23 ವರ್ಷ ಹಿರಿಯ ಮಹಿಳೆಯ ಪ್ರೀತಿಸಿ, ಮದುವೆಯಾದ: ಸಿಂಗರಿಸಿ ಬಂದಾಕೆಯನ್ನು ಕೊಂದೇ ಬಿಟ್ಟ!

Published : Dec 28, 2020, 04:23 PM IST

ಸಂಭ್ರಮಾಚರಣೆ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟರೆ ಆ ಕುಟುಂಬದ ಪರಿಸ್ಥಿತಿ ಹೇಗಿರಬೇಡ? ಸದ್ಯ ಇಂತಹುದೇ ಒಂದು ಪ್ರಕರಣ ಕೇರಳದ ತಿರುವನಂತಪುರಂನಲ್ಲಿ ವರದಿಯಾಗಿದೆ. ಇಲ್ಲೊಬ್ಬ ಮಹಿಳೆ ಕ್ರಿಸ್‌ಮಸ್ ಆಚರಣೆ ವೇಳೆ ಕೊನೆಯುಸಿರೆಳೆದಿದ್ದಾಳೆ. ಆರಂಭದಲ್ಲಿ ಇದೊಂದು ದುರ್ಘಟನೆ ಎಂದೇ ಜನರು ಭಾವಿಸಿದ್ದರು. ಆದರೆ ಈ ಸಾವಿನ ಹಿಂದೆ ಪತಿರಾಯನ ಕುತಂತ್ರವಿತ್ತು. ಇಲ್ಲಿ ಆತ ತನ್ನ ಹೆ೪ಂಡತಿಯನ್ನು ಕೇಕ್ ಕತ್ತರಿಸುವ ಮೊದಲೇ ಸಾಯಿಸಿದ್ದ. ಆದರೆ ಇದು ಯಾರಿಗೂ ತಿಳಿಯಲೇ ಇಲ್ಲ.  

PREV
15
23 ವರ್ಷ ಹಿರಿಯ ಮಹಿಳೆಯ ಪ್ರೀತಿಸಿ, ಮದುವೆಯಾದ: ಸಿಂಗರಿಸಿ ಬಂದಾಕೆಯನ್ನು ಕೊಂದೇ ಬಿಟ್ಟ!

ಈ ಘಟನೆ ತಿರುವನಂತಪುರಂನ ಕರ್ಕೋನಂನಲ್ಲಿ ಶನಿವಾರ ರಾತ್ರಿ ನಡೆದಿದೆ. ಇಲ್ಲಿ 51 ವರ್ಷದ ಶಾಖಾಕುಮಾರಿ ಹೊಸ ಬಟ್ಟೆ ಧರಿಸಿ, ಸಿಂಗರಿಸಿಕೊಂಡು ಕ್ರಿಸ್‌ಮಸ್ ಪಾರ್ಟಿಗೆ ಆಗಮಿಸಿದ್ದರು. ಇಲ್ಲಿ ಕೇಕ್ ಕಟ್‌ ಮಾಡುವವಳಿದ್ದಳು, ಆದರೆ ಅಷ್ಟರಲ್ಲೇ ವಿದ್ಯುತ್ ಶಾಕ್ ತಗುಲಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಇದಾದ ಬಳಿಕ ಪತಿ ಅರುಣ್ ತನ್ನ ಹೆಂಡತಿಯನ್ನು ಖಾಸಗಿ ಆಸ್ಪತ್ರೆಗೆ ಕರರೆದೊಯ್ದಿದ್ದಾನೆ. ಆದರೆ ಅಲ್ಲಿ ವೈದ್ಯರು ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
 
