ಸ್ಪಾಗಳಲ್ಲಿ ಅಕ್ರಮ: ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಮಸಾಜ್ ಮಾಡುವಂತಿಲ್ಲ

First Published Nov 16, 2021, 2:42 PM IST
  • Cross gender massage - ಸ್ಪಾಗಳಲ್ಲಿ ಅಕ್ರಮ, ಸಲೂನ್‌ಗಳಿಗೆ ಭೀತಿ
  • ರಿಜಿಸ್ಟರ್ ಆಗದ ಸಲೂನ್‌ಗಳ ಹಾವಳಿ
  • ಗಂಡು ಹೆಣ್ಣಿಗೆ ಅಥವಾ ಹೆಣ್ಣಿಗೆ ಗಂಡು ಮಸಾಜ್ ಮಾಡುವ ಹಾಗಿಲ್ಲ

ಗುವಾಹಟಿಯು ಸ್ಪಾ ಹಾಗೂ ಸಲೂನ್‌ಗಳಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕಲು ಹಾಗೂ ನಗರದಾದ್ಯಂತ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಸ್ಪಾಗಳು ಮತ್ತು ಪಾರ್ಲರ್‌ಗಳನ್ನು ನಿಯಂತ್ರಿಸಲು ಮುಂದಾಗಿದೆ. ಇದೀಗ ಗುವಾಹಟಿ ಮುನ್ಸಿಪಲ್ ವ್ಯಾಪ್ತಿಯಲ್ಲಿ ಕ್ರಾಸ್-ಜೆಂಡರ್ ಮಸಾಜ್ ನಿಷೇಧಿಸಿದೆ.

ನಿಷೇಧವು ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ (GMC) ಹೊರತಂದಿರುವ ಹೊಸ ನಿಯಮಗಳ ಭಾಗವಾಗಿದೆ. ಯುನಿಸೆಕ್ಸ್ ಸಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು ಮತ್ತು ಸ್ಪಾಗಳಲ್ಲಿ ಅವ್ಯವಹಾರಗಳನ್ನು ತಡೆಯಲು ಈ ರೀತಿ ಮಾಡಲಾಗಿದೆ.

ಜನರು ನೀಡಿದ ಅನೇಕ ದೂರುಗಳನ್ನು ಉಲ್ಲೇಖಿಸಿ GMC ಕಮಿಷನರ್ ದೇವಶಿಶ್ ಶರ್ಮಾ ಈ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಹೆಣ್ಣು ಗ್ರಾಹಕರಿಗೆ ಗಂಡಸರು ಹಾಗೂ ಪುರುಷ ಗ್ರಾಹಕರಿಗೆ ಹೆಣ್ಮಕ್ಕಳು ಮಸಾಜ್ ಮಾಡುವಂತಿಲ್ಲ.

ನಾಗರಿಕ ಸಮಾಜಕ್ಕೆ ಹಾನಿಕಾರಕ ಎಂದು GMC ತನ್ನ ಆದೇಶದಲ್ಲಿ ಹೇಳಿದ್ದು ನಿಗಮವು ಸಾರ್ವಜನಿಕ ನೈತಿಕತೆ ಮತ್ತು ನಾಗರಿಕ ಸಮಾಜವನ್ನು ನಿಯಂತ್ರಿಸುವ ಕಾನೂನುಗಳನ್ನು ಗೌರವಿಸಲು ಕರ್ತವ್ಯ ಬದ್ಧವಾಗಿದೆ ಎಂದಿದೆ.

ಹೊಸ ನಿಯಮಗಳ ಪ್ರಕಾರ ಗುವಾಹಟಿಯಲ್ಲಿರುವ ಪಾರ್ಲರ್‌ಗಳು ಮತ್ತು ಸ್ಪಾಗಳು ಪ್ರತ್ಯೇಕ ಕೊಠಡಿಗಳು ಅಥವಾ ಚೇಂಬರ್‌ಗಳನ್ನು ಹೊಂದಿರಬಾರದು. ಅವುಗಳ ಮುಖ್ಯ ದ್ವಾರಗಳು ಪಾರದರ್ಶಕವಾಗಿರಬೇಕು. ವಿರುದ್ಧ ಲಿಂಗದ ಸದಸ್ಯರು ಮಸಾಜ್ ನೀಡುವುದನ್ನು ನಿರ್ಬಂಧಿಸಲಾಗಿದೆ.

