ಹುಬ್ಬಳ್ಳಿ, ದಾವಣಗೆರೆ ಸೇರಿ 10 ದಿನ ಈ ಎಲ್ಲಾ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ: ಡಿಟೇಲ್ಸ್​ ಇಲ್ಲಿದೆ

Published : May 30, 2026, 05:37 PM IST

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ, ಮೇ 30 ರಿಂದ 10 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಿದ್ದಗಂಗಾ, ವಾಸ್ಕೋ, ಒಡೆಯರ್ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ರೈಲುಗಳ ಸಂಚಾರ ವಿಳಂಬ,  ಮತ್ತು ಮಾರ್ಗ ಬದಲಾವಣೆಯಾಗಲಿದೆ ಎಂದು ರೈಲ್ವೆ ತಿಳಿಸಿದೆ.

PREV
17
10 ದಿನ ಸಂಚಾರದಲ್ಲಿ ವ್ಯತ್ಯಯ

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇ 30ರಿಂದ 10 ದಿನಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಸಿದ್ದಗಂಗಾ, ವಾಸ್ಕೋ, ಉದಯಪುರ ಹಾಗೂ ಒಡೆಯರ್ ಎಕ್ಸ್‌ಪ್ರೆಸ್‌ ಸೇರಿದಂತೆ 8 ರೈಲುಗಳ ಸಂಚಾರ ವಿಳಂಬ, ಮರು-ವೇಳಾಪಟ್ಟಿ ಮತ್ತು ಮಾರ್ಗ ಬದಲಾವಣೆಯಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಹಾಗೆಯೇ, ಹರಿಹರ-ಹೊಸಪೇಟೆ ಪ್ಯಾಸೆಂಜರ್ ರೈಲಿಗೆ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

27
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಇಂದಿನಿಂದ ಅರ್ಥಾತ್​ ಮೇ 30 ರಿಂದ 10 ದಿನಗಳ ಕಾಲ ಬೆಂಗಳೂರು - ಹುಬ್ಬಳ್ಳಿ ಮಾರ್ಗದ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಅದರಲ್ಲಿಯೂ ಮುಖ್ಯವಾಗಿ ಸಿದ್ಧಗಂಗಾ ಇಂಟರ್‌ಸಿಟಿ, ವಾಸ್ಕೋ ಎಕ್ಸ್‌ಪ್ರೆಸ್‌ ಸೇರಿದಂತೆ 6 ರೈಲುಗಳು ತಡವಾಗಿ ಸಂಚಾರ ನಡೆಸಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

37
ರೈಲ್ವೆ ಇಲಾಖೆ ಮಾಹಿತಿ

ದಾವಣಗೆರೆ ನಿಲ್ದಾಣದ ಯಾರ್ಡ್‌ನಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವ್ಯತ್ಯಾಸ ಉಂಟಾಗಿದೆ. ಕಾಮಗಾರಿಯ ಕಾರಣದಿಂದ ಕೆಲವು ರೈಲುಗಳ ಸಂಚಾರವನ್ನು ತಡೆಹಿಡಿಯಲಾಗುತ್ತದೆ ಹಾಗೂ ರೈಲುಗಳ ಮರು ವೇಳಾಪಟ್ಟಿ ಹಾಗೂ ಮಾರ್ಗ ಬದಲಾವಣೆ ಮಾಡಲಾಗುವುದು ಎಂದು ಇಲಾಖೆ ಹೇಳಿದೆ.

47
ಡಿಟೇಲ್ಸ್​ ಇಲ್ಲಿದೆ

ಮೇ 30 ರಿಂದ ಜೂನ್ 8 ರವರೆಗೆ ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ - ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

57
ಉದಯಪುರ ಸಿಟಿ - ಮೈಸೂರು ಹಮ್ಸಫರ್ ಸಾಪ್ತಾಹಿಕ, ಸಿದ್ದಗಂಗಾ ದೈನಂದಿನ ಎಕ್ಸ್‌ಪ್ರೆಸ್‌
  • ಜೂನ್ 1 ರಂದು ಉದಯಪುರ ಸಿಟಿಯಿಂದ ಹೊರಡುವ ರೈಲು ಸಂಖ್ಯೆ 19667 ಉದಯಪುರ ಸಿಟಿ - ಮೈಸೂರು ಹಮ್ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗಮಧ್ಯೆ 120 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.
     
  • ಮೇ 31 ರಿಂದ ಜೂನ್ 9 ರವರೆಗೆ ಧಾರವಾಡದಿಂದ ಹೊರಡುವ ರೈಲು ಸಂಖ್ಯೆ 12726 ಧಾರವಾಡ - ಕೆಎಸ್ಆರ್ ಬೆಂಗಳೂರು ಸಿದ್ದಗಂಗಾ ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗಮಧ್ಯೆ 50 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.
67
ಅರಸೀಕೆರೆ - ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ಬೆಂಗಳೂರು - ಮೈಸೂರು ಒಡೆಯರ್
  • ಮೇ 31 ರಿಂದ ಜೂನ್ 9 ರವರೆಗೆ ಅರಸೀಕೆರೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16213 ಅರಸೀಕೆರೆ - ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗಮಧ್ಯೆ 30 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.

     
  • ಮೇ 31 ರಿಂದ ಜೂನ್ 9 ರವರೆಗೆ ರೈಲು ಸಂಖ್ಯೆ 12614 ಕೆಎಸ್ಆರ್ ಬೆಂಗಳೂರು - ಮೈಸೂರು ಒಡೆಯರ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು, ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ (ಮರು-ವೇಳಾಪಟ್ಟಿ) ಹೊರಡಲಿದೆ.
77
ಹರಿಹರ - ಹೊಸಪೇಟೆ ಪ್ಯಾಸೆಂಜರ್ ರೈಲು

ಮೇ 31 ರಿಂದ ಜೂನ್ 9 ರವರೆಗೆ ರೈಲು ಸಂಖ್ಯೆ 56529 ಹರಿಹರ - ಹೊಸಪೇಟೆ ಪ್ಯಾಸೆಂಜರ್ ರೈಲನ್ನು ಹರಿಹರ, ಅಮರಾವತಿ ಕಾಲೋನಿ ಮತ್ತು ತೆಲಿಗಿ ನಿಲ್ದಾಣಗಳ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ, ಈ ರೈಲಿಗೆ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories