New Delhi: ರಾಜ್ಯ ಸಂಸದರ ಜತೆ ಸಿಎಂ ಅಭಿವೃದ್ಧಿ ಚರ್ಚೆ: ದೇವೇಗೌಡ, ಖರ್ಗೆ, ಶೋಭಾ ಮತ್ತಿತರರು ಗೈರು

First Published | Feb 8, 2022, 6:45 AM IST

ನವದೆಹಲಿ(ಫೆ.08):  ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸೋಮವಾರ ರಾಜ್ಯದ ಸಂಸದರ ಜತೆಗೆ ಸಭೆ ನಡೆಸಿದರು. ರಾಜ್ಯದ ನೀರಾವರಿ, ರೈಲ್ವೆ, ನಗರಾಭಿವೃದ್ಧಿ, ಬಂದರು, ರಸ್ತೆ ಯೋಜನೆಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರ(Government of Karnataka) ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ತಾಜ್‌ಮಾನ್‌ಸಿಂಗ್‌ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌(Nirmala Sitharaman), ಪ್ರಹ್ಲಾದ್‌ ಜೋಶಿ(Pralhad Joshi), ಭಗವಂತ ಖೂಬಾ, ರಾಜೀವ್‌ ಚಂದ್ರಶೇಖರ್‌(Rajeev Chandrasekhar), ಸಂಸದರು, ರಾಜ್ಯ ಸರ್ಕಾರದ ಮುಖ್ಯ ಕಾರ‍್ಯದರ್ಶಿ ಪಿ.ರವಿಕುಮಾರ್‌ ಸೇರಿ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೇಂದ್ರದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಯಾವ ವಿಷಯಗಳನ್ನು ಪ್ರಸ್ತಾಪ ಮಾಡಬೇಕೆನ್ನುವ ವಿಚಾರಗಳ ಬಗ್ಗೆ ಸಂಸದರ ಜತೆಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಲಾಯಿತು. ಕೇಂದ್ರದ ಬಜೆಟ್‌ನಲ್ಲಿ(Union Budget) ಘೋಷಣೆಯಾಗಿರುವ ಯೋಜನೆ ಅನುಷ್ಠಾನದ ಬಗ್ಗೆಯೂ ಚರ್ಚೆ ನಡೆಯಿತು ಎಂದು ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ 

Tap to resize

ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ಯೋಜನೆಗಳನ್ನು ಸಂಪೂರ್ಣವಾಗಿ ರಾಜ್ಯಕ್ಕೆ ಒದಗಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ 

4 ಸಾವಿರ ಕೋಟಿ ಸಾಲ ಅಂದಾಜು-ಹಣಕಾಸು ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ 50 ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ ಒಂದು ಲಕ್ಷ ಕೋಟಿ ರು.ಗಳನ್ನು ರಾಜ್ಯಗಳಿಗೆ ಸಾಲದ ರೂಪದಲ್ಲಿ ನೀಡುವ ವಿಚಾರ ಚರ್ಚೆಗೆ ಬಂತು. ಕರ್ನಾಟಕಕ್ಕೆ ಇದರಲ್ಲಿ ಸುಮಾರು 3800 ರಿಂದ 4000 ಕೋಟಿ ರು. ದೊರೆಯಬಹುದೆಂಬ ಅಂದಾಜಿದೆ ಎಂದ ಸಚಿವೆ ನಿರ್ಮಲಾ ಸೀತಾರಾಮನ್‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಸದರ ಸಭೆಗೆ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda) ಸೇರಿ ಕೆಲ ಸಂಸದರು ಗೈರಾಗಿದ್ದರು. ದೇವೇಗೌಡ ಅವರಲ್ಲದೆ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ, ಬಿಜೆಪಿಯ ಶೋಭಾ ಕರಂದ್ಲಾಜೆ, ಶ್ರೀನಿವಾಸ್‌ ಪ್ರಸಾದ್‌, ತೇಜಸ್ವಿ ಸೂರ‍್ಯ ಮತ್ತಿತರರು ಸಭೆಗೆ ಹಾಜರಾಗಿರಲಿಲ್ಲ.

Latest Videos

click me!