ಗುಪ್ತರ ಕಾಲದ ಮೆಟ್ಟಿಲು, ಶಾಸನ ಪತ್ತೆ.. ಇತಿಹಾಸ ಶ್ರೀಮಂತ

First Published Sep 10, 2021, 10:25 PM IST

ಲಕ್ನೋ(ಸೆ. 10)  ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಇಟಾಹ್ ಜಿಲ್ಲೆಯ ಅಲಿಗಂಜ್ ಪಟ್ಟಣದ ಬಳಿ ಉತ್ಖನನದ ಸಮಯದಲ್ಲಿ ಗುಪ್ತರ ಕಾಲದ ದೇವಾಲಯದ ಮೆಟ್ಟಿಲು ಮತ್ತು ಪುರಾತನ ವಾಸ್ತಶಿಲ್ಪಗಳನ್ನು ಪತ್ತೆ ಮಾಡಿದೆ.

Gupta period stairs pillars

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಇಟಾಹ್ ಜಿಲ್ಲೆಯ ಅಲಿಗಂಜ್ ಪಟ್ಟಣದ ಬಳಿ ಉತ್ಖನನದ ಸಮಯದಲ್ಲಿ ಗುಪ್ತರ ಕಾಲದ ದೇವಾಲಯದ ಮೆಟ್ಟಿಲು ಮತ್ತು ಪುರಾತನ ವಾಸ್ತಶಿಲ್ಪಗಳನ್ನು ಪತ್ತೆ ಮಾಡಿದೆ.

Gupta period stairs pillars

ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ಅಲಿಗಂಜ್ ಪ್ರದೇಶದ ಸಮೀಪವಿರುವ ಬಿಲ್ಸಾದ್ ಗ್ರಾಮದಲ್ಲಿ ಒಂದು ಸಂರಕ್ಷಿತ ತಾಣವಿದೆ. ಇದು ಗುಪ್ತರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾದ ದೇವಾಲಯದ ಸ್ಥಳವೆಂದು ನಂಬಲಾಗಿದೆ. 

Gupta period stairs pillars

ಇಲ್ಲಿ ನಾವು ಎರಡು ಸ್ತಂಭಗಳನ್ನು ಉತ್ಖನನ ಮಾಡಿದ್ದೇವೆ, ಅದರ ಮೇಲೆ ಗುಪ್ತ ಸಾಮ್ರಾಜ್ಯದ ಶಕ್ತಿಶಾಲಿ ಆಡಳಿತಗಾರ ಕುಮಾರಗುಪ್ತನ ಬಗ್ಗೆ ಶಾಸನವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Gupta period stairs pillars

ಐದನೇ ಶತಮಾನದ ವಿಶಿಷ್ಟವಾದ ಸಂಖ್ ಲಿಪಿ (ಶಂಖ ಲಿಪಿ ಅಥವಾ ಶೆಲ್ ಲಿಪಿ)ಯಲ್ಲಿ ಇಲ್ಲಿನ  ಕೆತ್ತನೆಗಳಿವೆ. ದೊರೆತಿರುವ ಎಲ್ಲ ಮಾದರಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಮೆಟ್ಟಿಲುಗಳನ್ನು ದೇವಾಲಯದ ಪ್ರವೇಶ ದ್ವಾರ  ಎಂದು ಹೇಳಬಹುದು ಎಂದು ತಿಳಿಸಿದ್ದಾರೆ.

Gupta period stairs pillars

ಮಧ್ಯದಲ್ಲಿ ಒಂದು ವೇದಿಕೆ ಇತ್ತು ಆದರೆ ಸ್ಥಳಾವಕಾಶವಿಲ್ಲದ ಕಾರಣ ಸ್ವಚ್ಛಗೊಳಿಸುವ ಕೆಲಸವನ್ನು ನಿಲ್ಲಿಸಲಾಗಿದೆ.  ನಾಲ್ಕನೇ ಮೆಟ್ಟಿಲು ಅತಿದೊಡ್ಡದಾಗಿದ್ದು ಅದರ ಮೇಲೆ ಐದನೇ ಶತಮಾನದ ವಿಶಿಷ್ಟವಾದ 'ಶಂಖ ಲಿಪಿ' (ಶಂಖ ಲಿಪಿ ಅಥವಾ ಶೆಲ್ ಲಿಪಿ) ಶಾಸನಗಳಿವೆ ಎಂದು ಅಧಿಕಾರಿ ಸ್ವರ್ಣಕರ್ ತಿಳಿಸಿದ್ದಾರೆ.

click me!