ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವ ವಿಧಾನ ಬದಲು ವೆಬ್ ಚೆಕ್ ಮೂಲಕ ಮಾತ್ರ ತಪಾಸಣೆಗೊಳಗಾದ ಪ್ರಯಾಣಿಕರನ್ನು ಮಾತ್ರ ಒಳ ಪ್ರವೇಶಿಸಲು ಅರ್ಹ
undefined
ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ವೈರಸ್ ಕುರಿತು ಸ್ವಯಂ ಘೋಷಿಸಿದ ಕೊರೋನಾ ಮುಕ್ತ ಪ್ರಯಾಣಿಕರಿಗೆ ಮಾತ್ರ ಅನುಮತಿ, ರೆಡ್ ಸ್ಟೇಟಸ್ ಇದ್ದವರಿಗೆ ಅನುಮತಿ ಇಲ್ಲ
undefined
ವಿಮಾನ ನಿಲ್ದಾಣ ಸಿಬ್ಬಂದಿಗಳು ಪ್ರಯಾಣಿಕರ ದೇಹದ ಉಷ್ಣತೆ ಪರಿಶೀಲನೆ ಮಾಡುತ್ತಾರೆ, ಇವರ ಬಳಿಕ ಆರೋಗ್ಯ ಸೇತು ಸ್ಟೇಟಸ್ ವಿವರ ತೋರಿಸಬೇಕು
undefined
ಪ್ರಯಾಣಿಕರು ಮಾಸ್ಕ್ ಧರಿಸಿವುದು ಕಡ್ಡಾಯವಾಗಿದೆ. ಆದರೆ ಮಕ್ಕಳು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವವರು ವಿಮಾನ ಪ್ರಯಾಣದಿಂದ ದೂರವಿರಲು ಸೂಚಿಸಲಾಗಿದೆ
undefined
ಪ್ರಯಾಣಿಕರಿಗೆ ಒಂದು ಬ್ಯಾಗ್ ಹಾಗೂ ಒಂದು ಲಗೇಜ್ ಬ್ಯಾಗ್ ಒಯ್ಯಲು ಮಾತ್ರ ಅವಕಾಶ ನೀಡಲಾಗಿದೆ
undefined
ಬ್ಯಾಗೇಜ್‌ಗಳಲ್ಲಿ ಟ್ರೋಲಿ ಬ್ಯಾಗ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಸೂಚಿಸಲಾಗಿದೆ
undefined
ವಿಮಾನ ಯಾನದ ವೇಳೆ ಪ್ರಯಾಣಿಕರಿಗೆ ದಿನಪತ್ರಿಕೆ, ಮ್ಯಾಗಜೀನ್‌ಗಳನ್ನು ನೀಡುವುದಿಲ್ಲ
undefined
ಪ್ರಯಾಣಿಕರು ತಮ್ಮ ನಿಗದಿತ ಪ್ರಯಾಣದ ಸಮಯಕ್ಕಿಂತ 2 ಗಂಟೆ ಮೊದಲು ನಿಲ್ದಾಣದಲ್ಲಿ ರಿಪೋರ್ಟ್ ಮಾಡಬೇಕು
undefined
ಕಂಟೈನ್‌ಮೆಂಟ್ ಝೋನ್ ನಿವಾಸಿಗಳು, ಕೊರೋನಾ ಪಾಸಿಟೀವ್ ವ್ಯಕ್ತಿಗಳು ಪ್ರಯಾಣಿಸುವಂತಿಲ್ಲ. ಪ್ರತಿ ಪ್ರಯಾಣಕನೂ ಆರೋಗ್ಯ ಸೇತು ಆ್ಯಪ್ ಮೂಲಕ ತನ್ನ ಆರೋಗ್ಯದ ಸ್ಟೇಟಸ್ ತೋರಿಸಬೇಕು
undefined
ಪ್ರತಿ ಪ್ರಯಾಣಿಕನು ತಾನು ಕಂಟೈನ್‌ಮೆಂಟ್ ಝೋನಿ ನಿವಾಸಿಯಲ್ಲ, ತಾನು ಯಾವುದೇ ಜ್ವರ, ಕೆಮ್ಮು ಅಥವಾ ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿಲ್ಲ, ತಾನು ಕ್ವಾರಂಟೈನ್ ವ್ಯಕ್ತಿಯಲ್ಲ, ಈ ಮೊದಲು ಹೇಳಿದ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾದರೆ ತಕ್ಷವೇ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುತ್ತೇನೆ ಎಂದು ಘೋಷಿಸಬೇಕು.
undefined
ಕಳೆದ 2 ತಿಂಗಳಲ್ಲಿ ಕೊರೋನಾ ಮುಕ್ತವಾಗಿದ್ದೇನೆ, ನಾನು ವಿಮಾನಯಾನ ಮಾಡಲು ಅರ್ಹವಾಗಿದ್ದೇನೆ, ವಿಮಾನ ನಿಲ್ದಾಣದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಯಾವುದೇ ಸಮಯದಲ್ಲಿ ನನ್ನ ಮೊಬೈಲ್ ನಂಬರ್, ವಿಳಾಸದಲ್ಲಿ ನನ್ನ ಸಂಪರ್ಕಿಸಬಹುದು. ಮೇಲ್ಕಾಣಿಸಿದ ಯಾವುದೇ ವಿಚಾರದಲ್ಲಿ ನಿಯಮ ಉಲ್ಲಂಘಿಸಿದರೆ ನಾನು ಶಿಕ್ಷೆಗೆ ಬದ್ದ ಎಂದು ಸ್ವಯಂ ಘೋಷಿಸಬೇಕು.
undefined
ಮಾರ್ಗಸೂಚಿ ಪಾಲಿಸದೆ ಪ್ರಯಾಣಕ್ಕೆ ಮುಂದಾದ ಪ್ರಯಾಣಿಕನು ಶಿಕ್ಷೆಗೆ ಗುರಿಯಾಗುತ್ತಾನೆ
undefined
ವಿಮಾನ ಪ್ರಯಾಣದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ, ಆದರೆ ನೀರಿನ ಬಾಟಲಿಗಳನ್ನು ಗ್ಯಾಲರಿ ಏರಿಯಾ ಅಥವಾ ಸೀಟಿನ ಬದಿಯಲ್ಲಿ ಇರಿಸಲಾಗಿರುತ್ತದೆ
undefined
ಪ್ರಯಾಣಿಕರು ಯಾವುದೇ ಆಹಾರ ವಸ್ತುಗಳನ್ನು ವಿಮಾನದೊಳಗೆ ಸೇವಿಸುವಂತಿಲ್ಲ
undefined
ಯಾವುದೇ ಪ್ರಯಾಣಿಕರು ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಎದುರಿಸಿದರೆ ತಕ್ಷಣಲೇ ಗಮನಕ್ಕೆ ತರಬೇಕು.
undefined