ಕೊರೋನಾದಿಂದ ನಲುಗುತ್ತಿರುವ ಭಾರತದ ಮೇಲೆ ಮತ್ತೊಂದು ಅಟ್ಯಾಕ್!

First Published May 19, 2020, 4:19 PM IST

ಕೊರೋನಾ ಸೋಂಕಿಗೆ ಇಡೀ ವಿಶ್ವವೇ ನಲುಗಿದೆ. ಭಾರತದಲ್ಲಿ ಈ ಸೋಂಕು ಒಂದು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕಂಡು ಬಂದಿದೆ. ಚೀನಾದ ವುಹಾನ್‌ನಿಂದ ಹಬ್ಬಿದ ಈ ಮಹಾಮಾರಿಯಿಂದಾಗಿ ಮಾರ್ಚ್ 24 ರಿಂದ ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಜನರೆಲ್ಲಾ ಮನೆಯಲ್ಲೇ ಉಳಿದಿದ್ದಾರೆ. ಅಂಗಡಿಗಳೂ ಮುಚ್ಚಲಾಗಿದ್ದು, ಅರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಈ ಆತಂಕದ ನಡುವೆ ಇದೀಗ ವಿದೇಶಿ ಹುಳವೊಂದು ಭಾರತದ ಬೆಳೆಗಳನ್ನು ನಾಶ ಮಾಡಲಾರಂಭಿಸಿದೆ. ಸದ್ಯ ಈ ಹುಳ ನಾಗಾಲ್ಯಾಂಡ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದೆ. ಈ ಹುಳದಿಂದಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅಸ್ಸಾಂಗೂ ಈ ಹುಳ ಎಂಟ್ರಿ ಕೊಟ್ಟಿದೆ. ಇನ್ನು ನಿದಾನವಾಗಿ ಈ ಹುಳ ಇತರ ದೇಶಗಳಿಗೂ ಹಬ್ಬಿಕೊಂಡರೆ ಬೆಳೆ ಸಂಪೂರ್ಣ ನಾಶವಾಗುವುದರಲ್ಲಿ ಅನುಮಾನವಿಲ್ಲ.

