ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು?

Published : Feb 14, 2026, 07:31 PM IST

ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು? ಕಳೆದ ಕೆಲ ವರ್ಷಗಳಿಂದ ಪ್ರಣಯ ಹಕ್ಕಿಗಳಾಗಿದ್ದ ಈ ಜೋಡಿ ವ್ಯಾಲಟೈನ್ಸ್ ಡೇ ದಿನವೇ ಸಾವು ಕಂಡಿದ್ದು ಹೇಗೆ, ಟಾಟಾ ಅಲ್ಟ್ರೋಜ್ ಕಾರಿನೊಳಗಿನ ರಹಸ್ಯ. 

PREV
16
ಪ್ರೇಮಿಗಳ ದಿನಾಚರಣೆ ದಿನವೇ ನಡೆಯಿತು ದುರಂತ

ವಿಶ್ವದೆಲ್ಲೆಡೆ ಪ್ರೇಮಿಗಳ ದಿನಾಚರಣೆ ಆಚರಿಸಲಾಗಿದೆ. ಹಲವರು ಶುಭ ಘಳಿಗೆಯಲ್ಲಿ ಪ್ರಪೋಸ್ ಮಾಡಿ ಪ್ರೀತಿ ಒಲಿಸಿಕೊಂಡಿದ್ದಾರೆ. ಇನ್ನು ಪ್ರೀತಿಸುವ ಜೋಡಿಗಳು ಪ್ರಣಯ ಹಕ್ಕಿಗಳಂತೆ ಸುತ್ತಾಡಿದ್ದಾರೆ. ಆದರೆ ಇದೇ ಪ್ರೇಮಿಗಳ ದಿನಾಚರಣೆಯಲ್ಲಿ ದುರಂತ ಒಂದು ನಡೆದಿದೆ. ಕಳೆದ ಕೆಲ ವರ್ಷಗಳಿಂದ ಒಬ್ಬರನ್ನೊಬ್ಬರು ಅತೀಯಾಗಿ ಪ್ರೀತಿಸುತ್ತಿದ್ದ ಈ ಜೋಡಿ ವ್ಯಾಲೆಟೈನ್ಸ್ ಡೇ ದಿನವೇ ದುರಂತ ಅಂತ್ಯಕಂಡ ಘಟನೆ ನೋಯ್ಡಾದಲ್ಲಿ ನಡೆದಿದೆ.

26
ಪಾರ್ಕ್ ಮಾಡಿದ್ದ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಜೋಡಿಯ ಶವಪತ್ತೆ

ನೋಯ್ಡಾದ ಸೆಕ್ಟರ್ 39ರಲ್ಲಿ ಪಾರ್ಕ್ ಮಾಡಿದ್ದ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಪ್ರೇಮಿಗಳಾದ ಸುಮಿತ್ ಹಾಗೂ ರೇಖಾ ಇಬ್ಬರ ಶವ ಪತ್ತೆಯಾಗಿದೆ. ತಮ್ಮ ಕೊನೆಯ ಸಂತಸದ ಘಳಿಗೆಯನ್ನೂ ಇದೇ ಕಾರಿನಲ್ಲಿ ಕಳೆದರೆ, ಕೊನೆಯ ಕ್ಷಣಗಳನ್ನು ಈ ಜೋಡಿ ಇದೇ ಕಾರಿನಲ್ಲಿ ಕಳೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.

36
ಕಾರಿನೊಳಗೆ ನಡೆದಿದ್ದೇನು?

