ಈ ನಂಬರ್‌ನಿಂದ ಕರೆ ಬಂದರೆ ಉತ್ತರಿಸಬೇಡಿ, ಎಚ್ಚರ ಖಾಲಿಯಾಗಬಹುದು ನಿಮ್ಮ ಬ್ಯಾಂಕ್ ಖಾತೆ!

First Published | Oct 27, 2024, 5:28 PM IST

ಕೆಲ ಅಂತಾರಾಷ್ಟ್ರೀಯ ನಂಬರ್, ಮೂರು ಸಂಖ್ಯೆ ಅಥವಾ ನಾಲ್ಕು ಸಂಖ್ಯೆಯ ಕೆಲ ನಂಬರ್‌ಗಳಿಂದ ಕರೆ ಬಂದರೆ ಉತ್ತರಿಸಬೇಡಿ. ಈ ಕರೆಗಳಿಗೆ ಉತ್ತರಿಸಿದರೆ ನಿಮಗೆ ಗೊತ್ತಿಲ್ಲದೆ ಕ್ಷಣಮಾತ್ರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲಿದ್ದಾರೆ. ಎಚ್ಚರವಹಿಸಬೇಕಾದ ನಂಬರ್ ಯಾವುದು?

ಡಿಜಿಟಲ್ ಜಗತ್ತಿನಲ್ಲಿ ಇದೀಗ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ದಿನ ಸೈಬರ್ ಅಪರಾಧಗಳ ದೂರು ದಾಖಲಾಗುತ್ತಿದೆ. ಇದೀಗ ಖದೀಮರು ಕೆಲ ನಂಬರ್ ಮೂಲಕ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಈ ರೀತಿಯ ಕೆಲ ಘಟನೆಗಳು ಬೆಳಕಿಗೆ ಬಂದಿದೆ.   ಈ ಎರಡು ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುವುದರಿಂದ ಬ್ಯಾಂಕ್ ಖಾತೆ ಕಳ್ಳತನಕ್ಕೆ ಕಾರಣವಾಗಬಹುದು. ನಿಮ್ಮ ಉಳಿತಾಯ ಖಾಲಿ ಆಗುವ ಸಾಧ್ಯತೆ ಇದೆ.

ಮೋಸದ ಕರೆಗಳು ಮತ್ತು ಸಂದೇಶಗಳನ್ನು ತಡೆಯಲು TRAI ನಿಯಮಗಳನ್ನು ಸ್ಥಾಪಿಸಿದೆ.  ಆದರೂ ಜನರನ್ನು ಮೋಸಗೊಳಿಸಲು ಸ್ಕ್ಯಾಮರ್‌ಗಳು ಹೊಸ ತಂತ್ರಗಳನ್ನು ರೂಪಿಸುತ್ತಲೇ ಇರುತ್ತಾರೆ. ಸ್ಪಾಮ್ ಕಾಲ್ ಸೇರಿದಂತೆ ಹಲವು ಕರೆಗಳನ್ನು ಟ್ರಾಯ್ ನಿರ್ಬಂಧಿಸುತ್ತದೆ. ಆದರೆ ಮೋಸಗಾರರು ಹೊಸ ವಿಧಾನದ ಮೂಲಕ ಗ್ರಾಹಕರನ್ನು ಮೋಸ ಮಾಡುತ್ತಾರೆ. ಹೀಗಾಗಿ ಎಚ್ಚರವಹಿಸಬೇಕಾಗಿದೆ. ಅಪ್ಪಿ ತಪ್ಪಿ ಫೋನ್ ಸ್ವೀಕರಿಸಿದರೂ ಕೆಲ ಸೂಚನೆಗಳನ್ನು ಪಾಲಿಸಿದರೆ ಅಪಾಯದಿಂದ ಪಾರಾಗಬಹುದು. 

Tap to resize

ಸ್ಕ್ಯಾಮರ್‌ಗಳು ಪ್ರಸ್ತುತ ಮೋಸದ ಚಟುವಟಿಕೆಗಳಿಗಾಗಿ ಇಂಟರ್ನೆಟ್ ಆಧಾರಿತ VoIP ಕರೆಗಳನ್ನು ಬಳಸುತ್ತಿದ್ದಾರೆ. ನೀವು +697 ಅಥವಾ +698 ರಿಂದ ಕರೆಯನ್ನು ಸ್ವೀಕರಿಸಿದರೆ, ಅದು ಖಂಡಿತವಾಗಿಯೂ ಹಗರಣ.  ಈ ಸ್ಕ್ಯಾಮರ್‌ಗಳು VPN ಗಳನ್ನು ಬಳಸಿಕೊಂಡು ತಮ್ಮ ಸ್ಥಳ, ಗುರುತು ಮರೆಮಾಚುತ್ತಾರೆ.  ಹೀಗಾಗಿ ಕರೆ ಮಾಡಿದ ಸ್ಥಳ, ವ್ಯಕ್ತಿ ಸೇರಿದೆತೆ ಪತ್ತೆ ಹಚ್ಚುವುದು ಅತ್ಯಂತ ಸವಾಲು.  ಹೀಗಾಗಿ ಮೋಸ ಹೋದ ಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.  

