ವಾಸ್ತವವಾಗಿ, 2 ನಿಮಿಷ 38 ಸೆಕೆಂಡುಗಳ ಈ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ಹೀರಾಲಾಲ್ ಸೈನಿ ತಮ್ಮೆಲ್ಲಾ ಮಿತಿಗಳನ್ನು ಮೀರಿದ್ದಾರೆ. ಇವರು ಅಜ್ಮೀರ್ ಜಿಲ್ಲೆಯ ಬೇವಾರ್‌ನಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿದ್ದಾರೆ. ಡಿಎಸ್‌ಪಿ ಜೊತೆಗಿರುವ ಮಹಿಳೆ ಅವರೊಂದಿಗೇ ಕಾರ್ಯ ನಿರ್ವಹಿಸುವ ಮಹಿಳಾ ಕಾನ್ಸ್ಟೇಬಲ್ ಎಂಬುವುದು ಉಲ್ಲೇಖನೀಯ. ಅವರಿಬ್ಬರ ಜೊತೆ ಒಂದು ಮಗು ಕೂಡ ಈಜುಕೊಳದಲ್ಲಿ ಆಟವಾಡುತ್ತಿದ್ದು, ಇದು ಮಹಿಳಾ ಕಾನ್‌ಸ್ಟೇಬಲ್‌ಗೆ ಮಗು ಎನ್ನಲಾಗಿದೆ.