ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿದೆಯಾ? ಎಂಬ ವಿಚಾರ ಬಹುದೊಡ್ಡ ಚರ್ಚೆಯ ವಸ್ತು. ಈ ನಡುವೆ ಮೋದಿ ಮತ್ತು ದೇವೇಗೌಡರ ಆಪ್ತ ಭೇಟಿ ಹಲವರ ತಲೆಗೆ ಹುಳ ಬಿಡುವಂತೆ ಮಾಡಿದೆ.
ಪ್ರಧಾನಿ ಮೋದಿ ದೇವೇಗೌಡರಿಗೆ ಆತ್ಮೀಯ ಸ್ವಾಗತ ನೀಡಿದ್ದಾರೆ. ಮೋದಿ ಅವರೇ ದೇವೇಗೌಡರ ಕೈಹಿಡಿದು ಕರೆದುಕೊಂಡು ಬಂದು ಆಸನ ನೀಡಿದ್ದಾರೆ.
ಕೃಷಿ ಕಾಯಿದೆ ವಾಪಸ್ ನಂತರ ಮೋದಿ ಮತ್ತು ಗೌಡರ ಭೇಟಿ ಮಹತ್ವ ಪಡೆದುಕೊಂಡಿದೆ. ಭೇಟಿ ನಡುವೆ ದೇವೇಗೌಡರು ಶಂಕರಾಚಾರ್ಯ ಪ್ರತಿಮೆ ಅನಾವರಣ ಮಾಡಿದ್ದಕ್ಕೆ ಮೋದಿ ಅವರನ್ನು ಅಭಿನಂದಿಸಿದ್ದಾರೆ.
Devegowda
ಇಬ್ಬರು ನಾಯಕರ ನಡುವೆ ಬಾಂಧವ್ಯ ಅತ್ಯುತ್ತಮವಾಗಿದೆ. ಈ ಹಿಂದೆ ಗೌಡರ ಆರೋಗ್ಯದಲ್ಲಿ ಏರುಪೇರಾದಾಗ ಮೋದಿ ಅವರೇ ಕರೆ ಮಾಡಿ ವಿಚಾರಿಸಿಕೊಂಡಿದ್ದರು. ಜಿಎಸ್‌ಟಿ ಗೆ ಚಾಲನೆ ನೀಡುವ ವೇಳೆಯೂ ಗೌಡರಿಗೆ ವಿಶೇಷ ಗೌರವ ಸಲ್ಲಿಕೆ ಮಾಡಲಾಗಿತ್ತು.
ಒಂದು ಕಡೆ ಕಾಂಗ್ರೆಸ್ ತನ್ನ ಜತೆಗೆ ಉಳಿದ ಪಕ್ಷಗಳನ್ನು ಸೇರಿಸಿಕೊಂಡು ಮೋದಿ ಮೇಲೆ ಸಮರ ಮಾಡಲು ಮಹಾಘಟಬಂಧನ್ ಹೆಸರಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ. ಈ ನಡುವೆ ಕಾಂಗ್ರೆಸ್ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಗೌಡರು ಮೋದಿ ಜತೆ ಒಂದಿಷ್ಟು ಕಾಲ ಕಳೆದಿದ್ದು ರಾಷ್ಟ್ರದ ರಾಜಕಾರಣದಲ್ಲಿ ಮತ್ತೊಂದು ದಿಕ್ಕು ತೆರೆದುಕೊಳ್ಳಲಿದೆಯಾ ಎನ್ನುವ ಕುತೂಹಲ ಮನೆ ಮಾಡಿದೆ.