+697 ಅಥವಾ +698 ರಿಂದ ಅಂತರರಾಷ್ಟ್ರೀಯ ಕರೆಗಳಿಗೆ ಎಂದಿಗೂ ಉತ್ತರಿಸಬೇಡಿ. ನೀವು ಆಕಸ್ಮಿಕವಾಗಿ ಉತ್ತರಿಸಿದರೆ, ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ತಕ್ಷಣದಲ್ಲಿ ಫೋನ್ ಸ್ವೀಕರಿಸಿದರೆ ಕಟ್ ಮಾಡಿ. ಅಥವಾ ಯಾವುದೇ ಉತ್ತರ ನೀಡಬೇಡಿ.  ಹಲವು ಸೋಗಿನಲ್ಲಿ ಈ ಕರಗಳು ಬರಲಿದೆ. ನಿಮ್ಮ ವೈಯುಕ್ತಿ ಮಾಹಿತಿ ಹೇಳಿ ಮಾತುಕತೆ ಆರಂಭಗೊಳ್ಳುತ್ತದೆ. ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸೇರಿದಂತೆ ಹಲವು ರೂಪದಲ್ಲಿ ಮೋಸಗಾರರು ಕರೆ ಮಾಡಿ ಮೋಸಗೊಳಿಸುತ್ತಾರೆ. ಹೀಗಾಗಿ ಯಾವುದೇ ವೈಯುಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ. ಪೊಲೀಸ್ ಆಗಿರಲಿ, ಬ್ಯಾಂಕ್ ಅಥವಾ ಯಾವುದೇ ಅಧಿಕೃತ ಸಂಸ್ಥೆಯ ಸಿಬ್ಬಂದಿಗಳು ವೈಯುಕ್ತಿ ಮಾಹಿತಿಯನ್ನು ಫೋನ್ ಮೂಲಕ ಎಂದಿಗೂ ಕೇಳುವುದಿಲ್ಲ. 

ಈ ವಂಚಕರು ಆಗಾಗ್ಗೆ ಬ್ಯಾಂಕ್ ಉದ್ಯೋಗಿಗಳಂತೆ ವೇಷ ಧರಿಸುತ್ತಾರೆ. ತಿಳಿದಿಲ್ಲದ ಸಂಖ್ಯೆಗಳಿಂದ ಕರೆಗಳಿಗೆ ಉತ್ತರಿಸುವಾಗ ಜಾಗರೂಕರಾಗಿರಿ. ಅನಾಮಿಕ ಕರೆಗಳನ್ನು ಸ್ವೀಕರಿಸ ಮಾತನಾಡುವಾಗ ಎಚ್ಚರವಹಿಸಿ. ಹಲವು ಬಾರಿ ನೀವು ಸಂಕಷ್ಟಕ್ಕೆ ಸಿಲುಕಿದ್ದೀರಿ ಎಂದೇ ಸಂಭಾಷಣೆ ಆರಂಭಗೊಳ್ಳುತ್ತದೆ. ನಿಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಲು ಬಂದ ಬ್ಯಾಂಕ್ ಉದ್ಯೋಗಿ, ಅಧಿಕಾರಿ, ಪೊಲೀಸ್ ಸೇರಿದಂತೆ ಹಲವು ರೂಪದಲ್ಲಿ ಈ ಕರೆಗಳು ಬರುತ್ತದೆ. 

ನೀವು ಪದೇ ಪದೇ ಮೋಸದ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ, ಕೇಂದ್ರ ಸರ್ಕಾರದ CHASCU ಪೋರ್ಟಲ್‌ಗೆ ವರದಿ ಮಾಡಿ. ರಿಪೋರ್ಟ್ ಮಾಡಿದ ಬೆನ್ನಲ್ಲೇ ಸರ್ಕಾರದ ಎಜೆನ್ಸಿಗಳು ಕ್ರಮ ಕೈಗೊಳ್ಳಲಿದೆ. ಇದರಿಂದ ನಿಮಗೆ ಮಾತ್ರವಲ್ಲ, ಇತರರು ಮೋಸ ಹೋಗುವುದು ತಪ್ಪಲಿದೆ. ಸರ್ಕಾರದ ಹಲವು ಎಜೆನ್ಸಿಗಳು ಇದರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಸೈಬರ್ ಕ್ರೈಂ ತಪ್ಪಿಸಲು, ಕಡಿಮೆ ಮಾಡಲು ಅವಿರತ ಶ್ರಮವಹಿಸುತ್ತಿದೆ.

Latest Videos

click me!