ಕೊರೋನಾ ಆತಂಕದ ನಡುವೆ ನಾಗಾಲ್ಯಾಂಡ್ ಹಾಗೂ ಅಸ್ಸಾಂನಲ್ಲಿ ವಿದೇಶಿ ಹುಳವೊಂದು ಭಯದ ವಾತಾವರಣ ನಿರ್ಮಿಸಿದೆ. ಇದನ್ನು ಆರ್ಮಿ ವರ್ಮ್ ಎಂದು ಕರೆಯಲಾಗುತ್ತದೆ. ಆಂಟೋಮೊಲಾಜಿಸ್ಟ್ ಅನ್ವಯ ಇದು ಎಂಭತ್ತು ಬಗೆಯ ಗಿಡಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ.
undefined
ನಾಗಾಲ್ಯಾಂಡ್‌ನ ಮೊಕೋಕಚುಂಗ್‌ನಲ್ಲಿ ಈ ವಿದೇಶೀ ಹುಳ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಳು ಮಾಡಿದೆ. ಇಲ್ಲಿನ ಏಳು ಹಳ್ಳಿಗಳಲ್ಲಿ ರೈತರು ಬೆಳೆದ ಬೆಳೆಯನ್ನು ಈ ಹುಳಗಳು ನಾಶ ಮಾಡಿವೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.
undefined
ಇನ್ನು ಕೃಷಿ ಸಚಿವಾಲಯ ಅಧಿಕಾರಿಗಳು ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಹುಳಗಳು ಅತಿ ಚಿಕ್ಕದಿರುವಾಗಲೇ ಬೆಳೆ ಹಾನಿ ಮಾಡುವ ಶಕ್ತಿ ಹೊಂದಿರುತ್ತವೆ ಎಂಬುವುದು ಪತ್ತೆಯಾಗಿದೆ ಅಲ್ಲದೇ ಜೋಳದ ಬೆಳೆಯನ್ನು ಇದು ಸಂಪೂರ್ಣವಾಗಿ ನಾಶ ಮಾಡುತ್ತದೆ.
undefined
ಪ್ರತಿ ಹುಳಗಳು ಒಂದು ಗಿಇಡವನ್ನು ಶೇ. 80ರಿಂದ 90ರಷ್ಟು ತಿನ್ನುತ್ತವೆ. ಸದ್ಯ ನಾಗಾಲ್ಯಾಂಡ್‌ನ ಏಳು ರಾಜ್ಯಗಳಲ್ಲಿ ಈ ಹುಳಗಳದ್ದೇ ಅಬ್ಬರ. ಇನ್ನು ಶೀಘ್ರದ್ಲೇ ಇದನ್ನು ನಿಯಂತ್ರಿಸದಿದ್ದಲ್ಲಿ ಬೇರೆ ಹಳ್ಳಿಗಳಿಗೂ ಇದು ವ್ಯಾಪಿಸಲಿದೆ.
undefined
ಅತ್ತ ಅಸ್ಸಾಂನಲ್ಲೂ ಈ ಹುಳಗಳು ಕಂಡು ಬಂದಿದೆ. ರೈತರು ಕೀಟ ನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೀಟ ನಾಶಕಗಳು ಹುಳಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.
undefined
ಆದರೆ ಅಸ್ಸಾಂನಲ್ಲಿ ರೈತರಿಗೆ ಲಾಕ್‌ಡೌನ್‌ನಿಂದ ಲಾಭವಾಗಿದೆ. ಇಲ್ಲಿನ ರೈತರು ಲಾಕ್‌ಡೌನ್‌ನಿಂದಾಗಿ ಮೊದಲೇ ಬೆಳೆ ಕಟಾವು ಮಾಡಿದ್ದರು. ಹೀಗಾಗಿ ಕಟಾವು ಮಾಡದ ಬೆಳೆಯಷ್ಟೇ ಹುಳಗಳ ಪಾಲಾಗಿದೆ.
undefined
ಇನ್ನು ಅತ್ಯಂತ ವೇಗವಾಗಿ ಈ ಹಹುಳಗಳು ವ್ಯಾಪಿಸುತ್ತಿವೆ ಎನ್ನಲಾಗಿದೆ. ಇದಕ್ಕೆ ಭಾರತದಲ್ಲಿರುವ ಹವಾಮಾನ ಕೂಡಾ ಕಾರಣವಾಗಿದೆ. ಬಿಸಿಲಿರುವುದರಿಂದ ಈ ಹುಳಗಳು ಭಾರೀ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತಿವೆ. ಸೂಕ್ತ ಸಮಯದಲ್ಲಿ ಮಳೆ ಬಾರದಿದ್ದರೆ, ಇದು ರೈತರ ನೆಮ್ಮದಿ ಕೆಡಿಸಲಿದೆ.
undefined
ಇನ್ನು ಕೊರೋನಾ ಆತಂಕದಿಂದಾಗಿ ಕಾರ್ಮಿಕರು ತಮ್ಮ ಊರಿನತ್ತ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಇರುವ ರೈತರಿಗೆ ಕೆಲಸಗಾರರು ಸಿಗುತ್ತಿಲ್ಲ. ಹೀಗಿರುವಾಗ ಬೆಳೆ ಹುಳಗಳ ಪಾಲಾಗುತ್ತಿದೆ.
undefined
ಈ ಆರ್ಮಿ ವರ್ಮ್ ಅಮೆರಿಕದ ಉಷ್ಣವಲಯಲ್ಲಿ ಹೇರಳವಾಗಿ ಕಂಡು ಬರುತ್ತವೆ. ಬಿಸಿಲಿನ ಝಳ ಇರುವ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ಇವು ಹಬ್ಬುತ್ತವೆ. ವಿದೇಶದಿಂದ ಬರುವ ಆಹಾರದ ಮೂಲಕ ಈ ಹುಳ ಣಭಾರತಕ್ಕೆ ತಲುಪಿದ್ದು, ಸದ್ಯ ಆತಂಕ ಸೃಷ್ಟಿಸಿದೆ.
undefined
click me!