ಭಾರತದಲ್ಲಿನ ಕೊರೋನಾ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ. ಸಂಕಷ್ಟದಲ್ಲಿರುವ ಭಾರತಕ್ಕೆ ಹಲವು ರಾಷ್ಟ್ರಗಳು ನೆರವು ನೀಡಿದೆ. ಇದೀಗ ರಷ್ಯಾ ತನ್ನ ಭರವಸೆಯಂತೆ ಮೊದಲ ಹಂತದ 1.5 ಲಕ್ಷ ಸ್ಪುಟ್ನಿಕ್ ಡೋಸ್ ಭಾರತ ತಲುಪಿದೆ.
undefined
ಕೊರೋನಾ ಪರಿಸ್ಥಿತಿ ಕೈಮೀರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಎಪ್ರಿಲ್ 28 ರಂದು ಈ ಮಾತುಕತೆ ನಡೆದಿತ್ತು. ಈ ವೇಳೆ ಪುಟಿನ್ ಭಾರತಕ್ಕೆ ತಕ್ಷಣವೇ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
undefined
ಪುಟಿನ್ ಭರವಸೆಯಂತೆ ಮೊದಲ ಹಂತದ ರಷ್ಯಾ ಮೇಡ್ ಕೊರೋನಾ ಲಸಿಕೆ ಸ್ಪುಟ್ನಿಕ್ ಭಾರತ ತಲುಪಿದೆ. ಮೊದಲ ಹಂತದಲ್ಲಿ 1.5 ಲಕ್ಷ ಡೋಸ್ ಲಸಿಕೆ ಹೊತ್ತ ವಿಮಾನ ಭಾರತ ತಲುಪಿದೆ.
undefined
ಜೊತೆಯಾಗಿ ಕೊರೋನಾ ಗೆಲ್ಲೋಣ ಎಂಬ ಸಂದೇಶದೊಂದಿಗೆ ರಷ್ಯಾ ಲಸಿಕೆ ಭಾರತ ತಲುಪಿದೆ. ಹೈದರಾಬಾದ್‌ನ ಡಾ.ರೆಡ್ಡಿ ಲ್ಯಾಬೋರಟರಿ ಈ ಲಸಿಕೆಯನ್ನು ಸ್ವೀಕರಿಸಿದೆ. ಕೆಲ ವಾರಗಳ ಹಿಂದೆ ಭಾರತ ಸ್ಪುಟ್ನಿಕ್ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿತ್ತು.
undefined
ಜೂನ್ ತಿಂಗಳಲ್ಲಿ ಭಾರತ 3 ಮಿಲಿಯನ್ ಸ್ಪುಟ್ನಿಕ್ ಲಸಿಕೆ ಪಡೆಯಲಿದೆ. ಬಳಿಕ ಜುಲೈ ತಿಂಗಳಲ್ಲಿ 10 ಮಿಲಿಯನ್ ಡೊಸೇಜ್ ಪಡೆಯಲಿದೆ. ಈ ಮೂಲಕ ಕೊರೋನಾ ಸಂಕಷ್ಟದಲ್ಲಿರುವ ಭಾರತಕ್ಕೆ ರಷ್ಯಾ ನಿರಂತರ ಬೆಂಬಲ ನೀಡಲಿದೆ.
undefined
ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ಈಗಾಗಲೇ 59 ದೇಶಗಳು ಅನುಮತಿ ನೀಡಿತ್ತು. ಮೂರು ವಾರಗಳ ಹಿಂದೆ ಭಾರತ ಕೂಡ ದೇಶದಲ್ಲಿನ ಕೊರೋನಾ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ತುರ್ತು ಬಳಕೆಗೆ ಸ್ಪುಟ್ನಿಕ್ ಲಸಿಕೆಗೆ ಅನುಮೋದನೆ ನೀಡಿದೆ. ಈ ಮೂಲಕ ಸ್ಪುಟ್ನಿಕ್ ಲಸಿಕೆಗೆ ಅನುಮೋದನೆ ನೀಡಿದ 60ನೇ ರಾಷ್ಟ್ರವಾಗಿದೆ.
undefined