ಶಾ ಸಮ್ಮುಖದಲ್ಲಿ TMC ಶಾಸಕ ಸುವೆಂದು ಅಧಿಕಾರಿ ಸೇರಿದಂತೆ 13 ನಾಯಕರು ಬಿಜೆಪಿ ಸೇರ್ಪಡೆ!

First Published Dec 19, 2020, 3:36 PM IST

ಪಶ್ಚಿಮ ಬಂಗಾಳ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಬಿಜೆಪಿ, ಆಡಳಿತಾರೂಢ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತೃಣಮೂಲಕ ಕಾಂಗ್ರೆಸ್ ನಾಯಕರಲ್ಲಿ ಒಡಕು ಮೂಡಿದ್ದು, ಇದೀಗ ಬಿಜೆಪಿಯತ್ತ ಮುಖಮಾಡಿದ್ದಾರೆ. ಅಮಿತ್ ಶಾ ರ್ಯಾಲಿಯಲ್ಲಿ ಟಿಎಂಸಿ ನಾಯಕ ಸುವೆಂದು ಅದಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಜೊತೆ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಟ್ಟಿದ್ದ ಭದ್ರಕೋಟೆ ಇದೀಗ ಛಿದ್ರವಾಗುವ ಲಕ್ಷಣಗಳು ಕಾಣಿಸುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಇದೀಗ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
undefined
ರಾಜೀನಾಮೆ ನೀಡಿ ಮಮತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಟಿಎಂಸಿ ಶಾಸಕ ಸುವೆಂದು ಅದಿಕಾರಿ, ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ
undefined
ಬಿಜೆಪಿ ಆಯೋದಿಸಿದ ಮೆಘಾ ರ್ಯಾಲಿಯಲ್ಲಿ ಸುವೆಂದು ಅಧಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಸುವೆಂದು ಅಧಿಕಾರಿಯನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
undefined
ಸುವೆಂದು ಅಧಿಕಾರಿ ಜೊತೆ 11 MLA, ಓರ್ವ ಸಂಸದ ಹಾಗೂ ಓರ್ವ ಮಾಜಿ ಸಂಸದ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಇದುವರೆಗೆ ತೃಣಮೂಲ ಕಾಂಗ್ರೆಸ್ ಎದುರಿಸಿದ ಅತೀದೊಡ್ಡ ಆಘಾತ ಇದಾಗಿದೆ.
undefined
ಬುರ್ದ್ವಾನ್ ಪುರ್ಬಾ ಸಂಸದ ಸುನಿಲ್ ಮೊಂಡಾಲ್ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನು ಆಲಿಪುರ್ದೌರ್ ಮಾಜಿ ಸಂಸದ ದಸರತ್ ತಿರ್ಕಿ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.
undefined
ಸುವೆಂದು ಅಧಿಕಾರಿ ಸೇರಿದಂತ 11 MLA ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಇದರಲ್ಲಿ ಹಲ್ದಿಯಾ ಕ್ಷೇತ್ರದ MLA ತಪಸಿ ಮೊಂಡಾಲ್, ತಮ್ಲೂಕ್ ಕ್ಷೇತ್ರದ ಅಶೋಂಕ್ ದಿಂಡಾ , ಪುರುಲಿಯಾ ಕ್ಷೇತ್ರದ MLA ಸುದೀಪ್ ಮುಖರ್ಜಿ ಬಿಜೆಪಿ ಸೇರಿಕೊಂಡಿದ್ದಾರೆ.
undefined
ಬುರ್ದ್ವಾನ್ ಕ್ಷೇತ್ರದ MLA ಸೈಕಲ್ ಪಂಜಾ, ಗಝೋಲ್ ಕ್ಷೇತ್ರದ MLA ಶೀಲ್‌ಭದ್ರ ದತ್ತಾ, ನಗರ್‌ಕಟಾ ಕ್ಷೇತ್ರದ MLA ಸುುರ್ಕಾ ಮುಂಡಾ, ಬಿಷ್ಣುಪುರ್ ಕ್ಷೇತ್ರದ MLA ಶ್ಯಾಮಪದಾ ಮುಖರ್ಜಿ, ರ್ಯಾಲಿಯಲ್ಲಿ ಅಮಿತ್ ಶಾ ಸಮ್ಮುಖದಲ್ಲೇ ಬಿಜೆಪಿ ಸೇರಿಕೊಂಡಿದ್ದಾರೆ.
undefined
ಕಲ್ನಾ ಕ್ಷೇತ್ರದ MLA ಬಿಸ್ವಜಿತ್ ಕುಂಡು ಹಾಗೂ ಉತ್ತರ ಕಾಂತಿ ಕ್ಷೇತ್ರದ ಬನಸ್ತಿ ಮೈಟಿ ಬಿಜೆಪಿ ಸೇರಿಕೊಂಡಿದ್ದಾರೆ. ಟಿಎಂಸಿ ನಾಯಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆಯಿಂದ ಮಮತಾ ಸಂಪುಟ ಖಾಲಿಯಾಗಿದೆ.
undefined
click me!