Published : May 24, 2025, 04:39 PM ISTUpdated : May 24, 2025, 04:40 PM IST
ಉತ್ತರ ಪ್ರದೇಶದ ಸರ್ಕಾರಿ ವೈದ್ಯರೊಬ್ಬರು ಮಹಿಳೆಯರ ರೀತಿ ಡ್ರೆಸ್ ಧರಿಸಿ ಅಶ್ಲೀಲ ವಿಡಿಯೋ ಮಾಡಿದ್ದಾರಂತೆ. ಡಾ. ವರುಣೇಶ್ ದುಬೆಯವರು ಮಹಿಳೆಯಂತೆ ಉಡುಗೆ ಧರಿಸಿ, ವಿಡಿಯೋ ಮಾಡಿರುವ ಬಗ್ಗೆ ಪತ್ನಿಯೇ ಆರೋಪ ಮಾಡಿದ್ದಾರೆ.
ಡಾ. ದುಬೆಯವರು ತಮ್ಮ ಸರ್ಕಾರಿ ವಸತಿಗೃಹದಲ್ಲಿ, ಉಳಿದ ಪುರುಷರ ಜೊತೆ ಅಶ್ಲೀಲ ವೀಡಿಯೊಗಳನ್ನು ಶೂಟಿಂಗ್ ಮಾಡಿದ್ದಾರೆ, ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಅವರ ಪತ್ನಿ ಆರೋಪಿಸಿದ್ದಾರೆ. ಆದರೆ, ಡಾ. ದುಬೆ ಈ ಆರೋಪಗಳನ್ನು ನಿರಾಕರಿಸಿದ್ದು, ತಮ್ಮ ಆಸ್ತಿಯನ್ನು ಕಬಳಿಸಲು ಪತ್ನಿಯೇ ಡೀಪ್‌ಫೇಕ್ ವೀಡಿಯೊಗಳ ಮೂಲಕ ನಮ್ಮ ಹೆಸರು ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ವೈರಲ್ ಆದ ವಿಡಿಯೋಗಳಲ್ಲಿ ಮಹಿಳೆಯ ಉಡುಗೆಯಲ್ಲಿ ಡಾಕ್ಟರ್ ಇರೋದು ಕಂಡುಬಂದಿದೆ.
27
ಪತ್ನಿ ಆರೋಪ ಏನು?
ಡಾ. ದುಬೆ ಸಂತ ಕಬೀರ್ ನಗರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು, ಸಿಂಪಿ ಪಾಂಡೆ ಜೊತೆ ಲವ್ ಮ್ಯಾರೇಜ್ ಆಗಿದ್ದರು. “ಗೊರಖ್‌ಪುರದ ಮನೆಯಲ್ಲಿ ತನ್ನನ್ನು ಬಿಟ್ಟು, ಡಾಕ್ಟರ್ ತಮ್ಮ ಸರ್ಕಾರಿ ವಸತಿಗೃಹದಲ್ಲಿ ಈ ಅಶ್ಲೀಲ ಚಟುವಟಿಕೆಗಳನ್ನು ನಡೆಸುತ್ತಿದ್ದರು” ಎಂದು ಪತ್ನಿ ಆರೋಪಿಸಿದ್ದಾರೆ. ಈ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
37
ಪ್ರಶ್ನೆ ಮಾಡಿದ್ದಕ್ಕೆ ಹೊಡೆದನು
"ಪೇಡ್ ವೆಬ್‌ಸೈಟ್‌ನಲ್ಲಿ ನನ್ನ ಗಂಡನ ಕೆಲವು ವೀಡಿಯೊಗಳನ್ನು ಕಂಡೆ. ನಾವು ಅದಕ್ಕೆ ಹಣ ಪಾವತಿಸಿ, ನನ್ನ ಗಂಡನ ಕೆಲವು ಅಶ್ಲೀಲ ವೀಡಿಯೊಗಳನ್ನು ನೋಡಿದೆವು. ಆ ವೀಡಿಯೊಗಳು ಅವನ ಮನೆಯಲ್ಲಿ ಶೂಟಿಂಗ್ ಆಗಿತ್ತು. ನಾನು ನನ್ನ ಗಂಡನೊಂದಿಗೆ ಈ ಬಗ್ಗೆ ಕೇಳಿದಾಗ ಅವನು ನನ್ನನ್ನು ಮತ್ತು ನನ್ನ ಸಹೋದರನನಿಗೆ ಹೊಡೆದನು" ಎಂದು ಅವರು ಹೇಳಿದ್ದಾರೆ.
