ಭಾರತಕ್ಕೆ ಅಮೆರಿಕದಿಂದ ನೆರವಿನ ಪೂರ: ತುರ್ತು ನೆರವಿನ ವಸ್ತುಗಳೊಂದಿಗೆ ತಲುಪಿದ ಮೊದಲ ವಿಮಾನ

First Published Apr 30, 2021, 10:51 AM IST

ಅಮೆರಿಕದಿಂದ ಹಲವಾರು ತುರ್ತು COVID-19 ಪರಿಹಾರ ಸಾಗಣೆ ವಿಮಾನಗಳಲ್ಲಿ ಮೊದಲನೆಯ ವಿಮಾನ ಭಾರತಕ್ಕೆ ತಲುಪಿದೆ. ಇಲ್ನೋಡಿ ಪೋಟೋಸ್

ಕೋವಿಡ್ -19 ಎರಡನೇ ಅಲೆಯನ್ನು ಎದುರಿಸಲು ಸಹಾಯವಾಗುವಂತೆ ಭಾರತಕ್ಕೆ ಅಮೆರಿಕವು ತುರ್ತು ಅವಶ್ಯಕತೆಯ ವಸ್ತುಗಳನ್ನು ವಿಮಾನದ ಮೂಲಕ ರವಾನೆ ಮಾಡಿದೆ.
undefined
ಅಧ್ಯಕ್ಷ ಜೋ ಬೈಡೆನ್ 2021 ರ ಏಪ್ರಿಲ್ 26 ರಂದು ವಾಗ್ದಾನ ಮಾಡಿದಂತೆ ಅಮೆರಿಕವು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ಮೂಲಕ, ಭಾರತೀಯರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲು, ಜೀವಗಳನ್ನು ಉಳಿಸಲು, COVID-19 ಹರಡುವುದನ್ನು ನಿಲ್ಲಿಸಲು ನೆರವಾಗುತ್ತಿದೆ.
undefined
ಅಮೆರಿಕ ಹಲವಾರು ತುರ್ತು COVID-19 ಪರಿಹಾರ ಸಾಮಗ್ರಿಗಳ ಮೊದಲನೆಯ ಹಂತದ ವಿಮಾನ ಭಾರತಕ್ಕೆ ತಲುಪಿದೆ.
undefined
ಟ್ರಾವಿಸ್ ವಾಯುನೆಲೆಯಿಂದ ವಿಶ್ವದ ಅತಿದೊಡ್ಡ ಸೇನಾ ವಿಮಾನದಲ್ಲಿ ಪರಿಹಾರ ಸಾಮಾಗ್ರಿಗಳು ನವದೆಹಲಿಗೆ ಆಗಮಿಸಿದೆ.
undefined
ಈ ಪರಿಹಾರ ಸಾಮಾಗ್ರಿಗಳಲ್ಲಿ 440 ಆಮ್ಲಜನಕ ಸಿಲಿಂಡರ್‌ಗಳು ಮತ್ತು ನಿಯಂತ್ರಕಗಳು ಸೇರಿವೆ.
undefined
ಇದನ್ನು ಕ್ಯಾಲಿಫೋರ್ನಿಯಾ ರಾಜ್ಯವು ಉದಾರ ದೇಣಿಗೆಯಾಗಿ ನೀಡಿದೆ. ಈ ಮೊದಲ ಹಾರಾಟದಲ್ಲಿ, USAID 960,000 ಕ್ಷಿಪ್ರ ರೋಗನಿರ್ಣಯ ಪರೀಕ್ಷಾ ಕಿಟ್‌ಗಳೂ ಸೇರಿವೆ.
undefined
ಇವು ಸೋಂಕುಗಳನ್ನು ಗುರುತಿಸಲು ಹಾಗೂ COVID-19 ನ ಸಮುದಾಯ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಸಾಂಕ್ರಾಮಿಕದಿಂದ ಭಾರತದ ಮುಂಚೂಣಿ ಆರೋಗ್ಯ ಹೋರಾಟಗಾರರನ್ನು ರಕ್ಷಿಸಲು 100,000 N95 ಮಾಸ್ಕ್‌ ಸೇರಿವೆ.
undefined
ಕೊರೋನಾ ಪ್ರಾರಂಭದಿಂದಲೂ USAID 23 ಮಿಲಿಯನ್ ಡಾಲರ್ ಸಹಾಯವನ್ನು ನೀಡಿದೆ. ಇದು ನೇರವಾಗಿ ಸುಮಾರು 10 ಮಿಲಿಯನ್ ಭಾರತೀಯರನ್ನು ತಲುಪಿದೆ.
undefined
ಪ್ರಾಥಮಿಕ ಆರೋಗ್ಯ ಸೌಲಭ್ಯಗಳಲ್ಲಿ ಬಳಸಲಾಗುವ 1,000 ವೈದ್ಯಕೀಯ ಆಮ್ಲಜನಕ ಸಾಂದ್ರಕಗಳನ್ನು USAID ತ್ವರಿತವಾಗಿ ಕ್ರೋಢೀಕರಿಸುತ್ತಿದೆ. USAID ಕಾರ್ಯಕ್ರಮಗಳು ಜೀವ ಉಳಿಸಲು ಮತ್ತು COVID-19 ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿವೆ.
undefined
ಕಳೆದ ಹಲವಾರು ದಶಕಗಳಿಂದ USAID ಬಾಣಂತಿ ಹಾಗೂ ನವಜಾತ ಶಿಶು ಮರಣ, ಪೋಲಿಯೊ, ಎಚ್ಐವಿ ಮತ್ತು ಕ್ಷಯ ಸೇರಿದಂತೆ ದೇಶದ ಅತ್ಯಂತ ಕ್ಲಿಷ್ಟ ಆರೋಗ್ಯ ಸವಾಲುಗಳನ್ನು ಎದುರಿಸಲು ಭಾರತದೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಿದೆ.
undefined
ಅಮೆರಿಕ 70 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಜನರೊಂದಿಗೆ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡುತ್ತಿದೆ. COVID-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಮೆರಿಕ ಭಾರತದೊಂದಿಗೆ ಒಟ್ಟಾಗಿ ಹೋರಾಡಲಿದೆ.
undefined
ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅಮೆರಿಕನ್ ಆಸ್ಪತ್ರೆಗಳು ತೊಂದರೆಗೊಳಗಾದಾಗ ಭಾರತವು ಅಮೆರಿಕಕ್ಕೆ ಸಹಾಯವನ್ನು ಕಳುಹಿಸಿದಂತೆಯೇ, ಅಮೆರಿಕವು ಈಗ ಭಾರತಕ್ಕೆ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡುತ್ತಿದೆ.
undefined
click me!