ಅಸ್ಸಾಂ(ಜು. 15) ಭಾರಿ ಪ್ರವಾಹಕ್ಕೆ ಅಸ್ಸಾಂ ತತ್ತರಿಸಿ ಹೋಗುತ್ತಿದೆ. ಒಂದು ಕಡೆ ಕೊರೋನಾ ಇನ್ನೊಂದು ಕಡೆ ವರುಣನ ಆರ್ಭಟ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈ ಶಾಸಕರು ಮಾತ್ರ ನಿಜವಾದ ಜನಸೇವೆಯಲ್ಲಿ ತೊಡಗಿದ್ದಾರೆ. ಅಸ್ಸಾಂ ಖುಮ್ಟಾಯ್ ಬಿಜೆಪಿಯ ಶಾಸಕ ಮೃನಾಲ್ ಸಾಲೀಕಾ ಜನರ ಮಧ್ಯೆ ನಿಂತಿದ್ದಾರೆ. ಪ್ರವಾಹದ ಪರಿಣಾಮ ಅಸ್ಸಾಂನ ಬಹುತೇಕ ಜಿಲ್ಲೆಗಳು ಜಲಾವೃತವಾಗಿವೆ. ಎದೆಮಟ್ಟದ ನೀರಿನಲ್ಲಿ ಸಾಗಿ ಶಾಸಕರೇ ಸ್ವಯಂ ಜನರ ರಕ್ಷಕರಾಗಿದ್ದಾರೆ. ತಮ್ಮ ಕ್ಷೇತ್ರದ ಜನರ ಸಂಕಷ್ಟಕ್ಕೆ ನೀರಿಗೆ ಇಳಿದಿದ್ದಾರೆ. ನನ್ನ ಕ್ಷೇತ್ರದ ನೂರಾರು ಜೀವಗಳನ್ನು ರಕ್ಷಣೆ ಮಾಡಿದ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. ಶಾಸಕರ ಮಾದರಿ ಕಾರ್ಯಕ್ಕೆ ನಾವು ಒಂಧು ಅಭಿನಂದನೆ ಸಲ್ಲಿಸೋಣ ಸ್ವಯಂ ಸೇವವಕರೊಂದಿಗೆ ತೆರಳಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. BJP MLA Mrinal Saikia from Khumtai, Assam, wading through waist-deep flood water. ಅಸ್ಸಾಂ ಪ್ರವಾಹ; ಜನರ ಜೀವ ರಕ್ಷಣೆಗೆ ನೀರಿಗಿಳಿದ ಶಾಸಕ