ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನ ನ್ಯಾಯಾಂಗ ಬಂಧನ!

First Published | Feb 23, 2021, 6:23 PM IST

ಗಣರಾಜ್ಯೋತ್ಸವ ದಿನ ಆಯೋಜಿಸಿದ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿ ಹಿಂಸಾರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ಸಿಖ್ ಧ್ವಜ ಹಾರಿಸಲಾಗಿತ್ತು. ಕೆಂಪು ಕೋಟೆಯೊಳಿನ ಪಿಠೋಪಕರಣಗಳನ್ನು ಧ್ವಂಸ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದೀಪ್ ಸಿಧುಗೆ ಮತ್ತೆ ಸಂಕಷ್ಟ ಎದುರಾಗಿದೆ.

ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಆಯೋಜಿಸಿದ ರೈತ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿತ್ತು. ಟ್ರಾಕ್ಟರ್ ರ್ಯಾಲಿ ಹೆಸರಿನಲ್ಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಭಾರತಕ್ಕೆ ಅವಮಾನ ಮಾಡಿದ್ದರು. ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡಿದ್ದರು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ಆರೆಸ್ಟ್ ಆಗಿದ್ದ ನಟ, ಹೋರಾಟಗಾರ ದೀಪ್ ಸಿಧುಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜನವರಿ 26 ರಂದು ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ ಧ್ವಜ ಹಾರಿಸಿದ ಘಟನೆ ಹಾಗೂ ರೈತರನ್ನು ಪ್ರಚೋದಿಸಿ ಆರೋಪ ದೀಪ್ ಸಿಧು ಮೇಲಿದೆ. ಹೀಗಾಗಿ ಘಟನೆ ಬಳಿಕ ದೀಪ್ ಸಿಧು ತಲೆಮೆರೆಸಿಕೊಂಡಿದ್ದರು
Tap to resize

ಫೆಬ್ರವರಿ 9 ರಂದು ದೀಫ್ ಸಿಧುವನ್ನು ಪಂಜಾಬ್‌ನ ಜೀರಕ್‌ಪುರದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಮೆಟ್ರೊಪೊಲಿಟಿಯನ್ ಮ್ಯಾಜಿಸ್ಟ್ರೇಟ್‌ಗೆ ಹಾಜರುಪಡಿಸಲಾಗಿತ್ತು
ಈ ವೇಳೆ ನ್ಯಾಯಾಲಯ 7 ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇಂದಿಗೆ 7 ದಿನದ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಕಾರಣ ದೆಹಲಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಈ ವೇಳೆ 14 ದಿನದ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿದೆ.
ದೆಹಲಿ ಹಿಂಸಾಚರದಲ್ಲಿ ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ಹೆಚ್ಚಿನ ವಿಚಾರಣೆ ಅಗತ್ಯವಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ದೆಹಲಿ ಪೊಲೀಸರ ಪರ ವಕೀರಲು ವಾದಿಸಿದ್ದರು.
ಜನವರಿ 26 ರಂದು ನಡೆದ ಹಿಂಸಾಚಾರದಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಸಾರ್ವಜನಿಕ ಸಾರಿಗೆ, ಪೊಲೀಸ್ ವಾಹನಗಳು ಜಖಂ ಗೊಂಡಿತ್ತು.
ದೆಹಲಿ ಹಿಂಸಾಚಾರ ಕುರಿತು ದೀಪ್ ಸಿಧುಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದರೆ, ಇತ್ತ ರೈತ ಪ್ರತಿಭಟನೆಗೆ ಸೇರಿದ ಟೂಲ್‌ಕಿಟ್ ಪ್ರಕರಣದಲ್ಲಿ ಹೋರಟಗಾರ್ತಿ ದಿಶಾ ರವಿಗೆ ಪಟಿಯಾಲ ಕೋರ್ಟ್ ಜಾಮೀನು ನೀಡಿದೆ.

Latest Videos

click me!