ಲಡಾಖ್‌ನ ಲೆಹ್‌ನಲ್ಲಿ ಯೋಧರ ಜೊತೆ ರಕ್ಷಣಾ ಸಚಿವ..! ಇಲ್ಲಿವೆ ಫೋಟೋಸ್

First Published Jul 17, 2020, 12:04 PM IST

ಚೀನಾದೊಂದಿಗಿನ ಘರ್ಷಣೆ ನಡುವೆಯೇ ಗಡಿಯಲ್ಲಿ ಸೇನಾ ಸ್ಥಿತಿಗತಿಯನ್ನು ಪರಿಶೀಲಿಸಲು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ಲಡಾಖ್‌ನ ಲೆಹ್‌ಗೆ ಶುಕ್ರವಾರ ಭೇಟಿ ಕೊಟ್ಟಿದ್ದಾರೆ. ಇಲ್ಲಿವೆ ಫೋಟೋಸ್

ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್ ಲಡಾಖ್‌ನ ಲೆಹ್‌ಗೆ ಶುಕ್ರವಾರ ಭೇಟಿ ಕೊಟ್ಟಿದ್ದಾರೆ.ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಅವರು ರಾಜ್‌ನಾಥ್‌ ಸಿಂಗ್ ಜೊತೆಗಿದ್ದರು. ಲಾಡಾಖ್‌ನ ಸ್ಟಕ್ನಾದಲ್ಲಿ ಸೇನೆಯ ಪ್ಯಾರಡ್ರಾಪಿಂಗ್ ವೀಕ್ಷಿಸಿದ್ದಾರೆ.
undefined
ಲಡಾಖ್ ಹಾಗೂ ಜಮ್ಮು ಕಾಶ್ಮೀರಕ್ಕೆ ಸಚಿವರು ಎರಡು ದಿನಗಳ ಭೇಟಿಯನ್ನು ಪ್ಲಾನ್ ಮಾಡಿದ್ದಾರೆ. ಇಂದು ಲಡಾಖ್‌ ಭೇಟಿ ಮತ್ತು ಶನಿವಾರ ಜಮ್ಮುಕಾಶ್ಮೀರಕ್ಕೆ ಭೇಟಿ ಮಾಡಲಿದ್ದಾರೆ.
undefined
ಚೀನಾ ಹಾಗೂ ಭಾರತದ ನಡುವೆ ಗಡಿ ಸಂಘರ್ಷ ಹೆಚ್ಚುತ್ತಿದ್ದು, ಈಗಾಗಲೇ ನಾಲ್ಕನೇ ಸುತ್ತಿನ ಮಾತುಕತೆಯೂ ಮುಗಿದಿದೆ.
undefined
ಎರಡೂ ದೇಶಗಳ ಸೇನಾ ಮುಖ್ಯಸ್ಥರು ಮಾತನಾಡಿ, ಗಡಿಯಲ್ಲಿ ರೋಡ್ ಮ್ಯಾಪ್ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘರ್ಷ ಉಂಟಾಗುವುದನ್ನು ತಪ್ಪಿಸಲು ಯತ್ನಿಸಿದ್ದಾರೆ.
undefined
ರಾಜ್‌ನಾಥ್‌ ಸಿಂಗ್ ಜುಲೈ ಆರಂಭದಲ್ಲಿಯೇ ಬೇಟಿ ನೀಡುವವರಿದ್ದರು. ಇದೀಗ ಪ್ರಧಾನಿ ಮೋದಿ ಭೇಟಿಯ ಎರಡು ವಾರಗಳ ನಂತರ ಅವರು ಭೇಟಿ ಮಾಡಿದ್ದಾರೆ. ಜುಲೈ 3ರಂದು ಪ್ರಧಾನಿ ಮೋದಿ ಭೇಟಿ ಕೊಟ್ಟಿದ್ದರು.
undefined
click me!