ಕೇಂದ್ರ ಆರೋಗ್ಯ ಇಲಾಖೆ ಭಾರತದಲ್ಲಿ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆಯನ್ನು ಬಹಿರಂಗ ಪಡಿಸಿದೆ. ಈ ವರದಿ ಪ್ರಕಾರ ಭಾರತದಲ್ಲಿ ಸರಿಸುಮಾರು 1.47 ಲಕ್ಷ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
undefined
1.47 ಲಕ್ಷ ಮಂದಿ ಬಲಿಯಾಗಿದ್ದಾರೆ ನಿಜ. ಆದರೆ ಈ ವರದಿಯಲ್ಲಿ ಮತ್ತೊಂದು ಅಂಶವನ್ನು ಬಹಿರಂಗ ಪಡಿಸಿದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರಲ್ಲಿ ಶೇಕಡಾ 70 ರಷ್ಟು ಮಂದಿ ಪುರುಷರು.
undefined
ಇದರಲ್ಲಿ ಶೇಕಡಾ 65ರಷ್ಟು ಮಂದಿ 60ಕ್ಕಿಂತ ಕೆಳಗಿನ ವಯಸ್ಸಿನವರು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ
undefined
ಕೊರೋನಾ ಕಾಣಿಸಿಕೊಂಡ 18ರಿಂದ 44 ವರ್ಷ ವಯಸ್ಸಿನವರಲ್ಲಿ ಶೇಕಾಡ 11 ರಷ್ಟು ಮಂದಿ ಸಾವೀಗೀಡಾಗಿದ್ದಾರೆ. ತರುಣರು ಕೋವಿಡ್ ವಿರುದ್ಧ ಹೋರಾಡಬಲ್ಲ ಶಕ್ತಿ ಹೊಂದಿದ್ದಾರೆ ಎಂದು ಕಾರ್ಯದರ್ಶಿ ಹೇಳಿದ್ದಾರೆ.
undefined
ದೇಶದಲ್ಲಿ ದೈನಂದಿನ ಕೊರೋನಾ ಸಾವು ವಿಶ್ವಕ್ಕೆ ಹೋಲಿಸಿದರೆ ಅತೀ ಕಡಿಮೆಯಾಗಿದೆ. ದಿನಕ್ಕೆ ಸರಾಸರಿ 300 ಕ್ಕಿಂತಲೂ ಕಡಿಮೆಯಾಗಿದೆ, ಸಕ್ರಿಯ ಪ್ರಕರಣಗಳು ಆರು ತಿಂಗಳ ನಂತರ 2.7 ಲಕ್ಷ, ಮತ್ತು ಪಾಸಿಟೀವ್ ಪ್ರಕರಣ ಶೇಕಡಾ 6.02 ರಷ್ಟಿದೆ.
undefined
ನೋವಲ್ ಕೊರೋನಾ ವೈರಸ್‌ಗಿಂತ ರೂಪಾಂತರಗೊಂಡ ಕೊರೋನಾ ವೈರಸ್ ಹರಡುವಿಕೆಯಲ್ಲಿ ಶೇಕಡಾ 70 ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ಮಾಸ್ಕ್, ಸಾಮಾಜಿಕ ಅಂತರ ಅತೀ ಅಗತ್ಯ ಎಂದು ಆರೋಗ್ಯ ಇಲಾಖೆ ಹೇಳಿದೆ.
undefined
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,432 ಹೊಸ ಕೋವಿಡ್ -19 ಪ್ರಕರಣಗಳನ್ನು ಹಾಗೂ 252 ಸಾವುಗಳಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
undefined
ಡಿಸೆಂಬರ್ 9 ರ ನಂತರ ಯುಕೆಯಿಂದ ಭಾರತಕ್ಕೆ ಮರಳಿದ ಎಲ್ಲರು ರೂಪಾಂತರ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
undefined