ಪೊಲೀಸರು ಡಾಕ್ಟರ್ ಮನೆಯ ಮೇಲೆ ದಾಳಿ ಮಾಡಿ, ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ನನ್ನ ಗಂಡ "ಟ್ರಾನ್ಸ್‌ಜೆಂಡರ್" ಎಂದು ಕರೆದುಕೊಳ್ಳುತ್ತಾನೆ ಎಂದು ಮಹಿಳೆ ಹೇಳಿರೋದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
57
ಪೊಲೀಸ್ ಅಧಿಕಾರಿಗಳು ಏನಂದ್ರು?
"ಆ ಮಹಿಳೆ ತನ್ನ ಗಂಡ ಟ್ರಾನ್ಸ್‌ಜೆಂಡರ್ ಎಂದು ಹೇಳಿದ್ದಾರೆ. ಡಾಕ್ಟರ್, ಪುರುಷರನ್ನು ತನ್ನ ನಿವಾಸಕ್ಕೆ ಕರೆದು, ಅಶ್ಲೀಲ ವೀಡಿಯೊಗಳನ್ನು ಶೂಟಿಂಗ್ ಮಾಡಿ, ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಾನೆ. ಆಕೆ ಈ ಬಗ್ಗೆ ಕೇಳಿದಾಗ, ಅವನು ಆಕೆಯನ್ನು, ಆಕೆಯ ಕುಟುಂಬವನ್ನು ಹೊಡೆದಿದ್ದಾನೆ. ಈ ವಿಷಯದಲ್ಲಿ ದೂರು ಕೇಳಿದ ನಂತರ, ಪ್ರಕರಣ ದಾಖಲಿಸಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಸುಶೀಲ್ ಕುಮಾರ್ ಸಿಂಗ್ ಹೇಳಿದ್ದಾರೆ.
67
ಡಾಕ್ಟರ್ ಏನಂದ್ರು?
ಡಾ. ದುಬೆ, ಜೈಲಿನ ವೈದ್ಯಾಧಿಕಾರಿಯೂ ಆಗಿದ್ದು, ಈ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದಾರೆ. ನಿರಪರಾಧಿ ಎಂದು ಸಾಬೀತುಪಡಿಸಲು ಕೊನೆಯವರೆಗೂ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಾನು ಮನೆಯಲ್ಲಿ ಇಲ್ಲದಿದ್ದಾಗ, ಕೆಲ ಪುರುಷರು ನಮ್ಮ ಮನೆಗೆ ಭೇಟಿ ನೀಡುವ ಬಗ್ಗೆ ನನ್ನ ಪತ್ನಿಯೊಂದಿಗೆ ವಿವಾದವಿತ್ತು. ಆದರೆ ತಂದೆಯ ಮರಣದ ನಂತರ, ಕೋಟಿಗಟ್ಟಲೆ ಆಸ್ತಿಯನ್ನು ತಾವು ಉತ್ತರಾಧಿಕಾರಿಯಾಗಿ ಪಡೆದ ನಂತರ ಪರಿಸ್ಥಿತಿ ಹದಗೆಟ್ಟಿತು ಎಂದು ಹೇಳಿದ್ದಾರೆ.
77
ಹೋರಾಡುವೆ ಎಂದ ಡಾಕ್ಟರ್
"ಆಕೆ ಒಬ್ಬ ಹಣ ಲೂಟಿ ಮಾಡುವ ಹೆಂಗಸು, ನನ್ನ 85 ವರ್ಷದ ತಂದೆಯನ್ನು ನಿಂದಿಸಿ, ಮಾನಸಿಕವಾಗಿ ಕಿರುಕುಳ ನೀಡಿದಳು. ಆಕೆ ನಮ್ಮ ಮಗುವನ್ನು ಬಾಲ್ಕನಿಯಿಂದ ಎಸೆಯುತ್ತೀನಿ ಅಂತ ಬೆದರಿಕೆ ಹಾಕಿದಳು. ನನ್ನ ತಂದೆ ಸತ್ತ ನಂತರ, ಆಕೆ ನನ್ನ ಫೋನ್‌ನಲ್ಲಿ ಡೀಪ್‌ಫೇಕ್ ವಿಡಿಯೋ ಮಾಡಿದ್ದಾಳೆ.ಆದರೆ ನಾನು ಆತ್ಮಹತ್ಯೆ ಮಾಡಿಕೊಂಡು ಸಾಯುವುದಿಲ್ಲ, ಕೊನೆಯವರೆಗೂ ಹೋರಾಡುವೆ" ಎಂದು ಡಾಕ್ಟರ್ ಹೇಳಿದ್ದಾರೆ.