ದೆಹಲಿ-ಜೈಪುರ ಕೇವಲ 3.5 ಗಂಟೆ ಪ್ರಯಾಣ, 12ಸಾವಿರ ಕೋಟಿ ರೂ ವೆಚ್ಚದ ಎಕ್ಸ್‌ಪ್ರೆಸ್‌ವೇ ನಾಳೆ ಉದ್ಘಾಟನೆ!

First Published Feb 11, 2023, 4:50 PM IST

ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ದೆಹಲಿ ಮುಂಬೈ ನಡುವಿನ ಎಕ್ಸ್‌ಪ್ರೆಸ್‌ವೇ ನಿರ್ಮಾಣಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ದರ್ಜೆ ಮಟ್ಟದ ರಸ್ತೆ ಇದಾಗಿದ್ದು, ಇದರ ಮೊದಲ ಭಾಗವನ್ನು ನಾಳೆ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ದೆಹಲಿ-ದೌಸಾ- ಲಾಲ್‌ಸೋತ್ ನಡುವಿನ 246 ಕಿಲೋಮೀಟರ್ ಉದ್ದದ ಮೊದಲ ಸೆಕ್ಷನ್ ನಾಳೆ ಲೋಕಾರ್ಪಣೆಗೊಳ್ಳಲಿದೆ. ಈ ಕುರಿತ ಚಿತ್ರ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭಾರಿ ಸಂಚಲನ ಸೃಷ್ಟಿಸುತ್ತಿದೆ.

1386 ಕೀಲೋಮೀಟರ್ ಉದ್ದದ ದೆಹಲಿ ಮುಂಬೈ ಎಕ್ಸ್‌ಪ್ರೆಸ್ ವೇ ಇದೀಗ ದೇಶದ ಗಮನಸೆಳೆಯುತ್ತಿದೆ. ಅತ್ಯುತ್ತಮ ಗುಣಮಟ್ಟ, ಅಂತಾರಾಷ್ಟ್ರೀಯ ದರ್ಜೆ ಸೇರಿದಂತೆ ಹಲವು ಮೈಲಿಗಲ್ಲು ಈ ಹೆದ್ದಾರಿ ನಿರ್ಮಿಸಿದೆ. 2023ರ ಮಾರ್ಚ್ ವೇಳೆಗೆ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳಲಿದೆ. ಆದರೆ ದೆಹಲಿಯಿಂದ ರಾಜಸ್ಥಾನದ ದೌಸಾ ಜಿಲ್ಲೆವರೆಗೆ ಮೊದಲ ಭಾಗವನ್ನು ನಾಳೆ(ಫೆ.12) ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
 

ರಾಜಸ್ಥಾನ ವಿಭಾಗದ ಪ್ರಮುಖ ನಗರಗಳಾದ ದೌಸಾ- ಸೋಹ್ನಾ ರಸ್ತೆ ಮಾರ್ಗವನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. 246 ಕಿಲೋಮೀಟರ್ ಉದ್ದದ ಈ ರಸ್ತೆ ನಿರ್ಮಾಣಕ್ಕೆ 12,150 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
 

Latest Videos


ದೇಶದ 5 ರಾಜ್ಯಗಳನ್ನು ಸಂಪರ್ಕಿಸಲಿರುವ ಈ ಎಕ್ಸ್‌ಪ್ರೆಸ್‌ವೇದ ಕಾಮಗಾರಿ ನಡೆಯುತ್ತಿದ್ದು ಇದರ ಭಾಗವಾಗಿ ಪೂರ್ಣಗೊಂಡಿರುವ ರಾಜಸ್ಥಾನದ ಮಾರ್ಗಕ್ಕೆ ಮೋದಿ ಹಸಿರು ನಿಶಾನೆ ತೋರಲಿದ್ದಾರೆ.ಇದೀಗ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ರಸ್ತೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಗಡ್ಕರಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. 
 

