ಭಾರತದ ಮೇಲೆ ಕಡಲ ಮುನಿಸು, ಎಲ್‌ ನಿನೋ ಖಚಿತಪಡಿಸಿದ ಭಾರತೀಯ ಹವಾಮಾನ ಇಲಾಖೆ

Published : Jun 13, 2026, 10:42 AM IST

ಪ್ರಶಾಂತ್ ಮಹಾಸಾಗರದಲ್ಲಿ 'ಎಲ್ ನಿನೋ' ಹವಾಮಾನ ವ್ಯವಸ್ಥೆಯು ಅಧಿಕೃತವಾಗಿ ಸಕ್ರಿಯಗೊಂಡಿದ್ದು, ಇದು ಭಾರತದ ನೈಋತ್ಯ ಮುಂಗಾರು ಮಾರುತಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ. ಈ ವಿದ್ಯಮಾನದಿಂದಾಗಿ ದೇಶದ ಹಲವು ಭಾಗಗಳಲ್ಲಿ ಬರಗಾಲದ ಭೀತಿ ಎದುರಾಗಲಿದೆ.

PREV
15
ಪ್ರಶಾಂತ್ ಮಹಾಸಾಗರದಲ್ಲಿ 'ಎಲ್ ನಿನೋ' ಸಕ್ರಿಯ

ವಿಶ್ವದಾದ್ಯಂತ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದ ಆ ಭೀಕರ ಆತಂಕ ಈಗ ನಿಜವಾಗಿದೆ. ಪ್ರಶಾಂತ್ ಮಹಾಸಾಗರದಲ್ಲಿ 'ಎಲ್ ನಿನೋ' (El Nino) ಹವಾಮಾನ ವ್ಯವಸ್ಥೆಯು ಅಧಿಕೃತವಾಗಿ ಸಕ್ರಿಯಗೊಂಡಿದ್ದು, ಇದು ಭಾರತದ ಮೇಲೆ ದೊಡ್ಡ ಸಂಕಷ್ಟ ತರಲಿದೆ. ನೈಋತ್ಯ ಮುಂಗಾರು ಮಾರುತಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುವ ಈ ಪ್ರಕೃತಿ ವಿದ್ಯಮಾನವು ಸದ್ಯ ಇಡೀ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.

25
ದೇಶದ ಹಲವು ರಾಜ್ಯಗಳಲ್ಲಿ ಬರಗಾಲದ ಭೀತಿ

ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಅರ್ಥ್ ಸಿಸ್ಟಮ್ ಸೈನ್ಸ್ ಆರ್ಗನೈಸೇಶನ್ (ESSO) ಬಿಡುಗಡೆ ಮಾಡಿರುವ ತಾಜಾ ಬುಲೆಟಿನ್ ಪ್ರಕಾರ, ಎಲ್ ನಿನೋ ಪ್ರಭಾವದಿಂದಾಗಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ದೇಶದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಲಿದ್ದು, ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ತಜ್ಞರು ದೃಢಪಡಿಸಿದ್ದಾರೆ.

35
ಬಿತ್ತನೆ ಕಾರ್ಯ ಕುಂಠಿತ, ರೈತರಲ್ಲಿ ಆತಂಕ

ಸಾಮಾನ್ಯವಾಗಿ ಜೂನ್ 15ರ ಒಳಗಾಗಿ ದೇಶದ ಬಹುತೇಕ ರಾಜ್ಯಗಳಿಗೆ ಮುಂಗಾರು ಮಳೆ ಪ್ರವೇಶಿಸಬೇಕಿತ್ತು. ಆದರೆ, ಪ್ರಶಾಂತ್ ಮಹಾಸಾಗರದಲ್ಲಿ ಸೃಷ್ಟಿಯಾಗಿರುವ ಎಲ್ ನಿನೋ ಬಿಕ್ಕಟ್ಟಿನಿಂದಾಗಿ ಮುಂಗಾರು ಮಾರುತಗಳ ಪ್ರವೇಶ ವಿಳಂಬವಾಗಿದೆ. ಮಳೆ ಬಾರದ ಕಾರಣ ದೇಶಾದ್ಯಂತ ರೈತರ ಬಿತ್ತನೆ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕೃಷಿ ವಲಯಕ್ಕೆ ನೇರ ಹೊಡೆತ ಬಿದ್ದಿದೆ.

45
ಭಾರತದ ಅರ್ಥವ್ಯವಸ್ಥೆಗೆ ಭಾರಿ ಪೆಟ್ಟು

ಹವಾಮಾನ ಇಲಾಖೆಯ ಪ್ರಕಾರ, ಎಲ್ ನಿನೋ ಪ್ರಭಾವದಿಂದಾಗಿ ಎರಡು ಪ್ರಮುಖ ಅಪಾಯಗಳು ಎದುರಾಗಲಿವೆ; ಮೊದಲನೆಯದು ತಾಪಮಾನದಲ್ಲಿ ವಿಪರೀತ ಏರಿಕೆ ಹಾಗೂ ಎರಡನೆಯದು ಮಳೆಯ ಕೊರತೆ. ಭಾರತೀಯ ಕೃಷಿ ರಂಗವು ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಆಶ್ರಯಿಸಿರುವುದರಿಂದ, ಮಳೆಯ ಅಭಾವವು ನೇರವಾಗಿ ದೇಶದ ಕೋಟ್ಯಂತರ ಜನರ ಮೇಲೆ ಮತ್ತು ಭಾರತದ ಒಟ್ಟಾರೆ ಆರ್ಥಿಕತೆಯ (Economy) ಮೇಲೆ ಅತ್ಯಂತ ಅಪಾಯಕಾರಿ ಪರಿಣಾಮ ಬೀರಲಿದೆ.

55
ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಸರ್ಕಾರ

ಎಲ್ ನಿನೋ ಸಕ್ರಿಯವಾಗಿರುವ ಕಾರಣ ಉಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಭಾರತ ಸರ್ಕಾರ ಮತ್ತು ಹವಾಮಾನ ಇಲಾಖೆ ಹದ್ದಿನ ಕಣ್ಣಿಟ್ಟಿವೆ. ಮಳೆಯ ಕೊರತೆಯಿಂದ ಎದುರಾಗಬಹುದಾದ ಜಲಕ್ಷಾಮ ಹಾಗೂ ಕೃಷಿ ಬಿಕ್ಕಟ್ಟನ್ನು ನಿವಾರಿಸಲು ಸರ್ಕಾರ ಈಗಾಗಲೇ ವಿವಿಧ ಮುನ್ನೆಚ್ಚರಿಕೆ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಈ ಕಡಲ ಸಂಕಷ್ಟ ಸದ್ಯಕ್ಕೆ ದೇಶದ ಜನರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories