ವಯಸ್ಸು ಜಸ್ಟ್‌ ನಂಬರ್: ಬೆಳ್ಳಂಬೆಳಗ್ಗೆ ಕಾಜಿರಂಗದಲ್ಲಿ ಗಜ ಸವಾರಿ ಮಾಡಿದ ಮೋದಿ: ಫೋಟೋಸ್

First Published | Mar 9, 2024, 10:22 AM IST

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬೆಳ್ಳಂಬೆಳಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಅಲ್ಲಿ ಆನೆ ಮೇಲೆ ಕುಳಿತು ಜಂಬೂ ಸವಾರಿ ಮಾಡಿದ್ದಾರೆ. ಈ ವೀಡಿಯೋವನ್ನು ಸ್ವತಃ ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ವಯಸ್ಸು ಕೇವಲ ನಂಬರ್‌ ಮಾತ್ರ ಎಂಬುದನ್ನು ನಮ್ಮ ಪ್ರಧಾನಿಗೆ  ಹೇಳಿ ಮಾಡಿಸಿದಂತಿದೆ. 73ರ ಹರೆಯದಲ್ಲೂ ಉತ್ಸಾಹದ ಚಿಲುಮೆಯಾಗಿರುವ ಪ್ರಧಾನಿ, ಒಂದು ಕ್ಷಣ ಇದಲ್ಲಿ ಮತ್ತೊಂದು ಕ್ಷಣ ಇರಲ್ಲ, ದಿನಕ್ಕೆ ಕೇವಲ ಮೂರೂವರೆ ಗಂಟೆ  ಮಾಡುವ ಪ್ರಧಾನಿ ಸದಾ ಜಾಗರೂಕ ಸದಾ ಆಕ್ಟಿವ್.  

ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬೆಳ್ಳಂಬೆಳಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಅಲ್ಲಿ ಆನೆ ಮೇಲೆ ಕುಳಿತು ಜಂಬೂ ಸವಾರಿ ಮಾಡಿದ್ದಾರೆ. ಈ ವೀಡಿಯೋವನ್ನು ಸ್ವತಃ ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

Tap to resize

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಈ ತಾಣಕ್ಕೆ ಚೊಚ್ಚಲ ಭೇಟಿ ನೀಡಿದ ಪ್ರಧಾನಿ ಮೋದಿ, ಮೊದಲು ಉದ್ಯಾನವನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಆನೆ ಸಫಾರಿ ಮಾಡಿದರು ನಂತರ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು.

ನಿನ್ನೆ ಸಂಜೆಯೇ ಪ್ರಧಾನಿ 2 ದಿನಗಳ ಪ್ರವಾಸಕ್ಕಾಗಿ ಅಸ್ಸಾಂಗೆ ಬಂದಿಳಿದಿದ್ದರು. ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಧಾನಿ ಜೀಪ್‌ನಲ್ಲಿ ಸಫಾರಿ ಮಾಡಿದ್ದಾರೆ. 

ಪ್ರಧಾನಿ ಮೋದಿಗೆ ಉದ್ಯಾನವನದ ನಿರ್ದೇಶಕಿ ಸೋನಾಲಿ ಘೋಷ್ ಹಾಗೂ ಇತರ ಅರಣ್ಯ ಸಿಬ್ಬಂದಿ ಸಾಥ್ ನೀಡಿದ್ದಾರೆ.  ಇಂದು ಮಧ್ಯಾಹ್ನ ಅಸ್ಸಾಂನ ಮೂಲ ಜನಾಂಗವಾದ ಅಹೋಂ ಸಮುದಾಯದ ನಾಯಕ ಜನರಲ್ ಲಚಿತ್ ಬರ್ಪುಕನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಲಚಿತ್ ಬರ್ಪುಕನ್ ಅವರ ಈ ಪ್ರತಿಮೆಯೂ 25 ಅಡಿ ಎತ್ತರವಿದೆ. ನಂತರ ಜೊರ್ಹತ್ ಜಿಲ್ಲೆಯ ಮೆಟೆಲಿ ಪೋಥರ್‌ನಲ್ಲಿ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ 18 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಜೊತೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. 

ಇಂದು ಬೆಳ್ಳಂಬೆಳಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಪಾರ್ಕ್‌ನಲ್ಲಿ ಆನೆ ಸವಾರಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸುಂದರ ಫೋಟೋ  

ಕಾಜಿರಂಗದಲ್ಲಿರುವ ಆನೆಗಳಾದ ಲಖಿಮೈ, ಪ್ರದ್ಯುಮ್ನ ಹಾಗೂ ಫೂಲ್‌ಮೈ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಬ್ಬಿನ ಜಲ್ಲೆಗಳನ್ನು ತಿನ್ನಿಸಿದರು.

ಕಾಜಿರಂಗ ಉದ್ಯಾನವನವೂ ಘೇಂಡಾಮೃಗಗಳಿಗೆ ಪ್ರಸಿದ್ಧಿ ಪಡೆದಿದ್ದರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಆನೆಗಳು ಇವೆ ಎಂದು ಪ್ರಧಾನಿ ಹೇಳಿದ್ದಾರೆ.

ಲಖಿಮೈ, ಪ್ರದ್ಯುಮ್ನ ಹಾಗೂ ಫೂಲ್‌ಮೈ ಆನೆಗಳಿಗೆ ಕಬ್ಬಿನ ಜಲ್ಲೆ ತಿನ್ನಿಸಿದೆ. ಘೇಂಡಾಮೃಗಗಳಲ್ಲದೇ ಇಲ್ಲಿ ಆನೆಗಳು ಬಹಳಷ್ಟಿವೆ.

ಇದರ ಜೊತೆಗೆ ಬೇರೆ ಬೇರೆ ಪ್ರಭೇದಗಳ ಹಲವು ಪ್ರಾಣಿಗಳು ಇವೆ ಎಂದು ಪ್ರಧಾನಿ ಹೇಳಿದ್ದಾರೆ.  ಈ ಫೋಟೋಗಳನ್ನು ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

Latest Videos

click me!