ದೆಹಲಿ, ಹರಾರ‍ಯಣ, ರಾಜಸ್ಥಾನ, ಗುಜರಾತ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸಲಿರುವ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ವೇ ಒಟ್ಟು 1,400 ಕಿ.ಮೀ ಮಾರ್ಗದ ಯೋಜನೆಯಾಗಿದ್ದು ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿರಲಿದೆ. ಹಾಗೂ 1 ಲಕ್ಷ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಮಾರ್ಗವು 8 ಲೇನ್‌ಗಳನ್ನು ಹೊಂದಿರಲಿದೆ.
 

ದೌಸಾ ಎಕ್ಸ್‌ಪ್ರೆಸ್‌ವೇ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 18,100 ಕೋಟಿ ರೂಪಾಯಿ ಮೌಲ್ಯದ ರಸ್ತೆ ಅಭಿವೃದ್ಧಿ ಕಾಮಾಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಕರ್ನಾಟಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸೋಮವಾರ(ಫೆ.13) ಬೆಂಗಳೂರಿನಲ್ಲಿ ಮೋದಿ ಏರೋ ಇಂಡಿಯಾ ಶೋ ಉದ್ಘಾಟನೆ ಮಾಡಲಿದ್ದಾರೆ.

ಕಳೆದ ವರ್ಷದ ನಿತಿನ್ ಗಡ್ಕರಿ ದೆಹಲಿ- ಮುಂಬೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ  ಗಂಟೆಗೆ 170 ಕಿ.ಮೀ. ವೇಗದಲ್ಲಿ ಟೆಸ್ಟ್‌ ಡ್ರೈವ್‌ ಮಾಡಿ ಗಮನ ಸೆಳೆದಿದ್ದರು. ಹೆದ್ದಾರಿಯ ಗುಣಮಟ್ಟಮತ್ತು ಕ್ಷಮತೆಯನ್ನು ಖದ್ದಾಗಿ ಪರೀಕ್ಷಿಸಿದ ನಿತಿನ್‌ ಗಡ್ಕರಿ ಕಿಯಾ ಕಾರ್ನಿ​ವಾ​ಲ್‌ ಕಾರಿನ ಪ್ರಯಾಣಿಕ ಸೀಟಿನಲ್ಲಿ ಕುಳಿತು ಟೆಸ್ಟ್‌ ಡ್ರೈವ್‌ ಕೈಗೊಂಡಿದ್ದರು. ಟೆಸ್ಟ್‌ ಡ್ರೈವ್‌ನ ವಿಡಿಯೋ ಚಿತ್ರೀಕರಣವನ್ನು ನಡೆಸಲಾಗಿತ್ತು. 

ದೆಹಲಿ ಮುಂಬೈ ಹೆದ್ದಾರಿಯ ವೇಗ ಮಿತಿಯನ್ನು ಗಂಟೆಗೆ 110 ಕಿ.ಮೀ. ನಿಗದಿಪಡಿಸಲಾಗಿದೆ. ಆದರೆ ಟೆಸ್ಟ್‌ ಡ್ರೈವ್‌ಗಾಗಿ ಗರಿಷ್ಠ ವೇಗದಲ್ಲಿ ಕಾರನ್ನು ಓಡಿಸಿ ರಸ್ತೆಯ ಗುಣಮಟ್ಟವನ್ನು ಪರೀಕ್ಷೆ ನಡೆಸಲಾಗಿತ್ತು. 
 

ಎಕ್ಸ್‌ಪ್ರೆಸ್‌ ಹೆದ್ದಾರಿ ಪೂರ್ಣಗೊಂಡ ಬಳಿಕ 8 ಗಂಟೆಯಷ್ಟುಪ್ರಯಾಣ ಸಮಯ ಉಳಿತಾಯ ಆಗಲಿದ್ದು, ದೆಹಲಿ ಮತ್ತು ಮುಂಬೈ ಮಧ್ಯೆ ಕೇವಲ 12 ಗಂಟೆಯಲ್ಲಿ ಪ್ರಯಾಣಿಸಬಹುದಾಗಿದೆ. 

click me!