ಸೋಶಿಯಲ್ ಮೀಡಿಯಾ ಬ್ಯೂಟಿ ಇನ್‌ಫ್ಲುಯೆನ್ಸರ್ ಸಂದೀಪಾ ಅರೆಸ್ಟ್, ಇಡಿ ಅಧಿಕಾರಿಗಳ ದಾಳಿ

Published : Aug 13, 2025, 10:28 PM IST

ಬ್ಯೂಟಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ, ಸೋಶಿಯಲ್ ಮೀಡಿಯಾದಲ್ಲಿ ಬ್ಯೂಟಿ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿರುವ ಸಂದೀಪಾ ವಿರ್ಕ್ ಅರೆಸ್ಟ್ ಆಗಿದ್ದಾರೆ. 

PREV
15

ಸಂದೀಪಾ ವಿರ್ಕ್ ಸೋಶಿಯಲ್ ಮೀಡಿಯಾ ಮೂಲಕ ಬ್ಯೂಟಿ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ತಳುಕು ಬಳುಕಿನ ಫೋಟೋ, ಸೌಂದರ್ಯ, ಬ್ಯೂಟಿ ಎಂದೆಲ್ಲಾ ಅಪಾರ ಫಾಲೋವರ್ಸ್ ಕೂಡ ಪಡೆದುಕೊಂಡಿದ್ದಾರೆ. ಇದಕ್ಕೂ ಮುಖ್ಯವಾಗಿ ಇದೇ ಸಂದೀಪಾ ವ್ರಿಕ್ ಬ್ಯೂಟಿ ಉತ್ಪನ್ನಗಳನ್ನು ಮಾರಾಟವೂ ಮಾಡುತ್ತಾ ಹಲವರ ಬ್ಯೂಟಿಯನ್ನು ಡಬಲ್ ಮಾಡಿದ್ದಾರೆ. ಇದೀಗ ಇಡಿ ಅಧಿಕಾರಿಗಳು ಈ ಸಂದೀಪಾ ವ್ರಿಕ್ ಅರೆಸ್ಟ್ ಮಾಡಿದ್ದಾರೆ.

25

ಜನರಿಗೆ ತಪ್ಪು ಮಾಹಿತಿ ನೀಡಿ ಬ್ಯೂಟಿ ಉತ್ಪನ್ನಗಳನ್ನು ಸಂದೀಪಾ ಮಾರಾಟ ಮಾಡುತ್ತಿದ್ದರು. ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್‌ಡಿಎ) ಅನುಮತಿ ನೀಡಿರುವ ಉತ್ಪನ್ನ ಎಂದು ಮಾರಾಟ ಮಾಡಿದ್ದಾಳೆ. ಇಷ್ಟೇ ಅಲ್ಲ ಇಲ್ಲಿ ಅಕ್ರಮವಾಗಿ ಹಣದ ವರ್ಗಾವಣೆ ನಡೆದಿದೆ. ಇಷ್ಟೇ ಅಲ್ಲ ಗ್ರಾಹಕರನ್ನು ವಂಚಿಸಿ ಸ್ಥಿರಾಸ್ಥಿಯನ್ನು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

35

ಮನಿ ಲಾಂಡರಿಂಗ್ ವಾಸನೆ ಸಿಗುತ್ತಿದ್ದಂತೆ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈಕೆಯ ಬ್ಯೂಟಿ ಉತ್ಪನ್ನದ ವೆಬ್‌ಸೈಟ್, ಆಕೆಯ ಹಣ ವರ್ಗಾವಣೆ, ವಹಿವಾಟಿನ ಕುರಿತು ರಹಸ್ಯವಾಗಿ ತನಿಖೆ ನಡೆಸಿದ್ದಾರೆ. ಈ ವೇಳೆ ಸಂಗ್ರಹಿಸಿದ ದಾಖಲೆಗಳು ಸೇರಿದಂತೆ ಪ್ರಮುಖ ಸಾಕ್ಷಿಗಳ ಆಧಾರದಲ್ಲಿ ಸಂದೀಪಾ ವಿರ್ಕ್ ಯನ್ನು ಅರೆಸ್ಟ್ ಮಾಡಿದ್ದಾರೆ.

45

ಕೋರ್ಟ್ ಮುಂದೆ ಹಾಜರುಪಡಿಸಿ ಇಡಿ ಕಸ್ಟಡಿ ಪಡೆದಿರುವ ಅಧಿಕಾರಿಗಳು ತನಿಖ ತೀವ್ರಗೊಳಿಸಿದ್ದಾರೆ. ಈಕೆಯ ಎಲ್ಲಾ ವ್ಯವಹಾರದಲ್ಲಿ ಅಕ್ರಮಗಳು ಪತ್ತೆಯಾಗಿದೆ. ವಾಣಿಜ್ಯ ಉದ್ದೇಶದ ಯಾವುದೇ ವ್ಯವಹಾರದಲ್ಲಿ ನಿಯಮ ಪಾಲನೆಯಾಗಿಲ್ಲ. ತನಿಖೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಅಂಗಾರೈ ನಟರಾಜನ್ ಸೇತುರಾಮನ್ ಜೊತೆ ಸಂಪರ್ಕವಿರುವುದು ಪತ್ತೆಯಾಗಿದೆ.

55

ಹಲವು ಉತ್ಪನ್ನಗಳ ಹೆಸರಿನಲ್ಲಿ ಗ್ರಾಹಕರಿಗೆ ಮೋಸ ಮಾಡಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ನಾಳೆ ಈಕೆಯನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಿ ಇಡಿ ಅಧಿಕಾರಿಗಳು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಇತ್ತ ಅಂಗಾರೈ ನಟರಾಜನ್ ಸೇತುರಾಮನ್ ತನಗೆ ಸಂದೀಪಾ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಇಡಿ ಆರೋಪವನ್ನು ಅಲ್ಲಗೆಳೆದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories