Toolkit case ದಿಶಾ ರವಿಗೆ ಸಂಕಷ್ಟ; ಮತ್ತೆ 1 ದಿನ ಪೊಲೀಸ್ ಕಸ್ಟಡಿ!

First Published Feb 22, 2021, 5:17 PM IST

ಟೂಲ್‌ಕಿಟ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಯುವತಿ ದಿಶಾ ರವಿಗೆ ಜಾಮೀನು ಸಿಕ್ಕಿಲ್ಲ. ಮತ್ತೆ 1 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ.

ರೈತ ಹೋರಾಟದ ದಿಕ್ಕು ತಪ್ಪಿಸಲು, ಭಾರತದ ವಿರುದ್ಧ ಪಿತೂರಿ ನಡೆಸಲು ಸಂಚು ರೂಪಿಸಿ ಟೂಲ್‌ಕಿಟ್ ಡಾಕ್ಯುಮೆಂಟ್ ತಯಾರಿಸಿದ ಆರೋಪ ಹೊತ್ತಿರುವ ದಿಶಾ ರವಿಗೆ ಮತ್ತೆ ಜಾಮೀನು ಭಾಗ್ಯ ಸಿಕ್ಕಿಲ್ಲ.
undefined
ಫೆಬ್ರವರಿ 13 ರಂದು ದೆಹಲಿ ಪೊಲೀಸರು ದಿಶಾ ರವಿಯನ್ನು ಬಂಧಿಸಿದ್ದರು. ಇದೀಗ ಮತ್ತೆ ಒಂದು ದಿನದ ಮಟ್ಟಿಗೆ ನ್ಯಾಯಾಲಯ ದಿಶಾ ರವಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
undefined
3 ದಿನಗಳ ನ್ಯಾಯಾಂಗ ಬಂಧನ ಇಂದು ಅಂತ್ಯಗೊಳ್ಳುತ್ತಿರುವ ಕಾರಣ ದೆಹಲಿ ಪೊಲೀಸರು ದಿಶಾ ರವಿಯನ್ನು ಪಟಿಯಾಲ ಹೌಸ್‌ ಕೋರ್ಟ್ಗೆ ಹಾಜರು ಪಡಿಸಿದ್ದರು.
undefined
ದಿಶಾ ರವಿ ಜಾಮೀನು ಅರ್ಜಿಯನ್ನು ನಿನ್ನೆ ವಿಚಾರಣೆನಡೆಸಿದ ಕೋರ್ಟ್ ತೀರ್ಪುನ್ನು ನಾಳೆ(ಫೆ.23) ಪಟಿಯಾಲ ಹೌಸ್ ಕೋರ್ಟ್ ಕಾಯ್ದಿರಿಸಿದೆ. ಇದರ ನಡುವೆ ನ್ಯಾಯಾಂಗ ಬಂಧನ ಅವದಿ ಅಂತ್ಯಗೊಂಡ ಕಾರಣ ಇಂದು ದಿಶಾ ರವಿಯನ್ನು ಕೋರ್ಟ್‌ಗೆ ಹಾಜರಪುಡಸಿಲಾಗಿದೆ. ಇಷ್ಟೇ ಅಲ್ಲಒಂದು ದಿನದ ಮಟ್ಟಿಗೆ ದಿಶಾ ರವಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
undefined
ರೈತ ಪ್ರತಿಭಟನೆ ಹಾಗೂ ಹೋರಾಟದ ಸ್ವರೂಪ ಕುರಿತ ಟೂಲ್‌ಕಿಟ್‌ನ್ನು ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದರು.
undefined
ಈ ಟೂಲ್‌ಕಿಟ್‌ನ್ನು ಖಲಿಸ್ತಾನ ಸಂಘಟನೆಯ ಮೊ ಧಲಿವಾಲ್, ದಿಶಾ ರವಿ ಸೇರಿದಂತೆ ಹಲವರು ನಿರ್ಮಿಸಿದ್ದರು. ಈ ಟೂಲ್ ಕಿಟ್ ರೈತ ಹೋರಾಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ಭಾರತದ ವಿರುದ್ಧ ಪಿತೂರಿ ನಡೆಸಲು ಮಾಡಿದ ಸಂಚಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
undefined
click me!