18 ವರ್ಷ ತುಂಬಿದರೆ ಮತದಾನದ ಹಕ್ಕು ಪಡೆಯಲು ಸಾಧ್ಯ. ಇನ್ನು ಡ್ರೈವಿಂಗ್ ಲೈಸೆನ್ಸ್ ಪಡೆಯಲು 18 ತುಂಬಿರಬೇಕು. ಮದುವೆಯಾಗಲು ಗಂಡಿಗೆ 21, ಹೆಣ್ಣಿಗೆ 18 ತುಂಬಿರಬೇಕು. ಹಾಗಾದರೆ ಮದ್ಯ ಕುಡಿಯಲು ಕಾನೂನು ಬದ್ಧ ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ. ಆದರೆ ಇದೀಗ ಈ ವಯಸ್ಸಿನ ಮಿತಿ ಕಡಿಮೆ ಮಾಡಲಾಗಿದೆ.
ದೆಹಲಿ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೆಹಲಿ ಸರ್ಕಾರವು ಕುಡಿಯುವ ಕಾನೂನುಬದ್ಧ ವಯಸ್ಸನ್ನು 25 ರಿಂದ 21 ಕ್ಕೆ ಇಳಿಸಲು ನಿರ್ಧರಿಸಿದೆ.
ಕುಡಿಯಲು ಕಾನೂನು ಬದ್ಧ ವಯಸ್ಸು ಕನಿಷ್ಠ 25 ಆಗಿರಬೇಕು. ಆದರೆ ಈ ವಯಸ್ಸನ್ನು 21ಕ್ಕೆ ಇಳಿಸಲಾಗಿದೆ. ಈ ಕುರಿತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪಷ್ಟಪಡಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸರ್ಕಾರ ಅಬಕಾರಿ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.
ಪರವಾನಗೆ ಇಲ್ಲದ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಇನ್ನು ಒಂದು ಪರವಾನಗೆಯಲ್ಲಿ ಹಲವು ಶಾಖೆಗಳನ್ನು ತೆರೆದಿರುವ ಸೇರಿದಂತೆ ಹಲವು ಅಕ್ರಮಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಇದರಿಂದ ರಾಷ್ಟ್ರ ರಾಜಧಾನಿಗೆ ಮದ್ಯ ಕಳ್ಳಸಾಗಣೆ ಮಾಡುವುದನ್ನು ನಿಲ್ಲಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಕಳ್ಳಸಾಗಣೆ, ಅಕ್ರಮಗಳನ್ನು ತಡೆದರೆ, ಸೋರಿಯಾಗುತ್ತಿರುವ ಶೇಕಡಾ 20 ರಷ್ಟು ಆದಾಯ ಸರ್ಕಾರಕ್ಕೆ ಹರಿದು ಬರಲಿದೆ . ಹೀಗಾಗಿ ದೆಹಲಿ ಸರ್ಕಾರ ಅಬಕಾರಿ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ನಿರ್ಧರಿಸಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ರಾಜಧಾನಿಯಲ್ಲಿ ನಕಲಿ ಮದ್ಯದ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ದೆಹಲಿಯಲ್ಲಿ ಆಲ್ಕೋಹಾಲ್ ಚೆಕಿಂಗ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋ ಎಚ್ಚರ ಇರಲಿ. ಮದ್ಯಪಾನ ಮಾಡಿದ ಬಳಿಕ ವಾಹನ ಚಲಾಯಿಸುವುದು ಕೂಡ ಅಪರಾಧವಾಗಿದೆ. ಹೀಗಾಗಿ ಮದ್ಯಪಾನದ ಮುನ್ನ ಹಾಗೂ ಬಳಿಕಎಚ್ಚರ ಅತೀ ಅಗತ್ಯ.