10 ರೂ. ನಾಣ್ಯಗಳ ಚಲಾವಣೆ ಬಗ್ಗೆ ಆರ್‌ಬಿಐ ಸ್ಪಷ್ಟನೆ

First Published Oct 28, 2024, 12:33 PM IST

ರಾಜ್ಯ ಸೇದರಿದಂತೆ ದೇಶದ ವಿವಿಧ ಭಾಗಗಳಲ್ಲಿ 10 ರೂ. ನಾಣ್ಯಗಳನ್ನು ಕೊಟ್ಟರೆ ಚಲಾವಣೆಯಲ್ಲಿಲ್ಲ ಎಂದು ಹೇಳುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ, ಕೆಲವೊಂದು ಅಂಗಡಿ ಮುಂಗಟ್ಟುಗಳಲ್ಲಿ ಈ 10 ರೂ. ನಾಣ್ಯ ಕೊಟ್ಟರೆ ಅವುಗಳನ್ನು ಪಡೆಯದೇ ವಾಪಸ್ ಕಳಿಸುತ್ತಾರೆ. ಹಾಗಾದರೆ, ಈ ನಾಣ್ಯಗಳು ಚಲಾವಣೆಯಲ್ಲಿವೆಯೇ ಅಥವಾ ಇಲ್ಲವೇ ಎಂಬ ಸಂದೇಹ ಬಹಳ ಜನರಲ್ಲಿದೆ. ಈ ನಾಣ್ಯಗಳು ಚಲಾವಣೆಯಲ್ಲಿಲ್ಲ ಎಂದು ನಿರ್ದಿಷ್ಟವಾಗಿ ಘೋಷಿಸಲಾಗಿಲ್ಲ. ಆದರೆ, ಅವು ಚಲಾವಣೆಯಲ್ಲಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿ ಹೆಚ್ಚಾಗಿದೆ. ಅವುಗಳನ್ನು ಬಳಸುವುದನ್ನೇ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ RBI ಸ್ಪಷ್ಟನೆ ನೀಡಿರುವುದು ಮಹತ್ವದ್ದಾಗಿದೆ.

ದೇಶದಲ್ಲಿ 10 ರೂ. ನಾಣ್ಯದ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಈ ನಾಣ್ಯಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾಣಿಸುತ್ತಿಲ್ಲ. ಏಕೆಂದರೆ.. ಇವು ಚಲಾವಣೆಯಲ್ಲಿಲ್ಲ ಎಂಬ ಭಾವನೆ ಬಹಳ ಜನರಿಗಿದೆ. ಬಹಳಷ್ಟು ಜನ ಈ ನಾಣ್ಯವನ್ನು ತೆಗೆದುಕೊಳ್ಳಲು ಇಷ್ಟಪಡುತ್ತಿಲ್ಲ. ನಾವು ಈ ನಾಣ್ಯವನ್ನು ಕೊಟ್ಟರೆ ಇದನ್ನು ನಾವು ಸ್ವೀಕರಿಸುದವುದಿಲ್ಲ ಎಂದು ಸಾರಾಸಗಟಾಗಿ ಹೇಳಿಬಿಡುತ್ತಾರೆ. ಅಲ್ಲಿಂದ ನಾವು ವ್ಯಾಪಾರ ಮಾಡಲಾಗದೇ ವಾಪಸ್ ಹೋಗಬೇಕಾಗುತ್ತದೆ.

ಇಂಡಿಯನ್ ಬ್ಯಾಂಕ್ ಇತ್ತೀಚೆಗೆ ಒಂದು ಮಹತ್ವದ ಘೋಷಣೆ ಮಾಡಿದೆ. 10 ರೂ. ನಾಣ್ಯಗಳನ್ನು ನೀಡಿದರೂ ತೆಗೆದುಕೊಳ್ಳಲು ಹಿಂಜರಿಯುವವರು ಬಹಳಷ್ಟು ಮಂದಿ. ನಾಣ್ಯ ಚಲಾವಣೆಯಲ್ಲಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ಹೀಗಾಗಿ, ಯಾರೇ 10 ರೂ. ನಾಣ್ಯವನ್ನು ಕೊಟ್ಟರೂ ಅದನ್ನು ಸ್ವೀಕಾರ ಮಾಡಬೇಕು. ಆದರೆ, ಈ ರೀತಿ ನಾಣ್ಯ ಸ್ವೀಕಾರ ಮಾಡದಿರುವುದು ಸರ್ಕಾರಕ್ಕೆ ಹಾಗೂ ಆರ್‌ಬಿಐಗೆ ಮುಜುಗರ ಉಂಟಾಗಿದೆ.