25

ಈ ಮಹಿಳೆ ಕ್ರಿಸ್‌ಮಸ್ ಸಂದರ್ಭದಲ್ಲಿ ಇಡೀ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಳು. ಆದರೆ ದುರಾದೃಷ್ಟವಶಾತ್ ಈ ವಿದ್ಯುತ್ ದೀಪದಿಂದಲೇ ಆ ಮಹಿಳೆ ಸಾವನ್ನಪ್ಪಿದ್ದಾಳೆ. ಆದರೆ ಪೊಲೀಸ್ ತನಿಖೆಯಲ್ಲಿ ಇದೊಂದು ದುರ್ಘಟನೆಯಲ್ಲ, ಕೊಲೆ ಎಂದು ಸಾಬೀತಾಗಿದ್ದು, ಇದು ಆಕೆಯ 28 ವರ್ಷದ ಗಂಡನೇ ಮಾಡಿದ್ದೆಂದು ತಿಳಿದು ಬಂದಿದೆ. ವಿಚಚಾರಣೆ ವೇಳೆ ಪತಿರಾಯನೂ ಬಾಯ್ಬಿಟ್ಟಿದ್ದಾನೆ.

35

ಪೊಲೀಸ್ ತನಿಖೆ ವೇಳೆ ಅರುಣ್ ತನಗಿಂತ 23 ವರ್ಷ ಹಿರಿಯಳಾದ ಶಾಖಾಕುಮಾರಿ ಜೊತೆ ಇದೇ ವರ್ಷ ಮದುವೆಯಾಗಿದ್ದ. ಆದರೆ ಮದುವೆ ಬಳಿಕ ಇಬ್ಬರ ನಡುವೆ ಮನಸ್ತಾಪ ಮೂಡಿದೆ. ಅರುಣ್ ತನ್ನ ಹೆಂಡತಿಯ ಆಸ್ತಿ ಕಬಳಿಸಲು ಹೊಂಚು ಹಾಕುತ್ತಿದ್ದು, ಈ ಉದ್ದೇಶದಿಂದಲೇ ಆತ ಇದಕ್ಕೂ ಮೊದಲು ಒಂದು ಬಾರಿ ಆಕೆಗೆ ವಿದ್ಯುತ್ ಶಾಕ್ ನಿಡಲು ಯತ್ನಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಂದು ಆತ ತನ್ನ ಈ ಪ್ಲಾನ್‌ನಲ್ಲಿ ಫೇಲ್ ಆಗಿದ್ದ.

45

ಇನ್ನು ಅರುಣ್ ಆಸ್ತಿಗಾಗೇ ತನಗಿಂತ 23 ವರ್ಷ ಹಿರಿಯ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ತನಗೆ ಈ ಆಸ್ತಿ ಸಿಗುವುದಿಲ್ಲ ಎಂಬ ವಿಚಾರ ತಿಳಿದಾಗ ಆತ ತನ್ನ ಪತ್ನಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದ. ಕ್ರಿಸ್‌ಮಸ್ ಪಾರ್ಟಿ ವೇಳೆ ವಿದ್ಯುತ್ ಶಾಕ್ ತಗುಲಿದರೆ ಯಾರೂ ತನ್ನ ಮೇಲೆ ಅಅನುಮಾನ ಪಡುವುದಿಲ್ಲ ಎಂಬುವುದು ಅರುಣ್ ಲೆಕ್ಕಾಚಾರವಾಗಿತ್ತು. ಆದರೆ ಪೊಲೀಸರು ತನಿಖೆ ಆರಂಭಿಸಿದಾಗ ಮನೆಯೊಳಗೆ ರಕ್ತದ ಕಲೆ ಪತ್ತೆಯಾಗಿದ್ದವು. ಹೀಗಾಗಿ ಅವರಿಗೆ ಈ ಸಾವಿನ ವಿಚಾರವಾಗಿ ಅನುಮಾನ ಮೂಡಿದೆ.  

55

ಅರುಣ್ ತನ್ನ ಹೆಂಡತಿಯಿಂದ ಡೈವೋರ್ಸ್ ಬಯಸಿದ್ದ. ಆದರೆ ಆಕೆ ಇದಕ್ಕೆ ನಿರಾಕರಿಸಿದ್ದಳು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. 
 
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories