ಗುಡ್ ನ್ಯೂಸ್, ಕುನೋ ಅರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾ ಚೀತಾ ಗಾಮಿನಿ!

First Published Mar 10, 2024, 6:29 PM IST

ಕುನೋ ರಾಷ್ಯ್ರೀಯ ಪಾರ್ಕ್‌ನಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಸೌತ್ ಆಫ್ರಿಕಾದಿಂದ ಭಾರತಕ್ಕೆ ತಂದ ಚೀತಾಗಳ ಪೈಕಿ ಗಾಮಿನಿ ಅನ್ನೋ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ.  ಇದೀಗ ಚೀತಾ ಸಂತತಿ 26ಕ್ಕೆ ಏರಿಕೆಯಾಗಿದೆ.
 

ಪ್ರಾಜೆಕ್ಟ್‌ ಚೀತಾದಡಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ತಂದಿರುವ ಚೀತಾಗಳು ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ. ಆರಂಭದಲ್ಲೇ ಬೇಸರದ ಸುದ್ದಿಗಳಿಂದಲೇ ನಿರಾಸೆಗೊಂಡಿದ್ದ ಪ್ರಾಣಿಪ್ರಿಯರಿಗೆ ಇದೀಗ ಡಬಲ್ ಸಂಭ್ರಮ ಮನೆ ಮಾಡಿದೆ. 
 

ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಆಫ್ರಿಕಾದಿಂದ ತಂದ ಚೀತಾಗಳ ಪೈಕಿ ಗಾಮಿನಿ ಅನ್ನೋ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಆಫ್ರಿಕಾದಿಂದ ಭಾರತಕ್ಕೆ ಬಂದ ಚೀತಾಗಳ ಇಲ್ಲಿ ಒಟ್ಟು 13 ಮರಿಗಳಿಗೆ ಜನ್ಮ ನೀಡಿದೆ.
 

ಗಾಮಿನಿ ಚೀತಾ ಜನ್ಮ ನೀಡಿದ 5 ಮರಿಗಳಿಂದ ಇದೀಗ ಭಾರತದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಚೀತಾ ಸಂಸತಿ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಈ ಮರಿಗಳ ಪೋಟೋ ಹಾಗೂ ವಿಡಿಯೋ ಭಾರಿ ವೈರಲ್ ಆಗಿದೆ.
 

ಸಂತಸವನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹಂಚಿಕೊಂಡಿದ್ದಾರೆ. ಸೌತ್ ಆಫ್ರಿಕಾದಿಂದ ಭಾರತಕ್ಕೆ ತಂದ 5 ವರ್ಷದ ಗಾಮಿನಿ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ.
 

ಕುನೋ ರಾಷ್ಟ್ರೀಯ ಅರಣ್ಯ ಸಿಬ್ಬಂದಿಗಳ ಆರೈಕೆ, ಅರಣ್ಯದಲ್ಲಿ ಚೀತಾಗಳಿಗೆ ಯಾವುದೇ ಒತ್ತಡವಿಲ್ಲದ ವಾತಾವರಣ ನಿರ್ಮಿಸಿದ ಕಾರಣ ಅವುಗಳ ಸಂತತಿ ಹೆಚ್ಚಾಗಿದೆ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ.
 

ಈ ವರ್ಷದ ಜ.20ರಂದು ನಮೀಬಿಯಾದಿಂದ ತಂದಿರುವ ಜ್ವಾಲಾ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಇದಕ್ಕೂ ಮೊದಲು ಅದೇ ತಿಂಗಳಲ್ಲಿ ಆಶಾ ಅನ್ನೋ ಚೀತಾ 3 ಮರಿಗಳಿಗೆ ಜನ್ಮ ನೀಡಿತ್ತು. 
 

ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಸಂತತಿ ಬೆಳೆಸಲು ಹಾಗೂ ವನ್ಯಜೀವಿ ಸಮತೋಲನ ಕಾಪಾಡಿಕೊಳ್ಳಲು ಪ್ರಾಜೆಕ್ಟ್ ಚೀತಾ ಯೋಜನೆಯಡಿ ಆಫ್ರಿಕಾದಿಂದ ಚೀತಾಗಳನ್ನು ತರಲಾಗಿದೆ. 

2022ರ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದ 8 ಚಿರತೆಗಳನ್ನು ಕುನೋ ಅರಣ್ಯಕ್ಕೆ ಬಿಟ್ಟಿದ್ದರು. ಬಳಿಕ ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳು ಉದ್ಯಾನವನಕ್ಕೆ ಬಂದಿದ್ದವು.

click me!