ಬಿಜೆಪಿಯನ್ನು ಹಿಂದಿಕ್ಕಿದ ಕಾಂಗ್ರೆಸ್; ಯಾರಿಗೆ ಎಷ್ಟು ಫಾಲೋವರ್ಸ್?

Published : Aug 12, 2025, 12:12 PM ISTUpdated : Aug 12, 2025, 12:15 PM IST

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಫಾಲೋವರ್ಸ್‌ಗಳ ಸಂಖ್ಯೆಗಳನ್ನು ಹೋಲಿಸಲಾಗಿದೆ. ಕೆಲವು ವೇದಿಕೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವೆಡೆ ಬಿಜೆಪಿ ಮುನ್ನಡೆ ಸಾಧಿಸಿದೆ. ಮೋದಿ ಮತ್ತು ರಾಹುಲ್ ಗಾಂಧಿ ಅವರ ವೈಯಕ್ತಿಕ ಖಾತೆಗಳ ಫಾಲೋವರ್ಸ್‌ಗಳ ಮಾಹಿತಿಯನ್ನೂ ನೀಡಲಾಗಿದೆ.

PREV
17
ಸೋಶಿಯಲ್ ಮೀಡಿಯಾ

ಇಂದು ಏನೇ ವಿಷಯ ಬೇಕಿದ್ದರೂ ಜನರು ಸೋಶಿಯಲ್ ಮೀಡಿಯಾ ಮೊರೆ ಹೋಗುತ್ತಾರೆ. ರಾಜಕೀಯ ಪಕ್ಷಗಳು ತಮ್ಮ ವಿಚಾರಗಳನ್ನು ಜನರ ಮುಂದಿಡಲು ಸೋಶಿಯಲ್ ಮೀಡಿಯಾ ಸಹಾಯ ಪಡೆದುಕೊಳ್ಳುತ್ತವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಮತ್ತು ಥ್ರೆಡ್ ಅತ್ಯಧಿಕವಾಗಿ ಬಳಕೆ ಮಾಡಲಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣದ ಒಂದು ವೇದಿಕೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿದೆ.

27
ಅತ್ಯಧಿಕ ಫಾಲೋವರ್ಸ್‌

ಈ ಪ್ಲಾಟ್‌ಫಾರಂನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಅತ್ಯಧಿಕ ಫಾಲೋವರ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಎಕ್ಸ್ ಮತ್ತು ಥ್ರೆಡ್ ಖಾತೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಫಾಲೋವರ್ಸ್‌ಗಳ ಸಂಖ್ಯೆ ಎಷ್ಟಿದೆ ಎಂದು ನೋಡೋಣ ಬನ್ನಿ.

37
ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ ಪ್ಲಾಟ್‌ಫಾರಂನಲ್ಲಿ ಬಿಜೆಪಿಗಿಂತ ಕಾಂ‌ಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

ಬಿಜೆಪಿ: 8.3 ಮಿಲಿಯನ್

ಕಾಂಗ್ರೆಸ್: 8.6 ಮಿಲಿಯನ್

47
ಫೇಸ್‌ಬುಕ್‌

ಇನ್ನು ಫೇಸ್‌ಬುಕ್‌ ನಲ್ಲಿ ಬಿಜೆಪಿಯೇ ಮುಂದಿದೆ.

ಬಿಜೆಪಿ: 17 ಮಿಲಿಯನ್

ಕಾಂಗ್ರೆಸ್: 7.8 ಮಿಲಿಯನ್

57
ಎಕ್ಸ್ ಖಾತೆ

ಎಕ್ಸ್ ಖಾತೆಯಲ್ಲಿಯೂ ಬಿಜೆಪಿಯೇ ಅತ್ಯಧಿಕ ಫಾಲೋವರ್ಸ್‌ಗಳನ್ನು ಹೊಂದಿದೆ.

ಬಿಜೆಪಿ: 23.2 ಮಿಲಿಯನ್

ಕಾಂಗ್ರೆಸ್: 11.4 ಮಿಲಿಯನ್

67
ನರೇಂದ್ರ ಮೋದಿ-ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ- ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ

ಸದ್ಯ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ದೇಶದ ಪ್ರಮುಖ ನಾಯಕರಾಗಿದ್ದು, ಇವರ ವೈಯಕ್ತಿಕ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈವರೆಗೆ (12ನೇ ಆಗಸ್ಟ್ 2025) ಎಷ್ಟು ಜನ ಫಾಲೋವರ್ಸ್ ಇದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

77
ಫಾಲೋವರ್ಸ್

ಫೇಸ್‌ಬುಕ್‌

  • ರಾಹುಲ್ ಗಾಂಧಿ: 7.9 ಮಿಲಿಯನ್
  • ನರೇಂದ್ರ ಮೋದಿ: 50 ಮಿಲಿಯನ್

ಎಕ್ಸ್

  • ರಾಹುಲ್ ಗಾಂಧಿ: 28.1 ಮಿಲಿಯನ್
  • ನರೇಂದ್ರ ಮೋದಿ: 109 ಮಿಲಿಯನ್

ಇನ್‌ಸ್ಟಾಗ್ರಾಂ

  • ರಾಹುಲ್ ಗಾಂಧಿ: 10.9 ಮಿಲಿಯನ್
  • ನರೇಂದ್ರ ಮೋದಿ: 96.3 ಮಿಲಿಯನ್
Read more Photos on
click me!

Recommended Stories