3 ಅಡಿ ಎತ್ತರ, 18 ಕೆಜಿ ತೂಕ; ಸವಾಲುಗಳಿಗೆ ಸಡ್ಡು ಹೊಡೆದ ಜಗತ್ತಿನ ಅತಿ ಕುಳ್ಳ ವೈದ್ಯ

First Published | Mar 7, 2024, 5:38 PM IST

ಕೇವಲ 3 ಅಡಿ 4 ಇಂಚು ಎತ್ತರದ, 18 ಕೆಜಿ ತೂಕದ ಗಣೇಶ್ ವೈದ್ಯನಾಗುವ ತಮ್ಮ ಕನಸನ್ನು ಮುಂದುವರಿಸಲು ಹಲವಾರು ಸವಾಲುಗಳನ್ನು ಜಯಿಸಿದ್ದಾರೆ. 

ಗುಜರಾತ್ ಮೂಲದ ಗಣೇಶ್ ಬಾರಯ್ಯ ಅವರು ವಿಶ್ವದಲ್ಲೇ ಅತ್ಯಂತ ಕಡಿಮೆ ಎತ್ತರದ ವೈದ್ಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.  ಮೂರ್ತಿ ಚಿಕ್ಕದಾದರೂ ಈ ಸಾಧನೆ ದೊಡ್ಡದೇ.

ಕೇವಲ 3 ಅಡಿ 4 ಇಂಚು ಎತ್ತರದಲ್ಲಿ ನಿಂತಿರುವ ಗಣೇಶ್ ಅವರ ಸಂಕಲ್ಪ ಮತ್ತು ಉತ್ಸಾಹವು ಎಲ್ಲಾ ಅಡೆತಡೆಗಳನ್ನು ಎದುರಿಸಲು ಸಹಾಯ ಮಾಡಿದೆ. 

Latest Videos


ಗಣೇಶ್ ಸವಾಲುಗಳು ಕುಬ್ಜತೆಯಿಂದ ಹುಟ್ಟಿಕೊಂಡಿವೆ, ಇದು ಅವರ ದೇಹದ 72% ರಷ್ಟು ಪರಿಣಾಮ ಬೀರುವ ಲೊಕೊಮೊಟಿವ್ ಅಸಾಮರ್ಥ್ಯಕ್ಕೆ ಕಾರಣವಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧಾರಣ ಕೌಶಲ್ಯ ಮತ್ತು ಜ್ಞಾನದ ಹೊರತಾಗಿಯೂ, ಗಣೇಶ್ ಅವರ ಎತ್ತರದಿಂದಾಗಿ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ.

2018 ರಲ್ಲಿ, ಬೋರ್ಡ್‌ಗಳಲ್ಲಿ 87 ಪ್ರತಿಶತ ಮತ್ತು NEET ನಲ್ಲಿ 233 ಅಂಕಗಳನ್ನು ಗಳಿಸಿದ್ದರೂ ಗುಜರಾತ್ ಸರ್ಕಾರವು MBBS ಅನ್ನು ಮುಂದುವರಿಸಲು ಅನುಮತಿಯನ್ನು ನಿರಾಕರಿಸಿತು. ತನ್ನ ಶಾಲೆಯ ಪ್ರಾಂಶುಪಾಲರ ಸಹಾಯ ಪಡೆದು ಜಿಲ್ಲಾಧಿಕಾರಿ, ರಾಜ್ಯ ಶಿಕ್ಷಣ ಸಚಿವರನ್ನು ಸಂಪರ್ಕಿಸಿ ನಂತರ ಗುಜರಾತ್ ಹೈಕೋರ್ಟಿನ ಬಾಗಿಲು ತಟ್ಟಿದರು ಗಣೇಶ್. 

ನಾವು ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಸೋತೆವು. ಆದರೆ ನಂತರ ನಾವು ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದೆವು.2018 ರಲ್ಲಿ, ನಾನು ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ನಂತರದ ವರ್ಷ ಎಂಬಿಬಿಎಸ್ ಸೇರಿದೆ ಎಂದು ವಿವರಿಸುತ್ತಾರೆ ಗಣೇಶ್.

ಎತ್ತರ ನೋಡಿ ರೋಗಿಗಳು ಅವರ ಸಾಮರ್ಥ್ಯವನ್ನು ಅನುಮಾನಿಸುತ್ತಾರಂತೆ. ಆದರೆ, ಅವರ ಭರವಸೆಯ ಮಾತುಗಳನ್ನು ಕೇಳುತ್ತಲೇ ಧೈರ್ಯವಾಗಿ ಚಿಕಿತ್ಸೆ ಪಡೆಯುತ್ತಾರೆ.

ನನ್ನ ಎತ್ತರ ಕಡಿಮೆ ಇರುವ ಕಾರಣ ತುರ್ತು ಪ್ರಕರಣಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಗುಜರಾತ್‌ನ ಗಣೇಶ್.

ರೈತನ ಮಗನಾದ ಗಣೇಶ್ ಹಲವಾರು ಸವಾಲುಗಳ ನಡುವೆಯೂ ವೈದ್ಯನಾಗುವ ಸಂಕಲ್ಪ ಸಾಧಿಸಿದ್ದು ಸಣ್ಣಪುಟ್ಟ ಸಮಸ್ಯೆಯನ್ನೇ ದೊಡ್ಡದು ಮಾಡುವವರಿಗೆ ಸ್ಪೂರ್ತಿಯಾಗಬೇಕಿದೆ.

click me!