ಹೈದರಾಬಾದ್(ಡಿ. 21) ಕೊರೋನಾ ಸಂಕಷ್ಟದ ಕಾಲದಲ್ಲಿ ಸೋನು ಸೂದ್ ಮಾಡಿರುವ ಮತ್ತು ಮಾಡುತ್ತಿರುವ ಜನಾನುರಾಗಿ ಕೆಲಸಗಳಿಗೆ ಕೊನೆಯೇ ಇಲ್ಲ. ಇದೇ ಕಾರಣಕ್ಕೆ ವಿಶ್ವ ಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ತೆಲಂಗಾಣದ ಜನರು ಸೋನು ಸೂದ್ ಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಕೊರೋನಾ ಸಂಕಷ್ಟದ ಕಾಲದಲ್ಲಿ ನೆರವಾದ ಸೋನು ಸೂದ್ ಅವರ ದೇವಾಲಯ ಕಟ್ಟಿ ಪೂಜೆ ಮಾಡಲಕಾಗಿದೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ದುಬ್ಬಾ ತಾಂಡಾ ಗ್ರಾಮಸ್ಥರು ನಟ ಸೋನು ಸೂದ್ ಅವರ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಸೋನು ಸೂದ್ ಪುತ್ಥಳಿ ನಿರ್ಮಿಸಿರುವ ಶಿಲ್ಪಿ ಮತ್ತು ಸ್ಥಳೀಯ ಸಮ್ಮುಖದಲ್ಲಿ ದೇವಾಲಯ ಲೋಕಾರ್ಪಣೆ ಮಾಡಲಾಗಿದೆ. ಮಹಿಳೆಯರು ಸಾಂಪ್ರದಾಯಿಕ ದಿರಿಸು ಧರಿಸಿ, ಜಾನಪದ ಗೀತೆಗಳನ್ನು ಹಾಡಿದರು ಮತ್ತು ಆರತಿ ಬೆಳಗಿ ಗೌರವ ಸಲ್ಲಿಸಿದರು. Telangana Dubba Tanda village have constructed a temple in actor and philanthropist Sonu Sood's honour. ಸೋನು ಸೂದ್‌ಗೆ ವಿಶಿಷ್ಟ ಗೌರವ ಸಲ್ಲಿಸಿದ ತೆಲಂಗಾಣ ಗ್ರಾಮಸ್ಥರು