ಸಂಸ್ಥೆಗಳು ಅರ್ಹ ಚಿಕಿತ್ಸಕರನ್ನು ಮಾತ್ರ ಹೊಂದಿರಬೇಕು ಎಂದು GMC ಯ ಆದೇಶವು ಸ್ಪಷ್ಟವಾಗಿ ತಿಳಿಸಿದೆ. ಸ್ಟೀಮ್ ಸ್ನಾನವನ್ನು ಅನುಮತಿಸಲಾಗಿದೆ. ಆದರೆ ವಿರುದ್ಧ ಲಿಂಗದ ಸದಸ್ಯರು ಗ್ರಾಹಕರಿಗೆ ಸಹಾಯ ಮಾಡಲು ಸಾಧ್ಯವಿಲ್ಲ.

ಅಲ್ಲದೆ ಪಾರ್ಲರ್‌ಗಳು ಮತ್ತು ಸ್ಪಾಗಳು ಗ್ರಾಹಕರ ವಿಳಾಸಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಯಾಗದ ಮಸಾಜ್ ಪಾರ್ಲರ್‌ಗಳು ಮತ್ತು ಸ್ಪಾಗಳನ್ನು ಆವರಣದಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಹಲವಾರು ಅಪಾರ್ಟ್‌ಮೆಂಟ್ ಮಾಲೀಕರಿಂದ ದೂರುಗಳು ಬಂದಿತ್ತು.

ಈ ರೀತಿ ದೂರುಗಳನ್ನು ಸ್ವೀಕರಿಸಿದ ನಂತರ ನಾವು ಒಂದು ತಿಂಗಳ ಕಾಲ ಚರ್ಚಿಸಿದ ನಂತರ ಈ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು GMC ಕಮಿಷನರ್ ಶರ್ಮಾ ಹೇಳಿದ್ದಾರೆ. ಕೆಲವು ದೂರುಗಳು ನಿಜವೆಂದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಗುವಾಹಟಿಯಲ್ಲಿ ಸುಮಾರು 60% ಬ್ಯೂಟಿ ಪಾರ್ಲರ್‌ಗಳು ಮತ್ತು ಸ್ಪಾಗಳು ನೋಂದಣಿಯಾಗಿಲ್ಲ. ಇವುಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶರ್ಮಾ ಹೇಳಿದ್ದಾರೆ.

ನಾವು ನೈತಿಕ ಪೋಲೀಸ್‌ಗಿರಿ ಮಾಡುತ್ತಿಲ್ಲ. ಆದರೆ ಈ ವ್ಯವಹಾರಗಳನ್ನು ನೋಂದಾಯಿಸಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯಕ್ಕೆ ತೊಂದರೆಯಾಗದ ಅಭ್ಯಾಸಗಳನ್ನು ಅನುಸರಿಸಬೇಕು. ವೃತ್ತಿಪರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಹೊಸ ನಿಯಮಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಶರ್ಮಾ ಹೇಳಿದ್ದಾರೆ.

milk bath

GMC ಹೊಸ ನಿಯಮಗಳನ್ನು ಅನುಸರಿಸಲು ನಗರದಲ್ಲಿ ಬ್ಯೂಟಿ ಪಾರ್ಲರ್‌ಗಳು, ಕತ್ತರಿಸುವ ಸಲೂನ್‌ಗಳು ಮತ್ತು ಸ್ಪಾಗಳನ್ನು ಒಂದು ತಿಂಗಳ ಸಮಯವನ್ನು ನೀಡಿದೆ. ನಿಯಮ ಉಲ್ಲಂಘಿಸುವವರ ಪರವಾನಗಿಗಳನ್ನು ನವೀಕರಿಸಲಾಗುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.

ನಾವು ನಿಯಮಗಳನ್ನು ಸ್ವಾಗತಿಸುತ್ತೇವೆ. ಏಕೆಂದರೆ ಅವು ವೃತ್ತಿಯ ಬ್ಯಾಡ್ ಇಮೇಜ್ ತೆಗೆಯಲು ಸಹಾಯ ಮಾಡುತ್ತದೆ. ಆದರೆ ನಿಯಮಗಳನ್ನು ಅಂತಿಮಗೊಳಿಸುವ ಮೊದಲು GMC ನಮ್ಮೊಂದಿಗೆ ಮಾತನಾಡಬೇಕಿತ್ತು. ಪ್ರತ್ಯೇಕ ಕೊಠಡಿಗಳಿಲ್ಲದಿರುವಂತಹ ಕೆಲವು ನಿಯಮಗಳು ನಮ್ಮ ಮಹಿಳಾ ಗ್ರಾಹಕರಿಗೆ ಸಮಸ್ಯೆಯಾಗಿರಬಹುದು ಎಂದು ಗುವಾಹಟಿ ಮೂಲದ ಸ್ಪಾ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದಾರೆ 

click me!