ಶಿಶುವಿನ ಶವ ಎಂದು ಗೊಂಬೆ ಪೋಸ್ಟ್‌ ಮಾರ್ಟಂ ಮಾಡಿದ್ರು!

First Published Jul 14, 2020, 6:46 PM IST

ನದಿ ಬದಿಯಲ್ಲಿ ಯಾವುದಾದರೂ ನವಜಾತ ಶಿಶುವಿನ ಶವ ಸಿಕ್ಕರೆ ಗಾಬರಿಗೀಡಾಗುತ್ತದೆ. ಇಂತಹುದೇ ಘಟನೆ  ಮಹಾರಾಷ್ಟ್ರದ ಬುಲ್ಟಾಯಾ ಜಿಲ್ಲೆಯಲ್ಲೂ ನಡೆದಿದೆ. ಮಣ್ಣಿನಿಂದ ಕೂಡಿದ ಶವ ನೋಡಿದಾಗ ಜನರೂ ಆತಂಕಕ್ಕೀಡಾಗಿದ್ದಾರೆ. ಅವಸರದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಶವ ಸುತ್ತಿ ಪೋಸ್ಟ್‌ ಮಾರ್ಟಂಗೆಂದು ಕಳುಹಿಸಿದ್ದಾರೆ. ಅಲ್ಲದೇ ಈ ಸಂಬಂಧ ತನಿಖೆಯನ್ನೂ ಆರಂಭಿಸಿದ್ದಾರೆ. ಆದರೆ ಪೋಸ್ಟ್‌ ಮಾರ್ಟಂ ವರದಿ ಬಂದಾಗ ಅಸಲಿ ಆಟ ಶುರುವಾಗಿದೆ. 

ಪೊಲೀಸರ ಅನ್ವಯ ಈ ಶವ ಕಂಡರೆ ಇದು 7 ರಿಂದ 8 ತಿಂಗಳ ಮಗುವೆಂದು ಅನಿಸುತ್ತಿತ್ತು. ಪ್ರಕರಣದ ಗಂಭೀರತೆ ಅರಿತು ಇದನ್ನು ಖಾಂಗಾಂವ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.
undefined
ನದಿ ಬಳಿ ಬಿದ್ದಿದ್ದ ಇದು ನೋಡಲು ಪುಟ್ಟ ಕಂದನ ಶವದಂತೆ ಕಾಣುತ್ತಿತ್ತು. ಮಣ್ಣಿನಿಂದ ಕೂಡಿದ್ದ ಇದು ಅಷ್ಟೊಂದು ಸ್ಪಷ್ಟವಾಗಿರಲಿಲ್ಲ.
undefined
ಆದರೆ ವೈದ್ಯರು ಇದನ್ನು ಪರೀಕ್ಷಿಸಿದಾಗ ಅಚ್ಚರಿಗೀಡಾಗಿದ್ದಾರೆ. ಈವರೆಗೆ ಯಾವುದನ್ನು ತಾವು ಮಗು ಎಂದು ಭಾವಿಸಿದ್ದೆವೋ ಅದು ವಾಸ್ತವವಾಗಿ ಒಂದು ಪ್ಲಾಸ್ಟಿಕ್ ಗೊಂಬೆ ಎಂಬುವುದು ತಿಳಿದು ಬಂದಿದೆ.
undefined
ಮೂಳೆಗಳ ಬದಲು ಮೊಳಕೆಯೊಡೆದ ಬೀಜ ಹಾಗೂ ತರಗೆಲೆ ಇದ್ದವು.
undefined
ಸದ್ಯ ಇದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ಯಾರೋ ದುರುಳಲು ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದಾರೆನ್ನಲಾಗಿದೆ.
undefined
ಪೊಲೀಸರು ಪರೀಕ್ಷಿಸಿದಾಗ ಇದೊಂದು ಗೊಂಬೆ ಎಂದು ಅರಿತುಕೊಳ್ಳಲು ಎಡವಿದರೇ ಎಂಬ ಆರೋಪ ಕೇಳಿ ಬಂದಿದೆ.
undefined
ಪೊಲೀಸರು ಈ ಘಟನೆಯಿಂದ ಭಾರೀ ಮುಜುಗರಕ್ಕೊಳಗಾಗಿದ್ದಾರೆ.
undefined
click me!