂತ ಕುಟುಂಬದ ಸದಸ್ಯರಾಗಿದ್ದರೂ, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ತಮ್ಮ ಉತ್ತಮ ನಡವಳಿಕೆ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದ್ದಾರೆ.
ಅನಂತ್ ಅಂಬಾನಿ ಬ್ರೌನ್ ವಿಶ್ವವಿದ್ಯಾನಿಲಯದಿಂದ ತಮ್ಮ ಅಧ್ಯಯನವನ್ನು ಮುಗಿಸಿದರು ಮತ್ತು ಈಗ ರಿಲಯನ್ಸ್ ನ್ಯೂ ಎನರ್ಜಿ ಬಿಸಿನೆಸ್ ಅನ್ನು ನಿರ್ವಹಿಸುತ್ತಿದ್ದಾರೆ. ಅವರು ರಿಲಯನ್ಸ್ 02ಸಿ ಮತ್ತು ರಿಲಯನ್ಸ್ ನ್ಯೂ ಸೋಲಾರ್ ಎನರ್ಜಿಯ ನಿರ್ದೇಶಕರ ಹುದ್ದೆಯಲ್ಲಿದ್ದಾರೆ. ವರದಿ ಪ್ರಕಾರ ಅವರ ನಿವ್ವಳ ಮೌಲ್ಯವು 40 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು.
ಅಕ್ಟೋಬರ್‌ನಲ್ಲಿ ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ದಿನಾಂಕವನ್ನು ಬಹಿರಂಗಪಡಿಸಿದ್ದರು. 2024ರ ಜುಲೈ 10, 11, 12 ರಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ನಡೆಯಲಿದೆ ಎಂದಿದ್ದರು
ಆದರೆ ಅಂಬಾನಿ ಕುಟುಂಬದ ಕಿರಿಯ ಕುಡಿಯ ಅದ್ಧೂರಿ ಮದುವೆ ದಿನಾಂಕದ ಬಗ್ಗೆ ಇನ್ನೂ ಕೂಡ ಸ್ಪಷ್ಟತೆ ಇಲ್ಲ. ಮದುವೆ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ಕೂಡ ತಿಳಿದುಬಂದಿಲ್ಲ. ಆದರೆ ಜುಲೈನಲ್ಲಿ ನಡೆಯುವುದು ಬಹುತೇಕ ಖಚಿತ. ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಬರೋಬ್ಬರಿ 1 ವರ್ಷ ಆಗುತ್ತಿದೆ.