'BOOK, ONLY IF AT LEAST 1 LOWER BERTH IS ALLOCATED' ಆಯ್ಕೆ ಮಾಡಿ. ಈ ಆಯ್ಕೆ ಮಾಡಿದರೆ, ನಿರ್ದಿಷ್ಟ ಬರ್ತ್ ಲಭ್ಯವಿದ್ದರೆ ಮಾತ್ರ ಟಿಕೆಟ್ ಬುಕ್ ಆಗುತ್ತದೆ. ಇಲ್ಲದಿದ್ದರೆ, ಟಿಕೆಟ್ ಬುಕ್ ಆಗುವುದಿಲ್ಲ, ಹಣವನ್ನು ನಿಗದಿತ ಸಮಯದೊಳಗೆ ಮರಳಿಸಲಾಗುತ್ತದೆ.
ಹಂತ 4: 'Autopay' ಕ್ಲಿಕ್ ಮಾಡಿ IRCTCಯ i-Pay ಪೇಮೆಂಟ್ ಗೇಟ್‌ವೇ ಆಯ್ಕೆ ಮಾಡಿ. IRCTCಯ iPay ಪೇಮೆಂಟ್ ಗೇಟ್‌ವೇಯ ಆಟೋಪೇ ವಿಭಾಗದಲ್ಲಿ UPI (OTM) ಅಥವಾ 'ಡೆಬಿಟ್ ಕಾರ್ಡ್ (OTM)' ಅಥವಾ 'ಕ್ರೆಡಿಟ್ ಕಾರ್ಡ್ (OTM)' ಮೂಲಕ ಪಾವತಿಸಬಹುದು.
ನಿಮ್ಮ ನಿರ್ದಿಷ್ಟ ಬರ್ತ್ ಆಯ್ಕೆ ಲಭ್ಯವಿದ್ದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇಲ್ಲದಿದ್ದರೆ, ಹಣ ನಿಮ್ಮ ಖಾತೆಯಲ್ಲಿಯೇ ಉಳಿಯುತ್ತದೆ.
"ವಹಿವಾಟು ವಿಫಲವಾದರೆ, 30 ನಿಮಿಷಗಳಲ್ಲಿ ಹಣ ಮರಳಿಸಲಾಗುತ್ತದೆ, ಇಲ್ಲದಿದ್ದರೆ support@autope.in ನಲ್ಲಿ ಸಂಪರ್ಕಿಸಿ" ಎಂದು IRCTC ಹೇಳುತ್ತದೆ.