ಫ್ರಾನ್ಸ್‌ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್!

First Published | Jul 21, 2020, 2:31 PM IST

ಭಾರತ ಖರೀದಿಸಿದ ರಾಫೆಲ್ ಯುದ್ಧವಿಮಾನಗಳ ಪೈಕಿ ಮೊದಲ ಹಂತದಲ್ಲಿ 5 ಯುದ್ಧ ವಿಮಾನಗಳು ಭಾರತೀಯ ಸೇನೆ ಸೇರಿಕೊಳ್ಳುತ್ತಿದೆ. ಚೀನಾ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ  ಅತ್ಯಾಧುನಿಕ ಹಾಗೂ ಭಾರಿ ಶಸ್ತ್ರಾಸ್ತ್ರ ತುಂಬಿದ ಈ ಯುದ್ಧವಿಮಾನ ಭಾರತ ವಾಯು ಪಡೆ ಸೇರಿಕೊಳ್ಳುತ್ತಿರುವುದು ಮಹತ್ವ ಪಡೆದುಕೊಂಡಿದೆ. 2016ರಲ್ಲಿ ಮಾಡಿದ ಖರೀದಿ ಒಪ್ಪಂದ ಪ್ರಕಾರ ಫ್ರಾನ್ಸ್ ಮೊದಲ ಹಂತದಲ್ಲಿ 5 ಯುದ್ಧವಿಮಾನ ಪೂರೈಸುತ್ತಿದೆ. ವಿಶೇಷ ಅಂದರೆ ಫ್ರಾನ್ಸ್‌ನಿಂದ ಭಾರತಕ್ಕೆ ಈ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆ ಪೈಲೈಟ್‌ಗಳು ವಾಯುಮಾರ್ಗದ ಮೂಲಕ ತರಲಿದ್ದಾರೆ. 

ಮೊದಲ ಹಂತದಲ್ಲಿ 5 ಯುದ್ಧವಿಮಾನಗಳಾದ ರಾಫೆಲ್ ಜೆಟ್ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್ ಆಗಲಿವೆ
undefined
ಹರ್ಯಾಣದ ಅಂಬಾಲಾದಲ್ಲಿರುವ ಏರ್‌ಫೋರ್ಸ್ ಸ್ಟೇಶನ್‌ನಲ್ಲಿ 5 ರಾಫೆಲ್ ಯುದ್ಧವಿಮಾನಗಳು ಬಂದಿಳಿಯಲಿವೆ
undefined

Latest Videos


ರಾಫೆಲ್ ಯುದ್ಧವಿಮಾನ ಹಾರಾಟ ಹಾಗೂ ಆಕ್ರಮಣ ನಡೆಸಲು ಭಾರತೀಯ ವಾಯುಪಡೆ ಕಳೆದೆರಡು ತಿಂಗಳಿನಿಂದ ಫ್ರಾನ್ಸ್‌ನಲ್ಲಿ ತರಬೇತಿ ಪಡೆಯುತ್ತಿದೆ
undefined
ತರಬೇತಿ ಪೂರ್ಣಗೊಳಿಸಿರುವ ಭಾರತೀಯ ವಾಯುಪಡೆ ಯೋಧರು, ರಾಫೆಲ್ ಯುದ್ಧವಿಮಾನದ ಜೊತೆ ಭಾರತಕ್ಕೆ ಆಗಮಿಸಲಿದ್ದಾರೆ
undefined
ಹರ್ಯಾಣದ ಅಂಬಾಲ ಹಾಗೂ ಪಶ್ಚಿಮ ಬಂಗಾಳದ ಹಶಿಮರ ಏರ್‌ಫೋರ್ಸ್ ಸ್ಟೇಶನ್‌ಗಳಲ್ಲಿ ನೂತನ ರಾಫೆಲ್ ಯುದ್ಧವಿಮಾನಗಳ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ
undefined
ಮುಂದಿನ 2 ವರ್ಷಗಳಲ್ಲಿ ಒಟ್ಟು 36 ರಾಫೆಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆ ಸೇರಿಕೊಳ್ಳಲಿದೆ
undefined
2016ರಲ್ಲಿ ಕೇಂದ್ರ ಸರ್ಕಾರ ಫ್ರಾನ್ಸ್‌ನಿಂದ ರಾಫೆಲ್ ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು
undefined
36 ರಾಫೆಲ್ ಯುದ್ಧವಿಮಾನವನ್ನು ಬರೋಬ್ಬರಿ 59,000 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ
undefined
ರಾಫೆಲ್ ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಆರೋಪ ಮಾಡಿತ್ತು
undefined
click me!