GSLV-F17 ಉಡಾವಣಾ ವಾಹನವು 51.7 ಮೀಟರ್ ಎತ್ತರ ಮತ್ತು 420.5 ಟನ್‌ಗಳಷ್ಟು ಉಡಾವಣಾ ತೂಕ ಹೊಂದಿದ್ದು, ಇದು ಭಾರತದ ಅತಿದೊಡ್ಡ ಕಾರ್ಯಾಚರಣಾ ಉಡಾವಣಾ ವಾಹನಗಳಲ್ಲಿ ಒಂದಾಗಿದೆ.
ಸಚಿವ ಜಿತೇಂದ್ರ ಸಿಂಗ್ ಶ್ಲಾಘನೆ
ಇಸ್ರೋದ ಜಿಎಸ್ಎಲ್ವಿ-ಎಫ್ 17 ರಾಕೆಟ್ ಮಿಷನ್ ಯಶಸ್ವಿ ಉಡಾವಣೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಶ್ಲಾಘಿಸಿದ್ದಾರೆ. ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳು ಹೊಸ ಎತ್ತರಕ್ಕೆ ಏರುತ್ತಲೇ ಇವೆ, ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ದೇಶದ ಸ್ಥಾನವನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, 'EOS-05 ಒಂದು ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಭೂ-ಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾಗಿದ್ದು, ಗೋಚರ, ಅತಿಗೆಂಪು, ಮಲ್ಟಿಸ್ಪೆಕ್ಟ್ರಲ್ ಮತ್ತು ಹೈಪರ್‌ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಸುಧಾರಿತ ಇಮೇಜಿಂಗ್ ಅನ್ನು ಸಕ್ರಿಯಗೊಳಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.
ಇಸ್ರೋ ಮುಖ್ಯಸ್ಥ ಭಾಷಣದಲ್ಲಿ ಹೇಳಿದ್ದೇನು?
EOS-05 ಉಡಾವಣೆಯ ನಂತರ ಭಾಷಣ ಮಾಡಿದ ಇಸ್ರೋ ಮುಖ್ಯಸ್ಥ, ಈ ನಡುವೆ ಈ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಸಿಬ್ಬಂದಿರಹಿತ ಗಗನಯಾನ ಕಾರ್ಯಾಚರಣೆಯ ಉಡಾವಣೆಗೆ ಹೊಸ ಹುರುಪಿನಿಂದ ವ್ಯವಸ್ಥಿತ ಕೆಲಸ ನಡೆಯುತ್ತಿದೆ ಎಂದಿದ್ದಾರೆ. ಇದೇ ವೇಳೆ
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ನಾರಾಯಣನ್, ಈ ಹಣಕಾಸು ವರ್ಷದಲ್ಲಿ ನ್ಯಾವಿಗೇಷನ್ ಉಪಗ್ರಹ NVS-03 ಸೇರಿದಂತೆ ಇನ್ನೂ ಆರು ಉಡಾವಣೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.