ಮತ್ತೊಮ್ಮೆ ಸೂಪರ್ ಕಾಪ್‌ನಂತೆ ಕಾಣಿಸಿಕೊಳ್ಳಲಿಚ್ಛಿಸಿದ್ದರು ಸಚಿನ್: ಸಚಿನ್ ವಾಜೆ ಸೂಪರ್ ಕಾಪ್ ಎಂದೇ ಪ್ರಸಿದ್ಧಿ ಪಡೆದವರು. 2000ನೇ ಇಸವಿಗಿಂತ ಮುನ್ನ ಎನ್‌ಕೌಂಟರ್ ಮಾಡಿ ಪತ್ರಿಕೆ- ಸುದ್ದಿ ಚಾನೆಲ್ ಇವುಗಳಲ್ಲಿ ಕಾಣಿಸಿಕೊಳ್ಳುವುದೆಂದರೆ ಅವರಿಗೆ ಬಹಳ ಇಷ್ಟವಾಗುತ್ತಿತ್ತು. ಅವರು ಈವರೆಗೆ ಒಟ್ಟು 63 ಎನನ್‌ಕೌಂಟರ್ ಮಾಡಿದ್ದಾರೆನ್ನಲಾಗಿದೆ. ಆದರೆ 2004ರ ಬಳಿಕ ಇದೆಲ್ಲವೂ ಏಕಾಏಕಿ ಮಾಯವಾಯ್ತು. ಅವರನ್ನು ಪೊಲೀಸ್ ಇಲಾಖೆಯಿಂದ ಅಮಾನತ್ತುಗೊಳಿಸಲಾಯ್ತು.
undefined
ಇನ್ನು ಮಾಧ್ಯಮ ವರದಿಗಳನ್ವಯ 16 ವರ್ಷಗಳ ಬಳಿಕ 2020ರಲ್ಲಿ ಮತ್ತೆ ಇಲಾಖೆಗೆ ಮರಳಿದಾಗ, ಮತ್ತೆ ತಾನು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಇಚ್ಛೆ ಅವರಲ್ಲಿ ಹುಟ್ಟಿಕೊಂಡಿದೆ. ಬಹುಶಃ ಇದೇ ಕಾರಣಕ್ಕೆ ಅವರು ಈ ಸಂಚು ಹೆಣೆದಿದ್ದರು. ಬಳಿಕ ಈ ಪ್ರಕರಣವನ್ನು ತಾನೇ ತನಿಖೆ ನಡೆಸಿದೆ ಎನ್ನುವಂತೆ ತೋರ್ಪಡಿಸಿ ಅಧಿಕಾರಿಗಳಿಂದ ಶಹಬ್ಬಾಸ್ ಎನಿಸಿಕೊಳ್ಳುಇವ ಆಸೆ ಹೊಂದಿದ್ದರೆನ್ನಲಾಗಿದೆ.
undefined
2004ರಲ್ಲಿ ಬಂಧಿತ ವ್ಯಕ್ತಿಯೊಬ್ಬನ ಸಾವು: 49 ವರ್ಷದ ವಾಜೆ ಮುಂಬೈ ಪೊಲೀಸ್ ವಿಭಾಗದಲ್ಲಿ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿದ್ದರು. ಅವರು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದರು. 1990ನೇ ಬ್ಯಾಚ್‌ನ ಅಧಿಕಾರಿಯಾಗಿದ್ದ ವಾಜೆಯ ಆಟ 2004ರಲ್ಲಿ ತಲೆಕೆಳಗಾಗಿತ್ತು. ಹೌದು ಘಾಟ್‌ಕೋಪರ್ ಸ್ಫೋಟ ಪ್ರಕರಂದಲ್ಲಿ ಬಂಧಿಸಲಾಗಿದ್ದ ಆರೋಪಿ ಖ್ವಾಜಾ ಯೂನುಸ್ ಎಂಬ ಆರೋಪಿ ಸಾವನ್ನಪ್ಪಿದ್ದ. ಹೀಗಾಗಿ 2004 ರಲ್ಲಿ ವಾಜೆಯವರನ್ನು ಅಮಾನತ್ತುಗೊಳಿಸಲಾಗಿತ್ತು. ವಾಜೆ ಹಾಗೂ ಅವರ ಟೀಂನ ಸದಸ್ಯರ ವಿರುದ್ಧ ಹತ್ಯಾರೋಪದ ಕೇಸ್ ದಾಖಲಾಗಿತ್ತು. ಇದು ಇವತ್ತಿಗೂ ನಡೆಯುತ್ತಿದೆ.
undefined
2020 ರಲ್ಲಿ 16 ವರ್ಷದ ಬಳಿಕ ಮತ್ತೆ ಪೊಲೀಸ್ ಇಲಾಖೆಗೆ ಎಂಟ್ರಿ: ಸಚಿನ್ ವಾಜೆ ಹದಿನಾರು ವರ್ಷ ಪೊಲೀಸ್ ಇಲಾಖೆಯಿಂದ ಅಮಾನತ್ತುಗೊಂಡಿದ್ದರು. 2020ರಲ್ಲಿ ಮಹಾರಾಷ್ಟ್ರದಲ್ಲಿ ಅನೇಕ ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತು. ಇದೇ ಕಾರಣವನ್ನಿಟ್ಟುಕೊಂಡು ಮಾಜಿ ಪೊಲೀಸ್ ಕಮಿಷನರ್ ಪರಮ್‌ವೀರ್ ಸಿಂಗ್, ಅಮಾನತ್ತುಗೊಂಡಿದ್ದ ಅನೇಕ ಪೊಲೀಸ್ ಅಧಿಕಾರಿಗಲನ್ನು ಮರಳಿ ಇಲಾಖೆಗೆ ಕರೆಸಿಕೊಂಡಿದ್ದರು. ಇವರಲ್ಲಿ ವಾಜೆ ಕೂಡಾ ಒಬ್ಬರು.
undefined
ಅರ್ನಬ್‌ರನ್ನು ಬಂಧಿಸಿದ್ದೇ ವಾಜೆ: ಕಳೆದ ವರ್ಷ ನವೆಂಬರ್‌ನಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಿದ್ದ ತಂಡದ ನೇತೃತ್ವ ಸಚಿನ್ ವಾಜೆವಹಿಸಿಕೊಂಡಿದ್ದರು.
undefined
2008ರವರೆಗೆ ಶಿವಸೇನೆಯ ಸದಸ್ಯರಾಗಿದ್ದ ವಾಜೆ: ಸಚಿನ್ ವಾಜೆ ಅಮಾನತ್ತುಗೊಂಡ ಬಳಿಕ ಶಿವಸೇನೆಗೆ ಸೇರ್ಪಡೆಗೊಂಡಿದ್ದರು. ಆದರೆ ಅಲ್ಲಿ ಹೇಳುವಷ್ಟು ಸಕ್ರಿಯರಾಗಿರಲಿಲ್ಲ. 2008ರವರೆಗೆ ಅವರು ಶಿವಸೇನೆಯ ಸದಸ್ಯರಾಗಿದ್ದರು.
undefined