Latest Videos


ಕರೆನ್ಸಿ ನೋಟುಗಳ ಕೊರತೆ

ದೇಶದಲ್ಲಿ 10 ರೂ. ನಾಣ್ಯಗಳನ್ನು ತೆಗೆದುಕೊಳ್ಳದಿರುವುದು ಅಪರಾಧ ಎಂದು ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಘೋಷಿಸಿದೆ. ಇತ್ತೀಚೆಗೆ, ಇಂಡಿಯನ್ ಬ್ಯಾಂಕ್ 10 ರೂ. ನಾಣ್ಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಹತ್ತು ರೂ. ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ಅದನ್ನು ಸ್ವೀಕಾರ ಮಾಡಬೇಕು ಎಂದು ಹೇಳಲಾಗುತ್ತಿದೆ.

10 ರೂ. ನಾಣ್ಯ:

ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ, ಮಾರುಕಟ್ಟೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ತಮ್ಮ  ವ್ಯಾಪಾರ ವಹಿವಾಟುಗಳಿಗೆ ಈ 10 ರೂ. ನಾಣ್ಯಗಳನ್ನು ಬಳಸಬೇಕೆಂದು ಆರ್‌ಬಿಐ ಸೂಚಿಸಿದೆ. ಆದರೂ, ಬಹಳಷ್ಟು ಜನ ಇನ್ನೂ 10 ರೂ. ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದರಿಂದ ನಾಣ್ಯ ಪಡೆಯದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಬ್ಯಾಂಕ್ ಸಿಬ್ಬಂದಿ ಆಲೋಚನೆ ಮಾಡಿದ್ದಾರೆ.

RBI

ಇದರಿಂದ ಮಾರುಕಟ್ಟೆಯಲ್ಲಿ ಈ ನಾಣ್ಯಗಳ ಚಲಾವಣೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆಯಲ್ಲಿ 10 ರೂ. ನೋಟುಗಳಿಗೂ ಕೊರತೆ ಉಂಟಾಗಿರುವುದು ಕಂಡುಬರುತ್ತಿದೆ. ಇನ್ನು ದೇಶದಲ್ಲಿ ಜಾರಿಗೆ ತಂದಿರುವ 10 ರೂ. ಹೊಸ ಮಾದರಿಯ ನೋಟುಗಳು ಹೆಚ್ಚು ಗಟ್ಟುಯಾಗಿಲ್ಲ. ತೆಳುವಾದ ಪೇಪರ್‌ನಂತಿದ್ದು ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತಿಲ್ಲ. ಇನ್ನು ಸರ್ಕಾರದಿಂದ ಹೆಚ್ಚಾಗಿ ಹತ್ತು ರೂ. ನೋಟುಗಳನ್ನು ಮುದ್ರಣ ಮಾಡಿಲ್ಲ. ಹೀಗಾಗಿ, ಜನರ ಬಳಕೆಗೆ ದೀರ್ಘಕಾಲಿಕವಾಗಿ ಬಳಕೆಗೆ ಅನುಕೂಲ ಆಗುವಂತೆ 10 ರೂ. ನಾಣ್ಯಗಳನ್ನು ಚಲಾವಣೆಗ ತಂದಿದೆ. ಆದರೆ, ಜನರು ಈ 10 ರೂ. ನಾಣ್ಯಗಳನ್ನು ಬಳಸದಿರುವುದು ಸರ್ಕಾರ ಮತ್ತು ಆರ್‌ಬಿಐ ಬ್ಯಾಂಕ್‌ ಅನ್ನು ಪೇಚಿಗೆ ಸಿಲುಕುವಂತೆ ಮಾಡಿವೆ.

click me!