ಸುಮಿತ್ ಹಾಗೂ ರೇಖಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರುದ್ದ ಅನ್ಯೋನ್ಯ ಪ್ರೀತಿ. ಇಬ್ಬರು ಜೀವನ ವಿಚಾರದಲ್ಲಿ ಗಂಭೀರವಾಗಿದ್ದರು. ಆದರೆ ರೇಖಾಗೆ ಮನೆಯಲ್ಲಿ ವರನ ನೋಡಿದ್ದು, ಆತನ ಜೊತೆಗೆ ಮದುವೆ ಮಾಡಲು ಮುಂದಾಗಿದ್ದಾರೆ. ಇತ್ತ ರೇಖಾ ಕೂಡ ಒಪ್ಪಿಕೊಂಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಕೊನೆಯದಾಗಿ ಭೇಟಿಯಾಗುವುದಾಗಿ ಹೇಳಿ ರೇಖಾಳ ಕರೆದ ಸುಮಿತ್, ಕಾರಿನಲ್ಲಿ ಕೂರಿಸಕೊಂಡ ಸೆಕ್ಟರ್ 39ರ ಬಳಿ ಬಂದಿದ್ದಾನೆ. ಬಳಿಕ ರಿವಾಲ್ವರ್ ತೆಗೆದು ಮೊದಲು ರೇಖಾ ಹಣೆಗೆ ಗುಂಡಿಕ್ಕಿದ್ದರೆ, ಬಳಿಕ ತನ್ನ ತಲೆಗೆ ಗುಂಡಿಕ್ಕಿ ದುರಂತ ಅಂತ್ಯ ಕಂಡಿದ್ದಾರೆ.

46
ಮೆಸೇಜ್‌ನಲ್ಲಿ ಸಿಕ್ಕಿತು ಸುಳಿವು

ಸುಮಿತ್ ಕಳುಗಿಸಿದ ಮೆಸೇಜ್‌ನಲ್ಲಿ ಪ್ರೀತಿ, ಮದುವೆ ವಿಚಾರ ಹೇಳಿಕೊಂಡಿದ್ದಾನೆ. ನನ್ನ ನಿರ್ಧಾರಕ್ಕೆ ರೇಖಾ ಕಾರಣ. ಕಳೆದ 15 ವರ್ಷದಿಂದ ನಾವು ಪ್ರೀತಿಸುತ್ತಿದ್ದೇವೆ. ಇದೀಗ ಆಕೆ ಬೇರೆಯೊಬ್ಬನ ಮದುವೆಯಾಗುತ್ತಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಇದು ನನಗೆ ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಬದುಕು ಅಂತ್ಯಗೊಳಿಸುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಆದರೆ ಬದುಕು ಅಂತ್ಯಗೊಳಿಸಲು ಹೋದವ ರೇಖಾಳಿಗೆ ಗುಂಡು ಹೊಡೆದಿದ್ದು ಯಾಕೆ ಎಂಬ ಪ್ರಶ್ನೆಯೂ ಪೊಲೀಸರನ್ನು ಕಾಡುತ್ತಿದೆ.

56
ಶುಕ್ರವಾರದಿಂದ ನಾಪತ್ತೆಯಾಗಿದ್ದ ಜೋಡಿ

ಶುಕ್ರವಾರ ರೇಖಾಳ ಜೊತೆ ಸುಮಿತ್ ಕಾರಿನಲ್ಲಿ ಹೊರಟಿದ್ದಾನೆ. ಶುಕ್ರವಾರ ಇಬ್ಬರು ಮನೆಗೆ ಮರಳಿಲ್ಲ. ಗಾಬರಿಗೊಂಡ ಎರಡು ಮನೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರೆ. ಇತ್ತ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಟವರ್ ಲೋಕೇಶನ್ ಪತ್ತೆ ಹಚ್ಚಿ ಹುಡುಕಿದಾಗ ಕಾರಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ.

66
ಕಾರಿನ ಒಳಗಿಂದ ಲಾಕ್

ಕಾರಿನ ಒಳಗಿನಿಂದ ಲಾಕ್ ಮಾಡಿಕೊಂಡ ಇಬ್ಬರು ದುರಂತ ಅಂತ್ಯಕಂಡಿದ್ದಾರೆ. ಇಬ್ಬರ ತಲೆಯಲ್ಲಿ ಗುಂಡು ಹೊಕ್ಕಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೇಲ್ನೋಟಕ್ಕೆ ಪ್ರೀತಿ ವಿಚಾರದಲ್ಲಿ ಬದುಕು ಅಂತ್ಯಗೊಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories